
- ಡಾ. ಡಿ.ಸಿ. ರಾಮಚಂದ್ರ , ಶ್ರೀಕ್ಷೇತ್ರ ಆದಿಚುಂಚನಗಿರಿ
ಗಣೇಶ ಹಬ್ಬವನ್ನು ಲೋಕಮಾನ್ಯತಿಲಕರು ಸಾರ್ವಜನಿಕಉತ್ಸವವನ್ನಾಗಿಆಚರಿಸಲುಕರÉ ನೀಡಿದ ಬಳಿಕ ಭಾರತದಾದ್ಯಂತಅದ್ದೂರಿಯಾಗಿಆಚರಿಸಲಾಗುತ್ತದೆ. ಆದರÉಇದಕ್ಕೂ ಮುನ್ನಗೌರಿಗಣೇಶ ಹಬ್ಬಅಥವಾಗೌರಿ ಹಬ್ಬವನ್ನುದಕ್ಷಿಣ ಭಾರತದಲ್ಲಿ ಮಾತ್ರ ವಿಶೇಷವಾಗಿಆಚರಿಸಲಾಗುತ್ತದೆ. ಈ ಹಬ್ಬ ವಿವಾಹಿತ ಸ್ತ್ರೀಯರಿಗÉ ಮೀಸಲಾಗಿದ್ದು ಸಾಮಾನ್ಯವಾಗಿ ಹಿಂದೂಕ್ಯಾಲೆಂಡರ್ ಪ್ರಕಾರ ಭಾದ್ರಪದ ಶುದ್ಧತೃತೀಯ ದಿನದಂದು (ಅಂದರÉ ಭಾದ್ರಪದ ಮಾಸದ ಮೊದಲ ಪಕ್ಷದ ಮೂರನೆಯ ದಿನ) ಆಚರಿಸಲಾಗುತ್ತದೆ. ಗೌರಿ ಹಬ್ಬದ ಮರುದಿನ, ಅಂದರÉ ಭಾದ್ರಪದ ಶುದ್ಧಚತುರ್ಥಿ (ಅಂದರÉ ಭಾದ್ರಪದ ಮಾಸದ ಮೊದಲ ಪಕ್ಷದ ನಾಲ್ಕನೆಯ ದಿನ) ಗಣೇಶ ಹಬ್ಬವನ್ನುಆಚರಿಸಲಾಗುತ್ತದೆ. ಗೌರಿ ಹಬ್ಬವನ್ನು ವಿವಾಹಿತ ಮಹಿಳÉಯರು ಆಚರಿಸುವ ಹಬ್ಬವಾಗಿದ್ದು ಈ ದಿನದಂದುತಮ್ಮ ಪತಿಯರಿಗÉ ಹೆಚ್ಚಿನಆಯಸ್ಸು, ಸಂತಾನಭಾಗ್ಯ ಮತ್ತುಕುಟುಂಬಕ್ಕÉ ಸಮೃದ್ಧಿಯನ್ನು ನೀಡಲೆಂದು ಬೇಡಿಕೊಳ್ಳುತ್ತಾರÉ. ಈ ಹಬ್ಬದಆಚರಣÉ ಮತ್ತು ವಿಧಿವಿಧಾನಗಳು ಹೆಚ್ಚೂ ಕಡಿಮೆ ವರಮಹಾಲಕ್ಷ್ಮಿಯ ಹಬ್ಬದಂತೆಯೇಇದೆ. ಗೌರಿಗಣೇಶ ಹಬ್ಬಆಚರಣÉಯ ಮಹತ್ವವೇನು? ಒಂದೇ ವ್ಯತ್ಯಾಸವೆಂದರÉಅಲ್ಲಿಗೌರಿಯ ಬದಲಿಗÉ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ದಕ್ಷಿಣ ಭಾರತದಾದ್ಯಂತ ವಿವಾಹಿತ ಮಹಿಳÉಯರು ಗೌರಿ ಹಬ್ಬವನ್ನುತಪ್ಪದೇ, ಅತ್ಯಂತ ಸಡಗರ ಮತ್ತು ಸಂಭ್‍ರಮಗಳಿಂದ ಆಚರಿಸುತ್ತಾರÉ
ಗಣೇಶನ ಪೂಜೆಯಲ್ಲಿಗರಿಕೆಗÉ ನೀಡಿರುವ ಸ್ನಾನವೂಗಮನಾರ್ಹಗಣೇಶನಿಗÉಅತ್ಯಂತ ಪ್ರಿಯವಾದ ಪೂಜಾದ್ರವ್ಯವಾಗಿದೆ. ಪ್ರಕೃತಿಯಲ್ಲಿಯಾವುದೂ ಕೀಳಲ್ಲ. ಯಾವುದೂ ವ್ಯರ್ಥವಲ್ಲ, ಎಂಬ ಸಂದೇಶವನ್ನುಇದು ಸಾರುತ್ತದೆ. ಸಣ್ಣ ಹುಲ್ಲಿನಲ್ಲೂದೈವತ್ಯವನ್ನುಕಾಣುವದೃಷ್ಟಿಯೇ ಭಾರತೀಯ ಸಂಸ್ಕøತಿಯ ವೈಶಿಷ್ಟ್ಯ
ಗೌರಿಗಣೇಶ ಹಬ್ಬದ ಹಿಂದಿನ ದಂತಕಥÉ
ಗಣೇಶನ ಹುಟ್ಟಿನ ಬಗ್ಗೆ ವಿವಿಧ ಕಥÉಗಳಿದ್ದರೂ ಹೆಚ್ಚು ಜನಪ್ರಿಯವಾಗಿರುವಕಥÉ ಹೀಗಿದೆ: ಒಮ್ಮೆಕೈಲಾಸದಲ್ಲಿ ಪಾರ್ವತಿಒಂಟಿತನವನ್ನು ಅನುಭವಿಸುತ್ತಿದ್ದಳು. ತನ್ನಒಂಟಿತನವನ್ನು ಕಳÉಯಲು ಮಣ್ಣಿನಿಂದಚಿಕ್ಕ ಬಾಲಕನ ಪ್ರತಿಮೆಯೊಂದನ್ನು ಮಾಡಿಅದಕ್ಕÉಜೀವ ನೀಡಿದಳು. ಈ ಬಾಲಕನಿಗÉ ಗಣೇಶಎಂದು ನಾಮಕರಣ ಮಾಡಿತಾನು ಸ್ನಾನಕ್ಕÉ ಹೋದಾಗತನ್ನ ಸ್ನಾನಗೃಹದ ಬಾಗಿಲನ್ನು ಕಾವಲು ಕಾಯುವಂತೆ ಆಜ್ಞಾಪಿಸಿ ಒಳನಡೆದಳು. ಈ ಸಮಯದಲ್ಲಿ ಕೈಲಾಸಕ್ಕÉ ಆಗಮಿಸಿದ ಶಿವ ಒಳಗಡಿಯಿಡಲು ಯತ್ನಿಸಿದಾಗ ಪಾಲಕ ಗಣೇಶ ಶಿವನನ್ನು ತಡೆಯುತ್ತಾನೆ. ತನ್ನ ಮಗನೇ ಎಂದುಗೊತ್ತಿಲ್ಲದೆಕೋಪಾವಿಷ್ಠನಾದ ಶಿವ ಬಾಲಕನ ರುಂಡವನ್ನು ಸಂಹರಿಸುತ್ತಾನೆ. ಬಳಿಕ ಸ್ನಾನ ಮುಗಿಸಿ ಹೊರಬಂದ ಪಾರ್ವತಿದೇವಿ ತನ್ನ ಮಗನ ಶವವನ್ನುಕಂಡುಅತ್ಯಂತ ದುಃಖಿತಳಾಗುತ್ತಾಳÉ. ಪಾರ್ವತಿಯನ್ನು ಶಾಂತಗೊಳಿಸಲು ಶಿವ ಬಾಲಕನಿಗÉ ಜೀವನೀಡುವ ವಾಗ್‍ದಾನ ನೀಡುತ್ತಾನೆ. ಆದರÉ ಕಳÉದ ರುಂಡ ಸಿಗದೇ ಇರುವಕಾರಣತನ್ನ ಬÉಂಬಲಿಗರಲ್ಲಿಕಾಡಿನಕಡೆಯಿಂದಯಾವ ಪ್ರಾಣಿ ಮೊದಲು ಬಂದಿತೋಅದನ್ನೂಗಣೇಶನಿಗÉಇರಿಸುವುದಾಗಿ ತಿಳಿಸುತ್ತಾನೆ. ಬಳಿಕ ಬಿಳಿಯ ಆನೆಯೊಂದು ಪ್ರಥಮವಾಗಿ ಪ್ರತ್ಯಕ್ಷವಾಗುತ್ತದೆ. ಅಂತೆಯೇಆನೆಯತಲೆಯನ್ನು ಬಾಲಕನ ಮುಂಡಕ್ಕÉ ಜೋಡಿಸಿ ಜೀವ ನೀಡಲಾಗುತ್ತದೆ. ಅಂತೆಯೇಗಣೇಶನ ಮುಂಡ ಮಾನವರಂತಿದ್ದರೂರುಂಡಮಾತ್ರಆನೆಯದ್ದಾದುದರಿಂದಲೇಗಜಮುಖನೆಂಬ ಹೆಸರು ಬಂದಿದೆ. ಗೌರಿ ಹಬ್ಬದ ಸಂಪ್ರದಾಯಗಳು ಈ ಹಬ್ಬದ ದಿನ ವಿವಾಹಿತ ಮಹಿಳÉಯರು ಬÉಳಿಗ್ಗೆಯೇ ಸ್ನಾನ ಮಾಡಿ ಹೊಸ ಮತ್ತು ಬÉಡಗಿನಉಡುಗÉಅಥವಾ ಸೀರÉಗಳನ್ನು ಉಟ್ಟುತಯಾರಾಗುತ್ತಾರÉ. ತಮ್ಮ ಮನೆಯಚಿಕ್ಕ ಹೆಣ್ಣುಮಕ್ಕಳಿಗೂ ಹೊಸ ಹೊಸ ಬಟ್ಟೆ ತೊಡಿಸಿ ಸಿಂಗರಿಸಿ ಸಿದ್ಧಪಡಿಸುತ್ತಾರÉ. ಪ್ರಥಮ ವಿಧಿಯಾಗಿಜಲಗೌರಿಅಥವಾ ಅರಿಶಿನಗೌರಿಗÉ (ಅರಿಶಿನದಿಂದ ಮಾಡಿದಗೌರಿಯ ಮೂರ್ತಿ) ಪೂಜೆಯನ್ನು ಸಲ್ಲಿಸಲಾಗುತ್ತದೆ. ಬಳಿಕ ತಟ್ಟೆಯೊಂದರಲ್ಲಿ ದಾನ್ಯಗಳನ್ನಿರಿಸಿ ಅದರ ಮೇಲೆ ಗೌರಿಯ ಪುಟ್ಟ ವಿಗ್ರಹವನ್ನಿರಿಸಲಾಗುತ್ತದೆ. ಗೌರಿ ಹಬ್ಬದ ಸಂಪ್ರದಾಯಗಳು ಆ ಬಳಿಕ ನಡೆಸುವ ಪೂಜೆಯನ್ನುಅತ್ಯಂತ ಭಕ್ತಿಭಾವ, ಸ್ವಚ್‍ಛತೆ ಮತ್ತು ಮಂತ್ರಪಠಣಗಳಿಂದ ನಡೆಯುತ್ತದೆ. ವಿಗ್ರಹವನ್ನು ಬಾಳÉಕಂಭ ಮತ್ತು ಮಾವಿನ ತಳಿರು ತೋರಣದ ಮಂಟಪವೊಂದು ಸುತ್ತುವರÉದಿರುತ್ತದೆ. ಗೌರಿಯ ಮೂರ್ತಿಯನ್ನೂ ಸುಂದರವಾದ ಹೂವುಗಳು ಮತ್ತು ಹತ್ತಿಯ ಮಾಲೆಯಿಂದಅಲಂಕರಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿವಾಹಿತ ಮಹಿಳÉಯರು ತಮ್ಮ ಮಣಿಕಟ್ಟುಗಳಿಗÉ ಹದಿನಾರು ಗಂಟುಗಳಿರುವ ದಾರವನ್ನು ಕಟ್ಟಿಕೊಳ್ಳುತ್ತಾರÉ. ‘ಗೌರಿದಾರ’ ಎಂದುಕರÉಯಲಾಗುವ ಈ ದಾರದೇವಿಯಅನುಗ್ರಹ ಪಡೆಯಲು ನೆರವಾಗುತ್ತದೆಎಂದುಇವರು ನಂಬುತ್ತಾರÉ. ನಂತರದ ವಿಧಿ ವಿಧಾನ ಪೂಜೆಯ ಬಳಿಕ ವ್ರತವನ್ನು ಪಾಲಿಸುತ್ತಿರುವ ಮಹಿಳÉಯರು ಬಾಗಿನವನ್ನುಅರ್ಪಿಸಲು ಬಾಗಿನದತಯಾರಿಗÉತೊಡಗುತ್ತಾರÉ. ಬಾಗಿನವೆಂದರÉ ಮಹಿಳÉಯ ಸೌಂದರ್ಯ ಪರಿಕರಗಳಾದ ಅರಿಶಿನ, ಕುಂಕುಮ, ಕಪ್ಪು ಬಳÉ, ಕಪ್ಪು ಮಣಿ, ಒಂದು ಬಾಚಣಿಗÉ, ಒಂದುಚಿಕ್ಕಕನ್ನಡಿ, ಹಾಗು ಒಂದುತೆಂಗಿನಕಾಯಿ, ರವಿಕೆಯ ಬಟ್ಟೆ, ವಿವಿಧ ಧಾನ್ಯಗಳು, ಅಕ್ಕಿ, ಬೇಳÉ, ಗೋಧಿ ಮತ್ತು ಬÉಲ್ಲವನ್ನು ಒಳಗೊಂಡಿರುವ ದೊಡ್ಡ ಹರಿವಾಣವಾಗಿದೆ. ವ್ರತವನ್ನುಆಚರಿಸುವಓರ್ವ ಮಹಿಳÉಗÉ ಇಂತಹಐದು ಬಾಗಿನಗಳ ಅಗತ್ಯವಿದೆ. ಗೌರಿ ಹಬ್ಬದ ಮಹತ್ವ ಈ ಹಬ್ಬದ ದಿನದಂದುಗೌರಿದೇವತೆಯನ್ನು ಭಕ್ತಿಭಾವದಿಂದ ಪೂಜಿಸಲಾಗುತ್ತದೆದೇವಿಯರಲ್ಲಿಯೇಅತಿ ಶಕ್ತಿಶಾಲಿಯಾದ ಆದಿಶಕ್ತಿಯಅವತಾರವೆಂದು ನಂಬಲಾಗಿರುವಗೌರಿದೇವಿಯನ್ನು ಭಕ್ತಿಭಾವದಿಂದಆರಾಧಿಸುವ ಮೂಲಕ ದೇವಿಯಅನುಗ್ರಹವನ್ನು ಪಡೆಯಬಹುದುಎಂದು ನಂಬಲಾಗಿದೆ. ತನ್ನ ಭಕ್ತರಿಗÉಧೈರ್ಯ ಮತ್ತುಅತೀವವಾದ ಸ್ಥೈರ್ಯವನ್ನು ನೀಡುವ ಮೂಲಕ ತನ್ನ ಭಕ್ತರನ್ನು ಸಬಲರನ್ನಾಗಿ ಮಾಡುವಳÉಂದು ಭಕ್ತರು ನಂಬುತ್ತಾರÉ.
