ರೋಟರಿ ಸಂಸ್ಥೆಯಿಂದ ಶಿಕ್ಷಕರಿಗೆ ಗೌರವ ಸಮರ್ಪಣೆ ಅತ್ಯಂತ ಪವಿತ್ರ : ಎ.ಜಿ.ಜಯರಾಮು

  • 9 ಮಂದಿ ಶಿಕ್ಷಕಕರಿಗೆ ರೋಟರಿ ಉತ್ತಮ ಪ್ರಶಸ್ತಿ ಪ್ರದಾನ, ನಿವೃತ್ತಿ ಶಿಕ್ಷಕಿ ಗೀತಾಗೆ ಸನ್ಮಾನ

ಚಾಮರಾಜನಗರ :  ಸಮಾಜ ಜ್ಞಾನದ ಬೆಳಕನ್ನು ನೀಡುವ, ಉತ್ತಮ ಪ್ರಜೆಗಳನ್ನು ರೂಪಿಸುವ ಗುರುಗಳನ್ನು ರೋಟರಿ ಸಂಸ್ಥೆಯು ಗುರುತಿಸಿ ಅವರನ್ನು ಗೌರವಿಸಿ ಸತ್ಕರಿಸುವುದು ಅತ್ಯಂತ ಪವಿತ್ರವಾದ ಕೆಲಸವಾಗಿದೆ ಎಂದು ಸನ್ಮಾರ್ಗ ಸಂಸ್ಥೆ ಅಧ್ಯಕ್ಷ ಎ.ಜಿ.ಜಯರಾಮು ಹೇಳಿದರು.

ನಗರದ ರೋಟರಿ ಭವನದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ರೋಟರಿ ಸಂಸ್ಥೆಯು ಎರಡು ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಅದು ಆರೋಗ್ಯ ಮತ್ತು ಶಿಕ್ಷಣ ಮನುಷ್ಯನಿಗೆ ಅತ್ಯಂತ ಪ್ರಮುಖ ಅವಶ್ಯಕ ಇವಾಗಿದೆ. ಒಳ್ಳೆಯ ಆರೋಗ್ಯ ಇರಬೇಕು. ಸಮಾಜಕ್ಕೆ ಉತ್ತಮ ವ್ಯಕ್ತಿಯಾಗಬೇಕಾದರೆ ಒಳ್ಳೆಯ ಶಿಕ್ಷಣ ಸಿಗಬೇಕು. ಈ ಎರಡು ಪ್ರಮುಖ ಕ್ಷೇತ್ರಗಳನ್ನು ಗುರುತಿಸಿ ತಾವು ದುಡಿದಂತಹ,… ದಾನಿಗಳಿಂದ ಸಂಗ್ರಹಿಸಿದಂತಹ ಒಂದು ಹಣದಿಂದ ಈ ಎರಡು ಕ್ಷೇತ್ರದಲ್ಲೂ ಅತುತ್ತಮ ಸೇವೆ ನೀಡುತ್ತಿರುವ ರೋಟರಿ ಸಂಸ್ಥೆಯನ್ನು ನಾವೆಲ್ಲರೂ ಹೃದಯಪೂರ್ವಕವಾಗಿ ಅಭಿನಂದಿಸಬೇಕಾಗುತ್ತದೆ ಎಂದರು.

ಬ್ರಹ್ಮ, ವಿಷ್ಣು, ಮಹೇಶ್ವರ ಅವರನ್ನು ಗುರುಗಳಿಗೆ ಹೊಲಿಸುತ್ತಾರೆ. ಯಾವುದೇ ಹುಟ್ಟಿನ ಹಿಂದೆ ಗುರುಗಳ ಪಾತ್ರ ಇದೆ. ಅದು ಹೊಸ ಚಿಂತನೆ, ವಸ್ತುವಿನ ಹುಟ್ಟು ಆಗಬಹುದು. ಹೊಸ ವ್ಯವಸ್ಥೆ ಹುಟ್ಟು ಆಗಬಹುದು. ಹುಟ್ಟಿಹಿಂದೆ ಗುರು ಇರುತ್ತಾರೆ. ಅದಕ್ಕಾಗಿ ಗುರುವನ್ನು ಗುರು.ಬ್ರಹ್ಮ, ಮಹೇಶ್ವರಿಗೆ ಎಂದು ಕರೆಯುತ್ತಾರೆ ಎಂದರು.

ಪ್ರಸುತ ಸಮಾಜದಲ್ಲಿ ತಾನು ತನ್ನ ಕುಟುಂಬ, ಸಂಬಂಧಿಕರು ಅನ್ನುವ ಸಂದರ್ಭದಲ್ಲಿ ರೋಟರಿ ಸಂಸ್ಥೆ ಎಲ್ಲ ವನ್ನೂ ಮೀರಿ ದೇಶ ನಾಗರಿಕ ಸಮಾಜ ಇಂತಹ ಸಮಾಜಕ್ಕೆ ಸೇವೆ ಸಲ್ಲಿಸುವುದು ಒಂದು… ವಿಶೇಷವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಬ್ದುಲ್‌ಅಜೀಜ್ ದೀನಾ ಮಾತನಾಡಿ, ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸುವ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು… ಪ್ರತಿವರ್ಷದಂತೆ ವರ್ಷದಂತೆ ಈ ವರ್ಷವು ರೋಟರಿ ಸಂಸ್ಥೆಯು ಉತ್ತಮ ಶಿಕ್ಷಕರನ್ನು ಗುರುತಿಸಿ ರೋಟರಿ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ಎಂ.ಡಿ.ಮಹದೇವಯ್ಯ ಮಾತನಾಡಿ ಶಿಕ್ಷಕರ ಸೇವೆಯನ್ನು ಗುರುತಿಸಿ ರೋಟರಿ ಸಂಸ್ಥೆಯು 9 ಶಿಕ್ಷಕರಿಗೆ ರೋಟರಿ ಉತ್ತಮ ಪ್ರಶಸ್ತಿ ನೀಡಿ ಸನ್ಮಾನಿಸಿರುವುದು ತುಂಬಾ ಖುಷಿಯಾಗಿದ್ದು, ಈ ಪ್ರಶಸ್ತಿಯು ನಮ್ಮ ಮತ್ತಷ್ಟು ಜವಾಬ್ದಾರಿ ಹೆಚ್ಚು ಮಾಡಿದೆ. ತಮ್ಮನ್ನು ಗುರುತಿಸಿದ ಪ್ರಸತಿ ಸಂಸ್ಥೆಗೆ ಎಂದ ಅಬಾರಿಯಾಗಿರುತ್ತೆನೆ ಎಂದರು. ನೀಡಿದ ರೋಟರಿ ಎಂದೆಂದಿಗೂರೋಟರಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ : ಶಿಕ್ಷಕರಾದ ಎಲ್.ರವಿ, ಸೋಮಣ್ಣ, ಹೆಚ್.ವಿ.ಮಹದೇವಮ್ಮ, ಎಂ.ಡಿ.ಮಹದೇವಯ್ಯ, ಕುಮಾರ್, ಸುನೀತ, ಮಹದೇವಮ್ಮ, ಯಾಸಿನ್ ಪರ್ವಿನ್, ಮಲ್ಲಶೆಟ್ಟಿ ಅವರಿಗೆ ರೋಟರಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭ ನಿವೃತ್ತ ಶಿಕ್ಷಕಿ ಗೀತ ಅವರನ್ನು ಸನ್ಮಾನಿಸಲಾಯಿತು. ಹಾಗೂ ರೋಟರಿ ಸದಸ್ಯರಾದ ನೇಮಿರಾಜ್, ಮಹದೇವಸ್ವಾಮಿ, ಭವಾವಿದೇವಿ, ಮಹದೇವಮೂರ್ತಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥಾಪಕ ಸದಸ್ಯರಾದ ಜಿ.ಆರ್.ಅಶ್ವಥ್ ನಾರಾಯಣ್, ಸಿ.ವಿ.ಶ್ರೀನಿವಾಸಶೆಟ್ಟಿ , ಪಿಡಿಜಿ ನಾಗಾರ್ಜುನ, ಖಜಾಂಚಿ ಆರ್.ಎಂ.ಸ್ವಾಮಿ
ಕಾರ್ಯದರ್ಶಿ ಅಂಕಶೆಟ್ಟಿ, ಎಂ. ಕಮಲ್ ರಾಜು, ಸಿ.ಎ.ನಾರಾಯಣ್ ಪದಾಧಿಕಾರಿಗಳು ಹಾಜರಿದ್ದರು

Leave a Reply

Your email address will not be published. Required fields are marked *