ಅಂತರಾಷ್ಟ್ರೀಯ ಭೌದ್ಧ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ : ಶಾಸಕ ಹೆಚ್.ಎಂ.ಗಣೇಶ್‌ಪ್ರಸಾದ್

  • ಹೆಗ್ಗವಾಡಿಯಲ್ಲಿ ಹರವೆ ಹೋಬಳಿ ಮಟ್ಟದ ಧಮ್ಮ ಪಯಣ ಜಾಥಕ್ಕೆ ಚಾಲನೆ

ಚಾಮರಾಜನಗರ : ಅಂತಾರಾಷ್ಟ್ರೀಯ ಭೌದ್ಧ ಸಮ್ಮೇಳನ ಒಂದು ಐತಿಹಾಸಿಕ ಸಮಾವೇಶವಾಗಿದ್ದು, ಅದರ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಹೆಚ್.ಎಂ.ಗಣೇಶಪ್ರಸಾದ್ ಹೇಳಿದರು.

ಅಂತರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನ ಆಚರಣಾ ಸಮಿತಿ, ಬಿಕ್ಕುಸಂಘ, ಭಾರತೀಯ ಬೌದ್ಧ ಮಹಾಸಭಾವು ಅಂತರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನ ಅಂಗವಾಗಿ ಅಯೋಜಿಸಿರುವ ಧಮ್ಮ ಪಯಣ ಜಾಗೃತಿ ಜಾಥ ಟ್ಯಾಬ್ಲೊಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿ ಮಾತನಾಡಿದರು.

ಅಕ್ಟೋಬರ್ 24 ಮತ್ತು 25 ರಂದು ಚಾಮರಾಜನಗರ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ  ಬೌದ್ಧ ಸಮ್ಮೇಳನ ನಡೆಯಲಿದ್ದು, ಇದೊಂದು ಐತಿಹಾಸಿಕ ಸಮ್ಮೇಳನವಾಗಲಿದ್ದು, ಅಂತಾರಾಷ್ಟ್ರೀಯ ಮಟ್ಟದಿಂದ ಗಣ್ಯರು ಭಾಗವಹಿಸಲಿದ್ದಾರೆ. ರಾಜ್ಯದಿಂದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸಚಿವರು, ಬೌದ್ಧಬಿಕ್ಕುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ಈ ಸಮ್ಮೇಳನಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಶಾಸಕರು ತಿಳಿಸಿದರು.

ಕೊಳ್ಳೇಗಾಲ ಕ್ಷೇತ್ರದ ಶಾಸಕರು, ಅಂತರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನ ಆಚರಣಾ ಸಮಿತಿ ಅಧ್ಯಕ್ಷ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಕಳೆದ ವರ್ಷ ಮೈಸೂರಿನಲ್ಲಿ ಬಹಳ ಯಶಸ್ಸಿನ ಅಂತರಾಷ್ಟ್ರೀಯ ಬೌದ್ಧ ಸಮ್ಮೇಳನ ಆಗಿತ್ತು. ಅಂದಿನ ಅಯೋಜಕರು ತೀರ್ಮಾನಿಸಿ ನಮ್ಮ ಜಿಲ್ಲೆಗೆ ಹಸ್ತಾಂತರ ಮಾಡಿದರು. ಅದರಂತೆ ಅ.24 ಮತ್ತು 25 ರಂದು ಎರಡು ದಿನಗಳ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸಂಬಂಧವಾಗಿ ಜಿಲ್ಲೆಯ ಪ್ರತಿ ಹಳ್ಳಿಹಳ್ಳಿಯಲ್ಲೂ ಧಮ್ಮ ಪಯಣ ಸಂಚರಿಸಿ ಅರಿವು ಮೂಡಿಸುತ್ತಿದೆ ಎಂದರು.

ಈ ಐತಿಹಾಸಿಕ ಬೌದ್ಧ ಸಮ್ಮೇಳನ ಯಶಸ್ವಿಗೆ ಹರವೆ ಹೋಬಳಿ ಗ್ರಾಮಸ್ಥರು ತಮ್ಮ ತನು.ಮನ, ಧನವನ್ನು ಅರ್ಪಿಸುವ ಮೂಲಕ ಕುಟುಂಬ ಸಮೇತರಾಗಿ ಭಾಗವಹಿಸಿ ಧಮ್ಮರಥವನ್ನು ಮುನ್ನಡೆಸಲು ಪ್ರಬುದ್ಧ ಭಾರತವನ್ನು ನಿರ್ಮಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಂಜನಗೂಡು ಶಾಸಕ ದರ್ಶನ್‌ಧ್ರುವನಾರಾಯಣ್ ಮಾತನಾಡಿ, ನಮ್ಮ ತಂದೆ ಧ್ರುವನಾರಾಯಣ್ ಅವರು ಚಾಮರಾಜನಗರ ಜಿಲ್ಲೆಯಲ್ಲಿ ನಳಂದ ವಿಶ್ವವಿದ್ಯಾನಿಲಯ ನಿರ್ಮಾಣ ಮಾಡಿದ್ದು ಅದು ಕಾರ್ಯರೂಪಕ್ಕೆ ಬಂದಿದ್ದು ಸುತ್ತುಗೋಡೆ, ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಇದಕ್ಕೆ… ಅನುದಾನ ಬಿಡುಗಡೆ ಮಾಡಿಕೊಡಬೇಕು ಎಂದು ಸಮ್ಮೇಳನದಲ್ಲಿ ಭಾಗವಹಿಸುವ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು, ಸಚಿವರಲ್ಲಿ ಮನವಿ ಮಾಡಿಕೊಳ್ಳಲಾಗುವುದು. ಸಮ್ಮೇಳನ ಯಶಸ್ವಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಬಂತೇಜಿ ಸಾನಿಧ್ಯ ವಹಿಸಿದ್ದರು.ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಜಿಲ್ಲಾ ಸಂಚಾಲಕ ವೆಂಕರಮಣಸ್ವಾಮಿ ಪಾಪು, ಪ್ರಚಾರ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿದರು.

ಬಿಎಸ್‌ಐ ಜಿಲ್ಲಾಧ್ಯಕ್ಷ ಬಸವರಾಜು, ಮಾಜಿ ತಾಲೂಕು ಪಂಚಾಯತಿ ಸದಸ್ಯ ಮುಕ್ಕಡಹಳ್ಳಿ ರವಿಕುಮಾರ್, ಜಿ.ಪಂ.ಮಾಜಿ ಸದಸ್ಯ ಕೆರೆಹಳ್ಳಿ ನವೀನ್, ಮುಖಂಡರಾದ ಮೂಡ್ನಾಕೂಡು ಪ್ರಕಾಶ್,ಹೊಸಳ್ಳಿ ಮಧುಸೂದನ್, ಹೆಗ್ಗವಾಡಿ ಕೆಂಪರಾಜು, ಕೆರೆಹಳ್ಳಿ ಮಹದೇವಸ್ವಾಮಿ, ಸಾಹಿತಿಗಳಾದ ಮಂಜು ಕೋಡಿಉಗನೆ, ಸೋಮಶೇಖರ್ ಬಿಸಲವಾಡಿ, ಮುಖಂಡರಾದ , ಅಜಯ್ ಶಂಭು, ಯಜಮಾನ ಚಿನ್ನಸ್ವಾಮಿ, ರಾಜಕುಮಾರ್, ಕೆರೆಹಳ್ಳಿ ರೇವಣ್ಣ, ಕುಲಗಾಣ ಸ್ವಾಮಿ, ಹೆಗ್ಗವಾಡಿ ನಂದೀಶ್, ಜಯಪ್ರಕಾಶ್, ಲಾಲಿಂಗಸ್ವಾಮಿ ನಾಗರತ್ನ ಕೆಂಗಾಕಿ, ಶಂಕರ್ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *