ಶೂನ್ಯ ಶಕ್ತಿಯ ಶೀತಲೀಕರಣ ಕೊಠಡಿ ಕುರಿತು ಪ್ರಾತ್ಯಕ್ಷಿಕೆ

ಚಾಮರಾಜನಗರ : ಮಂಡ್ಯ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಅಧೀನದ ಚಾಮರಾಜನಗರ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್ಸಿ. (ಕೃಷಿ) ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ  2026–27ರ ಅಂಗವಾಗಿ ಉಮ್ಮತ್ತೂರು ಗ್ರಾಮದಲ್ಲಿ ರೈತರಿಗೆ ಶೂನ್ಯ ಶಕ್ತಿಯ ಶೀತಲೀಕರಣ ಕೊಠಡಿ ಕುರಿತು ಪ್ರಾತ್ಯಕ್ಷಿಕೆ ನಡೆಸಿದರು.
ವಿದ್ಯಾರ್ಥಿಗಳಾದ ಮುತ್ತಪ್ಪ ಮತ್ತು ಮಹೇಶ್ ಅವರು ಜೆಡ್ ಇ ಸಿಸಿಯ ನಿರ್ಮಾಣ ವಿಧಾನ, ಉಪಯೋಗಗಳು ಹಾಗೂ ಪ್ರಯೋಜನಗಳನ್ನು ರೈತರಿಗೆ ವಿವರಿಸಿದರು. ಇಟ್ಟಿಗೆ, ಮರಳು ಮತ್ತು ನೀರಿನ ಆವಿಯಾಗುವಿಕೆಯ ತಂಪು ಪರಿಣಾಮದ ಮೂಲಕ ವಿದ್ಯುತ್‌ ಬಳಕೆಯಿಲ್ಲದೆ ಹಣ್ಣು ಮತ್ತು ತರಕಾರಿಗಳನ್ನು ತಾಜಾವಾಗಿ ಸಂರಕ್ಷಿಸಲು ಜೆಡ್ ಇ ಸಿಸಿ ಸಹಕಾರಿಯಾಗಿದೆ ಎಂದು ತಿಳಿಸಿದರು.
ಕಡಿಮೆ ವೆಚ್ಚ, ಸರಳ ನಿರ್ಮಾಣ, ಕಡಿಮೆ ನಿರ್ವಹಣೆ ಹಾಗೂ ಕೊಯ್ಲಿನ ನಂತರದ ನಷ್ಟವನ್ನು ಕಡಿಮೆ ಮಾಡುವಲ್ಲಿ ಜೆಡ್ ಇಸಿಸಿ ಮಹತ್ವವನ್ನು ವಿದ್ಯಾರ್ಥಿಗಳು ವಿವರಿಸಿದರು. ರೈತರು ಸಕ್ರಿಯವಾಗಿ ಭಾಗವಹಿಸಿ ತಮ್ಮ ಪ್ರಶ್ನೆ ಹಾಗೂ ಸಂದೇಹಗಳನ್ನು ಕೇಳಿ, ವಿದ್ಯಾರ್ಥಿಗಳಿಂದ ಪರಿಹಾರ ಪಡೆದರು.
ಕಾರ್ಯಕ್ರಮವು ರೈತರಿಗೆ ಉಪಯುಕ್ತ ಹಾಗೂ ಯಶಸ್ವಿಯಾಗಿ ನಡೆಯಿತು.

Leave a Reply

Your email address will not be published. Required fields are marked *