ಉಮ್ಮತ್ತೂರಿನಲ್ಲಿ ಗ್ರಾಮೀಣ ಕಾರ್ಯಾನುಭವ ಶಿಬಿರ ಉದ್ಘಾಟಿಸಿದ ಚಿತ್ರನಟ ಉಮ್ಮತ್ತೂರು ಬಸವರಾಜು
ಚಾಮರಾಜನಗರ : ಕೃಷಿ ಸ್ಪಂದನ ಮಾಹಿತಿ ಕೇಂದ್ರವು ರೈತಬಾಂಧವರಿಗೆ ಅತ್ಯಂತ ಉಪಯುಕ್ತ ವೇದಿಕೆಯಾಗಿದೆ ಎಂದು ಕೃಷಿ ವಿಸ್ತರಣಾ ವಿಭಾಗದ ಪ್ರಾಧ್ಯಾಪಕರು, ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರದ ಸಂಯೋಜಕ ಡಾ.ಜಿ.ನಾಗೇಶ್ ಹೇಳಿದರು. ತಾಲ್ಲೂಕಿನ ಉಮ್ಮತ್ತೂರು ಸರ್ಕಾರಿ ಶಾಲೆಯಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮಂಡ್ಯ, ಕೃಷಿ ಮಹಾವಿದ್ಯಾಲಯ ಚಾಮರಾಜನಗರ ಐಸಿಎಆರ್‌ನ ನ್ಯೂಡೆಂಟ್ ರೆಡಿ ಯೋಜನೆಯಡಿಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2026-27ನೇ ಕೃಷಿ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ,
ಇದು ರೈತರಿಗೆ ಕೃಷಿ ಸಂಬಂಧಿತ ಮಾಹಿತಿ, ತಾಂತ್ರಿಕ ನೆರವು ಮತ್ತು ಸರ್ಕಾರದ ಯೋಜನೆಗಳ ವಿವರಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಬೆಳೆ ಪದ್ಧತಿ, ರೋಗ ನಿಯಂತ್ರಣ ಮತ್ತು ಮಣ್ಣಿನ ಆರೋಗ್ಯದ ಬಗ್ಗೆ ತಜ್ಞರಿಂದ ಉಚಿತ ಮಾರ್ಗದರ್ಶನ ಸಿಗುತ್ತದೆ. ಸಬ್ಸಿಡಿಗಳು, ಬಿತ್ತನೆ ಬೀಜ ವಿತರಣೆ ಮತ್ತು ಕೃಷಿ ಯಂತ್ರೋಪಕರಣಗಳ ಬಾಡಿಗೆ ಯೋಜನೆಗಳ ವಿವರಗಳು ಲಭ್ಯವಿರುತ್ತವೆ.ಸಕಾಲದಲ್ಲಿ ಮಳೆ ಮತ್ತು ಹವಾಮಾನದ ಮುನ್ಸೂಚನೆ ನೀಡಿ ಬೆಳೆ ರಕ್ಷಣೆಗೆ ಸಹಕರಿಸುತ್ತದೆ. ದಿನನಿತ್ಯದ ಮಾರುಕಟ್ಟೆ ದರಗಳನ್ನು ತಿಳಿಸುವ ಮೂಲಕ ರೈತರು ತಮ್ಮ ಬೆಳೆಗೆ ಉತ್ತಮ ಬೆಲೆ ಪಡೆಯಲು ನೆರವಾಗುತ್ತದೆ.
ರೈತರಿಗೆ ಸರಿಯಾದ ಮಾಹಿತಿ ಇಲ್ಲದಿದ್ದಾಗ ಕೃಷಿಯಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಆಗಾಗಿ ರೈತಭಾಂಧವರಿಗೆ ಮಾಹಿತಿ ನೀಡುವ ಸಲುವಾಗಿ ವಿದ್ಯಾರ್ಥಿಗಳು ಎಲ್ಲವೂ ಒಂದು ಸೂರಿನಡಿಯಲ್ಲಿ ಭೂಮಿ ಸಿದ್ದತೆ ಮಾಡುವುದರಿಂದ ಹಿಡಿದು. ಬೆಳೆ ಕಟಾವು ಮಾಡುವ ತನಕ ರೈತರು ಆನುಸರಿಸುವ ಎಲ್ಲ ಕ್ರಮಗಳ ವೈಜ್ಞಾನಿಕ ವಿಧಗಳನ್ನು ಕೃಷಿ ಸ್ಪಂದನ ಮಾಹಿತಿ ಕೇಂದ್ರದಲ್ಲಿ ಮಾಡಲಾಗಿದೆ ಇದು ರೈತರಿಗೆ ಅನುಕೂಲವಾಗಿದೆ. ಆಗಾಗಿ ರೈತಭಾಂಧವರಿಗೆ ಒಂದು ಸುವರ್ಣಾವಕಾಶವಾಗಿದೆ’ ಎಂದರು.
ವಿದ್ಯಾರ್ಥಿಗಳು ೭೦ ದಿನಗಳ ಕಾಲ ಗ್ರಾಮದಲ್ಲೇ ವಾಸ್ತವ್ಯ ಹೂಡಿ ರೈತರ ಜಮೀನುಗಳಿಗೆ ಭೇಟಿ ನೀಡಿ ಕೃಷಿ ಸಮಸ್ಯೆಗಳನ್ನು ಅಧ್ಯಯನ ಮಾಡುವುದರ ಜತೆಗೆ ವೈಜ್ಞಾನಿಕ
ನಿಕ ಕೃಷಿ ತಂತ್ರಜ್ಞಾನಗಳನ್ನು ಪರಿಚಯಿಸಲಿದ್ದಾರೆ. ಗ್ರಾಮಸ್ಥರು ಹಾಗೂ ರೈತರು ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ಮತ್ತು ಸಹಕಾರ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಕಲಾವಿದ ಉಮ್ಮತ್ತೂರು ಬಸವರಾಜು ಮಾತನಾಡಿ, ಕೃಷಿ ವಿದ್ಯಾರ್ಥಿಗಳು ಆಯೋಜಿಸಿರುವ ಗ್ರಾಮೀಣ ಕಾರ್ಯಾನುಭವ ಶಿಬಿರ ಗ್ರಾಮದ ರೈಕರಿಗೆ ಬಹಳ ಉಪಯುಕ್ತವಾಗಿದೆ. ಗ್ರಾಮಸ್ಥರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತೋಟಗಾರಿಕಾ ವಿಭಾಗದ ಸಹಪ್ರಾಧ್ಯಾಪಕ ಡಾ.ದೇವರಾಜ್, ಕೆವಿಕೆ ವಿಜ್ಞಾನಿ ಡಾ. ಚಂದ್ರಶೇಖರ್ ಎಸ್.ಕಳ್ಳಿಮನಿ, ಸಹಾಯಕ ವಿದ್ಯಾರ್ಥಿ ಕಲ್ಯಾಣ ವಿರ್ದೇಶಕ ಡಾ.ಶರಣಪ್ಪ, ಸಹಾಯಕ ಪ್ರಾಧ್ಯಾಪಕ ವಿದ್ಯಾನಂದ, ರೈತ ಮುಖಂಡ ರೈತ ಮುಖಂಡರಾದ ಪ್ರಭುಸ್ವಾಮಿ, ಮಹೇಂದ್ರ, ನವೀನ್ ವಿದ್ಯಾರ್ಥಿಗಳು ಹಾಜರಿದ್ದರು.
