- ಬೆಳಿಗ್ಗೆಯಿಂದ ಸಂಜೆತನಕ ನಿರಂತರ ಸೇವಾ ಕಾರ್ಯ
- ನಗರದ ಕೊಳದ ಗಣಪತಿ, ಚಾಮರಾಜೇಶ್ವರ, ಬಿಳಿಗಿರಿರಂಗಸ್ವಾಮಿಗೆ ವಿಶೇಷಪೂಜೆ, ಅನ್ನಸಂತರ್ಪಣೆ,
- 50 ಮಂದಿ ಬಡವರಿಗೆ ಪುಡ್ ಕಿಡ್ ವಿತರಣೆ




ಚಾಮರಾಜನಗರ: ವಿವಿಧ ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಕಿಚ್ಚಸುದೀಪ್ ಹುಟ್ಟುಹಬ್ಬವನ್ನು ನಗರದಲ್ಲಿ ಅಭಿಮಾನಿಗಳು ಅರ್ಥಪೂರ್ ವಾಗಿ ಆಚರಣೆ ಮಾಡಿದರು.
ಕನ್ನಡ ಚಿತ್ರರಂಗದ ನಟ ಕಿಚ್ಚು ಸುದೀಪ್ ಅವರ ಹುಟ್ಟುಹಬ್ಬ ಅಂಗವಾಗಿ ಚಾಮರಾಜನಗರ ಜಿಲ್ಲಾ ಆಲ್ ಇಂಡಿಯಾ ಬಾದ್‌ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ವತಿಯಿಂದ
ಮೊದಲಿಗೆ ಕೊಳದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಸುದೀಪ್ ಭಾವಚಿತ್ರ ಹಿಡಿದು ವಿಶೇಷ ಪೂಜೆ ಸಲ್ಲಿಸಲಾಯಿತು.
ಸಂತೇಮರಳ್ಳಿ ವೃತ್ತದಲ್ಲಿ ಅನ್ನಸಂತರ್ಪಣೆ ಮಾಡಲಾಯಿತು.ಬಡ 50 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಭೋಗಾಪುರ ಗ್ರಾಮದ ಅಂಧಮಕ್ಕಳ ಆಶ್ರಮಕ್ಕೆ ಊಟದ ವ್ಯವಸ್ಥೆ ಮಾಡಲಾಯಿತು. ಶ್ರೀ ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತಾಧಿಗಳಿಗೂ ಊಟದ ವ್ಯವಸ್ಥೆ ಮಾಡುವ ಮೂಲಕ ಬಹಳ ಅರ್ಥಪೂರ್ಣವಾಗಿ ಕಿಚ್ಚುಸುದೀಪ್ ಹುಟ್ಟುಹಬ್ಬ ಆಚರಿಸಲಾಯಿತು.
ಕಾರ್ಯಕ್ರಮ ನೇತ್ರತ್ವ ವಹಿಸಿದ್ದ ಚಾಮರಾಜನಗರ ಜಿಲ್ಲಾ ಆಲ್ ಇಂಡಿಯಾ ಬಾದ್‌ಷಾ,
ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎಸ್. ನಾಗೇಂದ್ರ ಮಾತನಾಡಿ, ಕಿಚ್ಚು ಸುದೀಪ್ ಅಣ್ಣನವರ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ. ಅದಕ್ಕಾಗಿ ನಾವು ಅವರ ಹುಟ್ಟುಹಬ್ಬವನ್ನು ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗಿದ್ದು, ಬೆಳಿಗ್ಗೆ ಕೊಳದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂತೇಮರಳ್ಳಿ ವೃತ್ತದಲ್ಲಿ ಅನ್ನಸಂತರ್ಪಣೆ ಮಾಡಲಾಯಿತು.ಬಡ 50 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಭೋಗಾಪುರ ಗ್ರಾಮದ ಅಂಧಮಕ್ಕಳ ಆಶ್ರಮಕ್ಕೆ ಊಟದ ವ್ಯವಸ್ಥೆ ಮಾಡಲಾಯಿತು. ಶ್ರೀ ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತಾಧಿಗಳಿಗೂ ಊಟದ ವ್ಯವಸ್ಥೆ ಮಾಡುವ ಮೂಲಕ ಕಿಚ್ಚುಸುದೀಪ್ ಹುಟ್ಟುಹಬ್ಬವನ್ನು
ಆಚರಿಸಲಾಯಿತು. ಭಗವಂತ ಅವರಿಗೆ ಹೆಚ್ಚಿನ ಆರೋಗ್ಯ, ಆಯಸ್ಸು ಕರುಣಿಸಿ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವಂತಾಗಲಿ ಎಂದು ಪ್ರಾರ್ಥಿಸಿದರು.
ನಗರಸಭಾ ಮಾಜಿ ಸದಸ್ಯ ಶಿವರಾಜ್ ಮಾತನಾಡಿ, ಕನ್ನಡ ಚಿತ್ರರಂಗದ ದೊಡ್ಡಮಟ್ಟದಲ್ಲಿ ಹೆಸರುಗಳಿಸಿರುವ ಕಿಚ್ಚಸುದೀಪ್ ಅವರು ಭಾರತೀಯ ಚಿತ್ರರಂಗದಲ್ಲೂ ಉನ್ನತ ಮಟ್ಟದಲ್ಲಿ ಬೆಳೆಯಲಿ ಅವರ ಹುಟ್ಟುಹಬ್ಬ ಅಂಗವಾಗಿ ಅವರ ಅಭಿಮಾನಿ ಬಳಗವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆ ಆಗಿದೆ. ಸುದೀಪ್ ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಆಲ್ ಇಂಡಿಯಾ ಬಾದ್‌ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ನ ಆನಂದ್, ಚಂದ್ರು, ಸತೀಶ್, ಉಲ್ಲಾಸ್, ರವಿ, ಸಂತೋಷ, ಸ್ವಾಮಿನಾಯಕ್, ಚೇತು, ಮೋಹನ್, ಚಂದ್ರು, ಮಾದೇಶ್ ಇತರರು ಹಾಜರಿದ್ದರು.
