ಚಾಮರಾಜನಗರ: ಚಾಮರಾಜನಗರದಲ್ಲಿ ಸೆಪ್ಟೆಂಬರ್ 6ರ ಭಾನುವಾರ ಸಂಜೆ 2.30ಕ್ಕೆ 16ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವ ರಥದ ಬೀದಿಯಲ್ಲಿ ಜರಗಲಿದೆ.
ಮೊಸರು ಮಡಿಕೆ ಒಡೆಯುವ ಉತ್ಸವ ಪೂರ್ವ ಮಡಿಕೆ ತಯಾರಿಕೆ ನಡೆಸಲು ಹೆಗ್ಗೋ ಟ್ಟಾರ ಗ್ರಾಮದ ಮಡಿಕೆ ನಂಜಪ್ಪನವರ ಗುಡಿ ಕೈಗಾರಿಕೆಯಲ್ಲಿ ಮಡಿಕೆ ತಯಾರಿಸುವ ಸಲುವಾಗಿ ವಿಶೇಷ ಮೃತ್ತಿಕಾ ಪೂಜೆ(ಮಣ್ಣಿನ ಪೂಜೆ ) ಹಾಗೂ ಗೋ ಪೂಜೆ ಯನ್ನು ನೆರವೇರಿಸಲಾಯಿತು.
ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಕಳೆದ 16 ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮೊಸರು ಮಡಿಕೆ ಒಡೆಯುವ ಉತ್ಸವವನ್ನು ವೈಭವದಿಂದ ಆಚರಿಸಲಾಗುತ್ತಿದೆ. ಮೊಸರು ಮಡಿಕೆ ತಯಾರಿಕೆಯ ಹಿನ್ನೆಲೆಯಲ್ಲಿ ಹೆಗ್ಗೋಟಾರ ಗ್ರಾಮದಲ್ಲಿ ವಿಶೇಷವಾದ ಮಣ್ಣನ್ನು ಪೂಜಿಸಿ ಅದರಲ್ಲಿ ಮಡಿಕೆ ತಯಾರಿಸಿ ಭಕ್ತಿ ಪೂರ್ವಕವಾಗಿ ದೈವಿ ಸ್ವರೂಪವಾದ ಭೂತಾಯಿಯ ಆಶೀರ್ವಾದದೊಂದಿಗೆ ಪ್ರತಿವರ್ಷ ಮಡಿಕೆಯನ್ನು ತಯಾರು ಮಾಡಲಾಗುವುದು. ಭಾರತೀಯ ಸಂಸ್ಕೃತಿಯಲ್ಲಿ ಮಣ್ಣು ಪವಿತ್ರವಾದದ್ದು. ತಾಯಿ ಸ್ವರೂಪ ಭೂಮಿಯನ್ನು ಭೂದೇವಿಯ ಸ್ವರೂಪದಲ್ಲಿ ಸರ್ವರಿಗೂ ಫಲವತ್ತತೆ, ಶಕ್ತಿ ಶಾಂತಿ, ನೆಮ್ಮದಿ, ಸಮೃದ್ಧಿ ಆರೋಗ್ಯ, ಏಕತೆ ಉಂಟುಮಾಡುವ ಗುಣ ಇರುವುದು ಮಣ್ಣಿನಲ್ಲಿ. ದೈವೀಕತೆಯ ಜೊತೆಗೆ ಔಷಧೀಯ ರಹಸ್ಯವನ್ನು ಹೊಂದಿರುವ ಮಣ್ಣು ಪವಿತ್ರವಾದದ್ದು. ತಾಯಿ ಭೂದೇವಿಯನ್ನು ಸ್ಮರಿಸಿ ಭೂತಾಯಿಯನ್ನು ಗೌರವಿಸುವ ಸಂಪ್ರದಾಯ ನಮ್ಮದಾಗಿದೆ ಎಂದು ತಿಳಿಸಿ,
ಮೊಸರು ಮಡಿಕೆ ಒಡೆಯುವ ಉತ್ಸವದ ಅಂಗವಾಗಿ ಶ್ರೀ ಕೃಷ್ಣ ಕಬಡ್ಡಿ ಪಂದ್ಯಾವಳಿ ಹಾಗೂ ಕೆಸರುಗದ್ದೆ ಓಟ ನಡೆಸಲಾಗುವುದು.
ಸೆಪ್ಟಂಬರ್ 6 ಭಾನುವಾರ ಮಧ್ಯಾನ 1.30 ಕ್ಕೆ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಸಮೀಪದ ರಥದ ಬೀದಿಯಲ್ಲಿ ಭವ್ಯವೇದಿಕೆಯಲ್ಲಿ ರಂಗೋಲಿ ಸ್ಪರ್ಧೆ ಹಾಗೂ ಹೂ ಕಟ್ಟುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದು ಎರಡು ಮೂವತ್ತಕ್ಕೆ ಶ್ರೀ ಕೃಷ್ಣನ ಮೂರ್ತಿಯ ಮೆರವಣಿಗೆ ಚಾಮರಾಜೇಶ್ವರ ದೇವಸ್ಥಾನದ ಪ್ರದಕ್ಷಿಣಾ ಪಥ ವಾಗಿ ಅಗ್ರಹಾರ, ಶ್ರೀ ಭುವನೇಶ್ವರಿ ವೃತ್ತ, ಮಾರ್ಗವಾಗಿ ವೇದಿಕೆ ತಲಪಲಿದೆ.
ಶ್ರೀ ಕೃಷ್ಣನ ಭವ್ಯ ಮೆರವಣಿಗೆ ಭಜನೆ,ನಾದ ಸ್ವರ,ಯುವಕರ ತಂಡ,ಬೆಣ್ಣೆ ಹಾಗೂ ಮೊಸರುಗಡಿಕೆಗಳ ಮೆರವಣಿಗೆ ನಡೆಯಲಿದೆ.
ಪ್ರಸಿದ್ಧ ಗಾಯಕರಾದ ಜ ಸುರೇಶ್ನಾಗ್ ಹರದನಹಳ್ಳಿ ಮತ್ತು ತಂಡದವರಿಂದ ಭಕ್ತಿಗೀತೆಗಳ ಗಾಯನವನ್ನು ಹಮ್ಮಿಕೊಳ್ಳಲಾಗಿದೆ.
ನಾಟ್ಯಕಲಾ ಸರಸ್ವತಿ ತಂಡ, ಅವತಾರ ಗ್ರೂಪ್ ಡ್ಯಾನ್ಸ್ ರವರಿಂದ ಹಾಗೂ ವಿವಿಧ ತಂಡಗಳಿಂದ ಶ್ರೀಕೃಷ್ಣನ ನೃತ್ಯ ಕಾರ್ಯಕ್ರಮ ಜರುಗಲಿದೆ.
ವೇ.ಬ್ರ.ಶ್ರೀ ಪ್ರದೀಪ್ ಕುಮಾರ್ ದೀಕ್ಷಿತ್ ರವರು ಮೃತಿಕ ಪೂಜೆಯನ್ನು ನೆರವೇರಿಸಿ ಮಾತನಾಡಿ ಮಣ್ಣು ಆನಂದದ ಸಂಕೇತ. ಮಣ್ಣಿನಲ್ಲಿ ಹಲವಾರು ಬಗೆಯ ಶಕ್ತಿಯನ್ನು ಕಾಣಬಹುದು. ಕೃಷ್ಣನ ಉತ್ಸವದಲ್ಲಿ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸಿ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಮಡಿಕೆ ನಂಜಪ್ಪ, ಶಿವ ಶೆಟ್ಟಿ, ಶ್ರೀ ಕೃಷ್ಣ ಪ್ರತಿಷ್ಠಾನದ ಬಿಕೆ ಆರಾಧ್ಯ ಇದ್ದರು.
