ಮೈಸೂರು: 2026ರ ಆಗಸ್ಟ್ 22 ರಿಂದ ಸೆಪ್ಟೆಂಬರ್ 3 ರವರೆಗೆ ನಡೆಯಲಿರುವ 26ನೇ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಅಂತರರಾಷ್ಟ್ರೀಯ ಕ್ರೀಡಾಪಟು ಎಂ. ಯೋಗೇಂದ್ರ ಅವರನ್ನು , ಮೈಸೂರು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ (ರಿ.) ಅಧ್ಯಕ್ಷರಾದ ಸುಮನಾ ನರಸಿಂಹಮೂರ್ತಿ ‘ಬ್ಲೇಜರ್’ ನೀಡಿ ಸನ್ಮಾನಿಸಿದರು.
ಮೈಸೂರಿನ ಅಶೋಕಪುರಂನಲ್ಲಿರುವ ಆರ್‍ಎನ್‍ಎಂ ಎಂಟರ್‍ಪ್ರೈಸಸ್ ಆವರಣದಲ್ಲಿ, ಮೈಸೂರು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ (ರಿ.) ಅಧ್ಯಕ್ಷರಾದ ಸುಮನಾ ನರಸಿಂಹಮೂರ್ತಿ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಬಿ. ಬಸವರಾಜು, ಖಜಾಂಚಿ ಸೋಮಶೇಖರ್ ಕೆ ಎನ್ ಹಾಗೂ ಎಂ.ಪಿ. ಚಂದ್ರಶೇಖರ್, ಮಹಾದೇವು ಎಸ್., ಮಹಾದೇವಯ್ಯ, ವಿಶ್ವೇಶ್ವರ ಆರಾಧ್ಯ, ಮಹೇಶ್ ಎಂ.ಎಸ್., ವಿನಾಯಕ ಎನ್. ಮತ್ತು ಡಾ. ರಘುನಂದನ್ ಉಪಸ್ಥಿತರಿದ್ದರು.
