ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಕಾರ್ಯಕಾರಿಣಿ ಸಭೆ, ಬ್ಲಾಕ್ ಸಮಿತಿ ಪದಾಧಿಕಾರಿಗಳಿಗೆ ನೇಮಕಾತಿ ಆದೇಶಪತ್ರ ವಿತರಣೆ
ಚಾಮರಾಜನಗರ : ಬಿಜೆಪಿ ನಿಜವಾದ ಮಹಿಳಾ ಮೀಸಲಾತಿ ವಿರೋಧಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ನಾರಾಯಣ್ ಆರೋಪಿಸಿದರು.
ನಗರದ ಸತ್ತಿರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರಕಾರಿಣಿ ಸಭೆ, ಬ್ಲಾಕ್ ಸಮಿತಿ ಪದಾಧಿಕಾರಿಗಳಿಗೆ ನೇಮಕಾತಿ ಆದೇಶಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ದೇಶಕ್ಕಾಗಿ ಸ್ವಾತಂತ್ರ್ಯ ತಂದುಕೊಟ್ಟದ್ದು ಕಾಂಗ್ರೆಸ್, ಸ್ವಾತಂತ್ರ್ಯ ಪೂರ್ವದಿಂದಲ್ಲೂ ಮಹಿಳೆಯರ ಪರವಾಗಿದ್ದು ಮಹಿಳಾ ಮೀಸಲಾತಿ ಪರವಾಗಿದೆ ಹೊರತು ವಿರೋಧ ಮಾಡುತ್ತಿಲ್ಲ. ಕೂಡಲೇ ಮಹಿಳಾ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿಯಲ್ಲ. ಆದರೆ, ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿ ಎಂದು ಬಿಜೆಪಿ ಬಿಂಬಿಸುತ್ತಿದೆ.2023ರಲ್ಲೇ ನಾರಿ ವಂದನ್ ಮಹಿಳಾ ಮೀಸಲಾತಿ ಜಾರಿಯಾಗಿರುವ ಕುರಿತು ಪ್ರಧಾನಿ ನರೇಂದ್ರಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 2026ರಲ್ಲಿ ಮತ್ತೊಮ್ಮೆ ಈ ಕಾಯ್ದೆಯನ್ನು ಜಾರಿಗೊಳಿಸಲು ಹೊರಟಿರುವ ಉದ್ದೇಶವೇನು ಎಂದು
ಪ್ರಶ್ನಿಸಿದರು.
ಸಂವಿಧಾನದ 73, 74ನೇ ತಿದ್ದುಪಡಿ ಮಾಡಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿಯನ್ನು ಕಾಂಗ್ರೆಸ್ ಅವಧಿಯಲ್ಲೇ ಜಾರಿಗೊಳಿಸಲಾಗಿದೆ. ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವಲ್ಲಿ ಕಾಂಗ್ರೆಸ್ ಮುನ್ನುಡಿ ಬರೆದಿದೆ.ದೇಶದ 5 ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ತುರ್ತು ಅಧಿವೇಶನ ಕರೆಯುವ ಆಗಿಲ್ಲ. ಆದರೆ ಉದ್ದೇಶಪೂರ್ವಕವಾಗಿ ಅಧಿವೇಶನ ಕರೆದು ಮಹಿಳೆಯರು, ಜನತೆಯನ್ನು ದಿಕ್ಕು ತಪ್ಪಿಸುವವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ದೂರಿದರು.
2023 ರಲ್ಲೇ ಮಹಿಳಾ ಮೀಸಲಾತಿ ಬಿಲ್ ನಲ್ಲಿ ಉಳಿದಿದೆ.ಜಾರಿ ಮಾಡಲಿಲ್ಲ. ಕೂಡಲೇ ಬಿಜೆಪಿ ಮಹಿಳೆಯರ ಪರ ಇದ್ದರೆ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆನ್ ಪ್ರಚಾರ ಸಮಿತಿ ಬಲಿಷ್ಠವಾಗಿದಷ್ಟು ಪಕ್ಷ ಸದೃಢವಾಗಿರುತ್ತದೆ. ಯುದ್ಧದ ಸೇನಾನಿಗಳ ತರ ಕೆಲಸ ಮಾಡುವುದು ಕಾಂಗ್ರೆಸ್ ಪ್ರಚಾರ ಸಮಿತಿ ಕೆಲಸವಾಗಿದೆ.ಇಷ್ಟು ವರ್ಷಗಳು ಇದ್ದ ಕಾಂಗ್ರೆಸ್ ಪ್ರಚಾರ ಸಮಿತಿನೇ ಬೇರೆ . ಈಗಿರುವ ಪ್ರಚಾರ ಸಮಿತಿನೇ ಬೇರೆ. ಪ್ರಚಾರ ಸಮಿತಿ ಎಂದರೆ ನೇಮಕಾತಿ ಆದೇಶ ಪಡೆದು, ವಿಸಿಟಿಂಗ್ ಕಾರ್ಡ್ ಪಡೆದು ಇಟ್ಟುಕೊಂಡು ಕಾರ್‌ಗೆ ನಾಮಫಲಕ ಹಾಕಿಕೊಳ್ಳುವುದು ಅಲ್ಲ. ಪ್ರಚಾರ ಸಮಿತಿ ಯುದ್ಧದ ಸೇನಾನಿಗಳ ತರ ಕೆಲಸ ಮಾಡುವುದು ಪ್ರಚಾರ ಸಮಿತಿ ಕೆಲಸವಾಗಿದೆ. ಎಂದರು.
ಇತ್ತೀಚಿನ ಬಹುತೇಕ ಪ್ರಚಾರ ಸಮಿತಿಯ ಸಂಯೋಜಕರು, ಅಧ್ಯಕ್ಷರು, ಉಪಾಧ್ಯಕ್ಷರು ಎಲ್ಲರೂ ಕ್ರಿಯಾಶೀಲರಾಗಿರುತ್ತಾರೆ. ನೀವು ಕೂಡ ಚಾಮರಾಜನಗರ ಜಿಲ್ಲೆಯಲ್ಲಿ ಅತ್ಯಂತ ಕ್ರಿಯಾಶೀಲರಾಗಿರಬೇಕು ಅನ್ನೋದು ನನ್ನ ಆಶೆಯಾಗಿದೆ ಎಂದರು.
ನಿಮ್ಮ ನಿಮ್ಮ ಕ್ಷೇತ್ರದ ಶಾಸಕರು, ನೀವು ಒಂದು ಸಣ್ಣ ತಪ್ಪು ಮಾಡಿದರೂ ಕೂಡ ಅವರಿಗೆ ಅವಮಾನ ಆಗುತ್ತದೆ. ಆಗಾಗಿ ನಿಮ್ಮ ಚಟುವಟಿಕೆಗಳು ಹೆಚ್ಚಿನ ರೀತಿಯಲ್ಲಿರುತ್ತದೆ. ಚುನಾವಣೆ ಬರೋದು ಮುಖ್ಯವಲ್ಲ. ಪ್ರಚಾರ ಸಮಿತಿ ಚುನಾವಣೆಯನ್ನು ಯಾವಾಗ ಬೇಕಾದರೂ ಮಾಡಿಕೊಳ್ಳಲಿ ಅದು ಅವರಿಗೆ ಬಿಟ್ಟ ವಿಚಾರವಾಗಿದೆ. ಪ್ರಚಾರ ಸಮಿತಿ ಮಾಡುವುದು ಕೆಲಸಗಳು ಬೇಕಾದಷ್ಟು ಇದೆ ಅದನ್ನೇಲ್ಲ
ನಾವು ಶುರು ಮಾಡುತ್ತೇವೆ. ಪ್ರಚಾರ ಸಮಿತಿ ರೂಪುರೇಷುಗಳ ಮುಂದೆ ಎಂದು ಕೇಳಿರದ ರೀತಿಯಲ್ಲಿರುತ್ತದೆ. ಏಕೆ ಇದೆಲ್ಲವನ್ನು ಮಾಡಲಾಗುತ್ತಿದೆ ಎಂದರೇ ಕಾಂಗ್ರೆಸ್ ಪಕ್ಷವನ್ನು ಇಡೀ ದೇಶದಲ್ಲಿ ಅಪಪ್ರಚಾರದ ಮುಖಾಂತರ ತುಳಿಯುತ್ತಿದ್ದಾರೆ. ಅದು ಜನತೆಗೆ ಗೊತ್ತಾ ಗಬೇಕು. ಚಾಮರಾಜನಗರದಲ್ಲಿ ಕಾಂಗ್ರೆಸ್ ಸುಭದ್ರವಾಗಿದ್ದು ನೆಮ್ಮದಿಯಾಗಿದ್ದೇವೆ. ಅಂತಾ ಅಲ್ಲ. ಪ್ರಚಾರ ಸಮಿತಿ ಬಲಿಷ್ಠವಾಗಿದ್ದಷ್ಟು, ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿರುತ್ತದೆ ಎಂದರು.
ಕಾಂಗ್ರೆಸ್ ಪಕ್ಷದಿಂದ ಸಾಮಾಜಿಕ ನ್ಯಾಯ : ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ
ಮಾತನಾಡಿ, ಕಾಂಗ್ರೆಸ್ ಪಕ್ಷವು ಎಲ್ಲ ವರ್ಗ, ಎಲ್ಲ ಧರ್ಮಗಳಿಗೆ ಸಾಮಾಜಿಕ ನ್ಯಾಯ ಕೊಡಿಸುತ್ತದೆ. ಕಾಂಗ್ರೆಸ್ ಪ್ರಚಾರ ಸಮಿತಿಯ 23 ಮಂದಿಗೆ ನೇಮಕಾತಿ ಆದೇಶಪತ್ರ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲೂ ಕಾರ್ಯಕ್ರಮ ಮಾಡಿ. ನಿಮಗೆ ಎಲ್ಲ ರೀತಿಯ ಸಹಕಾರ ಕೊಡುವುದಾಗಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಚೂಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸೇರಿದಂತೆ ಎಲ್ಲ ಘಟಕಗಳು ತಳಮಟ್ಟದಲ್ಲಿ ಸಂಘಟನೆ ಮಾಡಿ ಮುಂಬರುವ ಜಿ.ಪಂ., ತಾ.ಪಂ ಹಾಗೂ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಧುಸೂದನ್ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯು ಜಿಲ್ಲೆ ಎಲ್ಲ ಬ್ಲಾಕ್‌ಗಳನ್ನು ಅಧ್ಯಕ್ಷರು, ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಪದಾಧಿಕಾರಿಗಳಿಗೆ ನೇಮಕಾತಿ ಆದೇಶಪತ್ರ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರಚಾರ ಸಮಿತಿಯನ್ನು ಬಲಿಷ್ಠಗೊಳಿಸಿ ಕಾಂಗ್ರೆಸ್ ಸದೃಢಗೊಳಿಸಿ ಮುಂಬರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಲಾಗುವುದು ಎಂದರು.
ಸಭೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ , ಸೈಯದ್ ನಜುರುಲ್ಲಾ, ಆರ್.ಸಿದ್ದರಾಜು, ಇರಸವಾಡಿ ಅಶೋಕ ಕುಮಾರ್, ಹೆಗ್ಗವಾಡಿ ಕೆಂಪರಾಜು, ಕೆರೆಹಳ್ಳಿ, ರವಿಕುಮಾರ್, ರಾಜಕುಮಾರ, ಗುಂಡ್ಲುಪೇಟೆ ಶಾನೀಜಾ ಮುದ್ದೀನ್, ಆರ್.ಡಿ.ಉಲ್ಲಾಸ್, ವಿ.ಶಿವಕುಮಾರ್, ಕಲಾವತಿ,
ಬ್ಲಾಕ್ ಅಧ್ಯಕ್ಷರಾದ ರವಿ ಬಿಸಲವಾಡಿ, ಅಪ್ಸರ್ ಅಹಮದ್, ಡಿ.ಕೆ.ಶಿವಕುಮಾರ್,ಮನೋಹರ್,
ಕೋಟೆಕೆರೆ ಶಂಕರನಾಯಕ, ಪ್ರಸಾದ್, ಸೋಮಳ್ಳಿ ಮುರುಳಿ ಇತರರು ಭಾಗವಹಿಸಿದ್ದರು.