ಬಳ್ಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಿ.ಎಂ.ಗೋಪಾಲ್ ಆಯ್ಕೆ

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ ): ತಾಲೂಕಿನ ಬಳ್ಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಚಿಕ್ಕನಾಯಕನಹಳ್ಳಿ ಗ್ರಾಮದ ಸಿ.ಎಂ.ಗೋಪಾಲ್ ಅವರು ಆಯ್ಕೆಯಾಗಿದ್ದಾರೆ.

ಈ ಹಿಂದೆ ಅಧ್ಯಕ್ಷರಾಗಿದ್ದ ಭಾರತಿ ಹುಚ್ಚೇಗೌಡ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ಸಿ.ಎಂ.ಗೋಪಾಲ್ ಮತ್ತು ಮೋಹನ್ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಸಿ.ಎಂ.ಗೋಪಾಲ್ ಆರು ಮತಗಳನ್ನು ಪಡೆದು ಚುನಾಯಿತರಾದರೆ ಮೋಹನ ಮೂರು ಮತಗಳನ್ನು ಪಡೆದು ಪರಾಭವಗೊಂಡರು. ಎರಡು ಮತಗಳು ತಿರಸ್ಕೃತಗೊಂಡವು. ಚುನಾವಣೆ ಅಧಿಕಾರಿಯಾಗಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಕಾರ್ಯನಿರ್ವಹಿಸಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ಉಪಾಧ್ಯಕ್ಷೆ ಪದ್ಮಮ್ಮಸುಂದ್ರೇಗೌಡ, ನಿರ್ದೇಶಕರುಗಳಾದ ಭಾರತಿಹುಚ್ಚೇಗೌಡ, ಎಂ.ಸಿ.ಕಲ್ಪನಾಸುರೇಶ,
ಎಲ್.ಪಿ.ಮಹದೇವ, ಬೀರೇಶ, ಬೊಮ್ಮರಾಯನಾಯಕ, ರಾಮಯ್ಯ ಎಂ.ಮಂಜುನಾಥ, ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಎನ್.ದಿನೇಶ್ ಭಾಗವಹಿಸಿದ್ದರು.

ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ನೂತನ ಅಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ, ಅಭಿನಂದಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಹಳ್ಳಿ ಸೋಮಶೇಖರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಲ್.ಎಂ.ಸಣ್ಣಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಂಗೆಗೌಡ, ಮಾಜಿ ಉಪಾಧ್ಯಕ್ಷರಾದ ಚಿಕ್ಕನಾಯಕನಹಳ್ಳಿ ವಾಸು, ಕುಮಾರ್, ವಿ ಎಸ್ ಎಸ್ ಬಿ ಎನ್ ಮಾಜಿ ಅಧ್ಯಕ್ಷ ಲೋಕೇಶ್, ಮುಖಂಡರುಗಳಾದ ಸತ್ಯಣ್ಣ ಲೋಕೇಶ್, ಹುಚ್ಚೇಗೌಡ, ನರೇಂದ್ರ, ಮಹೇಂದ್ರ, ಅಂಗಡಿವಿಶ್ವನಾಥ್, ನಾರಾಯಣ, ಸಿ.ಬಿ.ಆನಂದ, ಸಿ.ಆರ್.ಮಂಜುನಾಥ್, ತುಳಸಿ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *