ಕುರಿಯನ್ ಅವರನ್ನು ಸದಾ ಸ್ಮರಿಸಬೇಕು: ವಾಸು

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ ): ದೇಶದಲ್ಲೇ ಹೈನುಗಾರಿಕಾ ಕ್ಷೇತ್ರದಲ್ಲಿ ರೈತರುಗಳು ತೊಡಗಿಸಿಕೊಳ್ಳುವಂತೆ ಮಾಡಿದಂತಹ ಕುರಿಯನ್ ಅವರನ್ನು ಸದಾ ಸ್ಮರಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚಿಕ್ಕನಾಯಕನಹಳ್ಳಿ ವಾಸು ಹೇಳಿದರು.

ಅವರು ಸಾಲಿಗ್ರಾಮ ತಾಲೂಕಿನ ಚಿಕ್ಕನಾಯಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2025 – 26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ರೈತರುಗಳು, ಮಹಿಳೆಯರು, ಯುವಕರು ಸೇರಿದಂತೆ ಸರ್ವರು ಹೈನುಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಹೊಂದಿ ಸಮಾಜದಲ್ಲಿ ಉತ್ತಮ ಬದುಕು ನಡೆಸಲು ಸಾಧ್ಯವಾಗಿದೆ ಎಂದರು.

ಮೈಮುಲ್ ಮಾರ್ಗ ವಿಸ್ತರಣಾಧಿಕಾರಿ ನೇಮಿನಾಥ ಮಾಕಾಣಿ ಮಾತನಾಡಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸಂಘದ ಸದಸ್ಯರುಗಳು ಗುಣಮಟ್ಟದ ಹಾಲನ್ನು ಹಾಕುವ ಮೂಲಕ ಸಂಘದ ಅಭಿವೃದ್ಧಿಗೆ ಕೈಜೋಡಿಸುವುದರೊಂದಿಗೆ ತಾವುಗಳು ಅಭಿವೃದ್ಧಿಯತ್ತ ಸಾಗಬೇಕು ಎಂದು ಕರೆ ನೀಡಿದರು. ಗ್ರಾಮಾಂತರ ಪ್ರದೇಶಗಳಲ್ಲಿ ಹೈನುಗಾರಿಕೆಯನ್ನು ಮಾಡುವ ಮೂಲಕ ತಮ್ಮ ತಮ್ಮ ಗ್ರಾಮಗಳಲ್ಲೇ ಸ್ವ ಉದ್ಯೋಗವನ್ನು ಸೃಷ್ಟಿ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಹಾಕಿದ ಹಾಲು ಉತ್ಪಾದಕರುಗಳಾದ ಗೀತಾ ರಮೇಶ್, ನರಸಿಂಹೇಗೌಡ,
ಸಿ.ಸಿ.ಮಂಜುನಾಥ, ಹರೀಶ್, ಕಾಂತರಾಜು ಅವರುಗಳಿಗೆ ಬಹುಮಾನಗಳನ್ನು ನೀಡಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಸಂಘದ ಅಧ್ಯಕ್ಷೆ ಜವರಮ್ಮ ಲಕ್ಷ್ಮಣೇಗೌಡ, ಉಪಾಧ್ಯಕ್ಷ ಹರೀಶ್, ನಿರ್ದೇಶಕರುಗಳಾದ
ಸಿ.ಡಿ.ನಟರಾಜು, ಸಿ.ಕೆ.ನಾಗರಾಜು, ಸಿ.ಎನ್.ಮಾರುತಿ, ಸಿ.ಬಿ.ಆನಂದ, ನಾರಾಯಣಗೌಡ, ರಂಗೇಗೌಡ, ಲೋಕೇಶ, ಸಿ.ಟಿ.ಜ್ಯೋತಿಕೃಷ್ಣೆಗೌಡ, ಜಗದೀಶ್, ಬಳ್ಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎಂ.ಗೋಪಾಲ್, ಗ್ರಾ.ಪಂ. ಮಾಜಿ ಅಧ್ಯಕ್ಷ ರಂಗೆಗೌಡ, ಮುಖಂಡರಾದ ವೆಂಕಟೇಶ್,
ಸಿ.ಎಂ.ರಾಜೇಗೌಡ, ಅಂಗಡಿ ವಿಶ್ವನಾಥ್, ಮಹೇಂದ್ರ, ಹೆಳವಣ್ಣನ ರವಿ, ಸಿ.ಎನ್.ಪ್ರಕಾಶ್, ಸಂಘದ ಸಿಇಒ ಧನಂಜಯ, ಸಿಬ್ಬಂದಿಗಳಾದ ಸಿ.ಎಂ.ಗೋವಿಂದ, ಸಿ.ಕೆ.ವಿಶ್ವನಾಥ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *