ಚಾಮರಾಜನಗರ ದಸರಾ : ಚಾಮರಾಜೇಶ್ವರಸ್ವಾಮಿಗೆ ವಿಶೇಷಪೂಜೆ

  • ಮೂರು ದಿನಗಳ ಕಾಲ ಚಾಮರಾಜನಗರದಲ್ಲಿ ಅದ್ದೂರಿ ದಸರಾ ಆಚರಣೆ
  • ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಕನ್ನಡ ಚಳುವಳಿಗಾರರು, ಕಲಾವಿದರು
  • ನಾಡಿನ ಅಧಿದೇವತೆ ಚಾಮುಂಡೇಶ್ವರಿ, ಚಾಮರಾಜೇಶ್ವರಸ್ವಾಮಿ ಉತ್ತಮ ಮಳೆ, ಬೆಳೆ ತರಲಿ

ಚಾಮರಾಜನಗರ:   ಜಿಲ್ಲೆಯಲ್ಲಿ ಮೂರು ದಿನಗಳ ದಸರಾ ಆಚರಣೆ ಅಮನಗವಾಗಿ ಅಖಿಲ ಕನ್ನಡ ಮಹಾಸಭಾದ ವತಿಯಿಂದ ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಿ ಸರ್ಕಾರಕ್ಕೆ ಅಭಿನಂದಿಸಲಾಯಿತು.

ಕಳೆದ ವರ್ಷ, ಈ ಬಾರಿ ಬರನೆಪವೊಡ್ಡಿ ರಾಜ್ಯ ಸರ್ಕಾರ ಚಾಮರಾಜನಗರ ದಸರಾ ಆಚರಣೆ ಕೈ ಬಿಟ್ಟಿತು. ಆಗಾಗಿ ಕಳೆದ ವರ್ಷದಂತೆ ಈ ಬಾರಿಯು ನಮ್ಮ ಸಂಘಟನೆ ವತಿಯಿಂದ 9 ದಿನಗಳ ಕಾಲ ದಸರಾ ಆಚರಣೆಗೆ ಮುಂದಾಗಿತು. ಕೊನೆಗಳಿಗೆಯಲ್ಲಿ  ರಾಜ್ಯ ಸರ್ಕಾರ ಚಾಮರಾಜನಗರದಲ್ಲಿ ಮೂರು ದಿನಗಳ ಕಾಲ ದಸರಾ ಆಚರಣೆಗೆ ಅನುಮತಿ ನೀಡಿತು. ಆಗಾಗಿ ನಮ್ಮ ಸಂಘಟನೆ ವತಿಯಿಂದ ಮಾಡಲು ನಿರ್ಧರಿಸಿದ ದಸರಾ ಆಚರಣೆ ಕೈ ಬಿಟ್ಟು ಸರ್ಕಾರ ಆಚರಣೆ ಗೆ ಸಂಪೂರ್ಣ ಬೆಂಬಲ ಸಹಕಾರ ನೀಡಲಾಗುತ್ತದೆ ಎಂದರು.

ಚಾಮರಾಜನಗರ ದಲ್ಲಿ  ಅದ್ದೂರಿ ದಸರಾ ಆಚರಣೆಗೆ ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರಿಗೆ  ದಸರಾ ಆಚರಣೆ ಮಾಡುವಂತೆ ಹೋರಾಟ ಮಾಡಿದ ಕಲಾವಿದರುಗಳಿಗೆ, ಕನ್ನಡ ಪರ ಹೋರಾಟಗಾರಿಗೆ ಈ ಮೂಲಕ ಅಭಿನಂದನೆ ಸಲ್ಲಿಸಲಾಗುವುದು,  ನಾಡಿನ ಅಧಿದೇವತೆ ಶ್ರೀಚಾಮುಂಡೇಶ್ವರಿ, ಶ್ರೀಚಾಮರಾಜೇಶ್ವರಸ್ವಾಮಿ ನಾಡಿನ ಸಮಸ್ತ ಜನತೆಗೆ ಒಳಿತು ಮಾಡಲಿ,  ಉತ್ತಮ, ಮಳೆ ಬೆಳೆಯಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಪಣ್ಯದಹುಂಡಿ ರಾಜು,  ನಿಜಧ್ವನಿ ಗೋವಿಂದರಾಜು, ಮಂಗಲ ಹೊಸೂರು ಶಿವಣ್ಣ, ನಂಜುಂಡಶೆಟ್ಟಿ, ಮಹೇಶ್ ಗೌಡ, ಅರುಣಕುಮಾರ್ ಗೌಡ, ತಮಿಳು ಸಂಘ ರಾ.ಜಗದೀಶ್, ರವಿಚಂದ್ರಪ್ರಸಾದ್ ಕಹಳೆ, ಟೌನ್ ಒಕ್ಕಲಿಗ ಸಂಘದ ಅಧ್ಯಕ್ಷ ಮಹೇಶ್ ಗೌಡ, ವೀರಭದ್ರ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *