ಚಾಮರಾಜನಗರ ವಿಶ್ವವಿದ್ಯಾನಿಲಯ : ವಿವಿಧ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನ

ಚಾಮರಾಜನಗರ: ಚಾಮರಾಜನಗರ ವಿಶ್ವವಿದ್ಯಾನಿಲಯದ ಸುವರ್ಣಗಂಗೋತ್ರಿ ಹಾಗೂ ಚಾಮರಾಜನಗರ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಸಂಯೋಜನೆÀಗೊಂಡ ಸರ್ಕಾರಿ, ಖಾಸಗಿ ಅನುದಾನಿತ ಹಾಗೂ ಅನುದಾನೇತರ ಮಹಾವಿದ್ಯಾಲಯಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿಗಳಾದ ಎಂ.ಎ, ಎಂ.ಕಾಂ, ಎಂ.ಎಸ್.ಡಬ್ಲ್ಯೂ, ಎಂ.ಎಸ್ಸಿ, ಎಂಬಿಎ, ಎಂಸಿಎ, ಎಂಎಲ್‍ಐಸಿ ಪ್ರವೇಶಗಳಿಗೆ ವಿಶ್ವವಿದ್ಯಾನಿಲಯದ ನಿಯಮಾವಳಿಗಳನ್ವಯ ಅರ್ಹತೆಯ ಪ್ರಕಾರ ಯುಯುಸಿಎಂಎಸ್ (UUCMS) ಮುಖಾಂತರ ಆನ್ ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. 

    ಅರ್ಜಿ ನಮೂನೆ, ಇ-ಮಾಹಿತಿ ಪುಸ್ತಿಕೆ ಮತ್ತು ಇತರೆ ಮಾಹಿತಿಗಳು ವಿಶ್ವವಿದ್ಯಾನಿಲಯದ ಜಾಲತಾಣ www.cuc.karnataka.gov.in ದಲ್ಲಿ ಲಭ್ಯವಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ.

   ಸ್ನಾತಕ ಪದವಿ ಪರೀಕ್ಷೆಯ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಫಲಿತಾಂಶಗಳಿಗಾಗಿ ಕಾಯದೇ ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸಬಹುದು. ಮೂಲ ಅಂಕಪಟ್ಟಿಗಳನ್ನು ಪ್ರವೇಶಾತಿ ಸಮಯದಲ್ಲಿ ಹಾಜರುಪಡಿಸಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ಚಾಮರಾಜನಗರ ವಿಶ್ವವಿದ್ಯಾನಿಲಯಕ್ಕೆ ಖುದ್ದಾಗಿ, ಅಂಚೆ ಮೂಲಕ ಸಲ್ಲಿಸಬೇಕು. ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಪ್ರಕ್ರಿಯೆ ಶುಲ್ಕ 500 ರೂ. ಬ್ಯಾಂಕ್ ಚಲನ್, ಡಿ.ಡಿ ಮೂಲಕ ಪಾವತಿಸಬೇಕು. ಡಿ.ಡಿ ಯನ್ನು ಚಾಮರಾಜನಗರ ವಿಶ್ವವಿದ್ಯಾನಿಲಯ ಹಣಕಾಸು ಅಧಿಕಾರಿಗಳ  ಹೆಸರಿನಲ್ಲಿ ಪಾವತಿಸಬೇಕು.

  ವಿದ್ಯಾರ್ಥಿಯು ಒಂದಕ್ಕಿಂತ ಹೆಚ್ಚು ಕೋರ್ಸಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದ್ದಲ್ಲಿ ಮೂಲ ಅರ್ಜಿಯ ಜೆರಾಕ್ಸ್ ಪ್ರತಿ ಹಾಗೂ ನಿಗದಿತ ಶುಲ್ಕ ಪಾವತಿಸಿದ ಚಲನ್, ಅಂಕಪಟ್ಟಿ ಮತ್ತು ಜಾತಿ/ಆದಾಯ ಪ್ರಮಾಣ ಪತ್ರದ ಪ್ರತಿ ಸಹಿತ ಸಲ್ಲಿಸಬೇಕು. ಆಯಾ ವಿಭಾಗಗಳು ವಿದ್ಯಾರ್ಥಿಗಳ ಅರ್ಹತಾ ಪಟ್ಟಿಯನ್ನು ಪದವಿ ಅಂಕಗಳು ಹಾಗೂ ಮೀಸಲಾತಿ ಆಧಾರದ ಮೇಲೆ ತಯಾರಿಸಲಿವೆ. ಸ್ವತಃ ಪ್ರಮಾಣಿಕೃತ ನಕಲುಗಳನ್ನು ಮಾತ್ರ ಪ್ರವೇಶ ಅರ್ಜಿಗೆ ಲಗತ್ತಿಸಬೇಕು. ಪ್ರವೇಶದ ವೇಳೆಯಲ್ಲಿ ಮೂಲ ದಾಖಲಾತಿಗಳನ್ನು ಒದಗಿಸಬೇಕು.

  ಪ್ರವೇಶಾತಿ ಸಮಯದಲ್ಲಿ ಹಾಜರುಪಡಿಸಲಾಗುವ ಮೂಲ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳನ್ನು ಶೈಕ್ಷಣಿಕ ಅವಧಿ ಮುಗಿಯುವವರೆಗೂ ಹಿಂತಿರುಗಿಸಲಾಗುವುದಿಲ್ಲ. 2026-27ನೇ ಸಾಲಿನಲ್ಲಿ ಪ್ರವೇಶಾತಿ ಆಗುವ ಎಲ್ಲ ವಿಭಾಗಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಪ್ರವೇಶಾತಿ ವಿನಾಯಿತಿ ಶುಲ್ಕವನ್ನು ಎಸ್.ಎಸ್.ಪಿ ಯಲ್ಲಿ ಅರ್ಜಿ ಸಲ್ಲಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಶುಲ್ಕ ಮರುಭರಿಕೆಯಾದ ನಂತರ ವಿಶ್ವವಿದ್ಯಾನಿಲಯಕ್ಕೆ ಹಿಂಪಾವತಿಸುವುದು ಕಡ್ಡಾಯವಾಗಿದೆ. ಅಪೂರ್ಣ ಹಾಗೂ ತಪ್ಪು ಮಾಹಿತಿಯುಳ್ಳ ಮತ್ತು ಸಹಿ ಮಾಡದೆ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Leave a Reply

Your email address will not be published. Required fields are marked *