- ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಬೇಡ : ಎನ್.ಮಹೇಶ್
ಚಾಮರಾಜನಗರ : ಟಾಟಾ ಪವರ್ ಕಂಪನಿಯವರು ಕರ್ನಾಟಕದಲ್ಲಿ ವಿದ್ಯುತ್ ವಿರತಣೆ ನಿರ್ವಹಿಸಲು ಕೆಪಇಆರ್‌ಸಿಗೆ ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿ ಚೆಸ್ಕಾಂ ಚಾಮರಾಜನಗರ ವಿಭಾಗದ ಅಧಿಕಾರಿಗಳು ಮತ್ತು ನೌಕರರ ಒಕ್ಕೂಟದ ವತಿಯಿಂದ ನಗರದ ಚೆಸ್ಕಾಂ ಉಪ ವಿಭಾಗದ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಉಪ ವಿಭಾಗದ ಚೆಸ್ಕಾಂ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ಅಧಿಕಾರಿಗಳು, ನೌಕಕರು ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣ ಬೇಡ, ಕಾರ್ಮಿಕರ ಒಗ್ಗಟ್ಟು ಚಿರಾಯುವಾಗಲಿ ಎಂಬ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ. ನೌಕರರ ಸಂಘದ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ಟಾಟಾ ಪವರ್ ಕಂಪನಿಯವರು ಕರ್ನಾಟಕದಲ್ಲಿ ವಿದ್ಯುತ್ ವಿರತಣೆ ನಿರ್ವಹಿಸಲು ಕೆಇಆರ್‌ಸಿಗೆ ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿ ಚಾಮರಾಜನಗರ ವಿಭಾಗದ ಅಧಿಕಾರಿಗಳು ಮತ್ತು ನೌಕರರ ಒಕ್ಕೂಟದ ವತಿಯಿಂದ ಸಾಂಕೇತಿಕ ಹೋರಾಟ ಹಮ್ಮಿಕೊಳ್ಳಲಾಗಿದೆ. ಇದರಿಂದ ನಿಗಮದ ನೌಕರರು, ರೈತರು, ಗ್ರಾಹಕರಿಗೆ ಆಗುತ್ತಿರುವ ತೊಂದರೆಗಳನ್ನು ಜಾಗೃತಿ ಮೂಡಿಸಲು ಒಕ್ಕೂಟದ ವತಿಯಿಂದ ಎಲ್ಲ ಕಡೆ ಧ್ವಾರಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈಗಾಗಲೇ ಇಡೀ ರಾಜ್ಯದ್ಯಾಂತ ನಮ್ಮ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ಶಾಸಕರು, ಸಂಸದರಿಗೆ ಮನವಿ ಸಲ್ಲಿಸಲಾಗಿದೆ. ವಿದ್ಯುತ್ ಖಾಸಗೀಕರಣದಿಂದಾಗುವ ದುಷ್ಪಪರಿಣಾಮದ
ಬಗ್ಗೆ ಮನವರಿಕೆ ಮಾಡಲಾಗಿದ್ದು, ಯಾವುದೇ ಕಾರಣಕ್ಕೂ ಸರ್ಕಾರ ಟಾಟಾ ಪವರ್ ಕಂಪನಿಯವರಿಗೆ ಕರ್ನಾಟಕದಲ್ಲಿ ವಿದ್ಯುತ್ ವಿರತಣೆ ನಿರ್ವಹಿಸಲು ಅನುಮತಿ ನೀಡಬಾರದು ಎಂದು ಮನವಿ ಮಾಡಿಕೊಳ್ಳಲಾಗಿದೆ. ರಾಜ್ಯದ ಎಲ್ಲ ಒಕ್ಕೂಟಗಳ ವತಿಯಿಂದ ವಿದ್ಯುತ್ ಖಾಸಗೀಕರಣ ಮಾಡಬಾರದ ಎಂದು ಆಕ್ಷೇಷಣೆ ಸಲ್ಲಿಸಲಾಗಿದೆ’ ಎಂದರು.
1902 ರಿಂದ 100 ವರ್ಷಗಳ ಇತಿಹಾಸವಿರುವ ವಿದ್ಯುತ್ ಇಲಾಖೆಯನ್ನು.ಸಾವಿರಾರು ಜನರು ಜೀವತೆತ್ತಿ ಸಂಸ್ಥೆಯನ್ನು ಕಟ್ಟಿಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಬಂಡವಾಳ ಶಾಹಿಗಳ ಕೈಗೆ ಇದನ್ನು ನೀಡಬಾರದು. ಗಾಳಿ, ನೀರಷ್ಟೆ ವಿದ್ಯುತ್ ಮುಖ್ಯವಾಗಿದೆ. ಅಂತಹ ನಿಗಮವನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು ಸರ್ಕಾರದಡಿಯಲ್ಲಿ ಕಾರ್ಯನಿರ್ವಹಿಸುವಂತಾಗಲಿ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್, ಎಇಇ ಗಳಾದ ಮಹೇಶ್, ದ್ರುಪದ್, ಪ್ರಶಾಂತ್, ಸಿದ್ದಲಿಂಗಪ್ಪ, ಪಿಡಿ ಸಂಧ್ಯಾ, ಪಿ.ಸಿದ್ದರಾಜು, ಲೆಕ್ಕಾಧಿಕಾರಿ ಸ್ವಾಮಿಪ್ರಸಾದ್, ನೌಕರರ ಸಂಘದ ಅಧ್ಯಕ್ಷ ಮುರಳಿಕೃಷ್ಣಸ್ವಾಮಿ, ಕಾರ್ಯದರ್ಶಿ ಸಿದ್ದರಾಜಪ್ಪ, ಎಸ್‌ಸಿ, ಎಸ್‌ಟಿ ಕಲ್ಯಾಣ ಸಂಸ್ಥೆ ಕೇಂದ್ರ ಸಮಿತಿ ಸದಸ್ಯ ಮಂಜುನಾಥ್, ಅಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ಸೋಮೇಶ್ವರ, ಪ್ರಾಥಮಿಕ ಸಮಿತಿಗಳ ಶರಣಬಸಪ್ಪ, ಪ್ರಕಾಶ್, ಮಹಾದೇವಸ್ವಾಮಿ, ಚೆನ್ನಂಜಕುಮಾರ್, ಮರಿಸ್ವಾಮಿ, ಸತೀಶ್, ಎಲ್ಲ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನೌಕರರ ಭಾಂದವರು ಭಾಗವಹಿಸಿದ್ದರು.