
ಸಿಮ್ಸ್ ಕಾಲೇಜಿನಲ್ಲಿ 5ನೇ ಘಟಿಕೋತ್ಸವ ಸಮಾರಂಭ, 143 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ, ಭಾವಿ ವೈದ್ಯರ ಕಲರವ,
ಎಂಬಿಬಿಎಸ್ ಪದವಿಯನ್ನು ಪೂರ್ಣಗೊಳಿಸಿ ಮುಂದಿನ ಹೆಜ್ಜೆಯತ್ತ ದಾಪುಗಾಲು ಹಾಕುವ ಅಪರೂಪದ ಕ್ಷಣಕ್ಕೆ ವೇದಿಕೆ ಪಕ್ಷದಲ್ಲಿದ್ದ ವಿದ್ಯಾರ್ಥಿಗಳು, ಮುಂಭಾಗದಲ್ಲಿ ಕುಳಿತಿದ್ದ ಪೋಷಕರು ಸಾಕ್ಷಿಯಾದರು.
ಚಾಮರಾಜನಗರ : ವ್ಯದ್ಯಕೀಯ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು, ಎಂಬಿಬಿಎಸ್ ಪೂರ್ಣಗೊಳಿಸಿ ಭಾವಿ ವೈದ್ಯರಾಗಿ ಹೊರಹೊಮ್ಮಿರುವ ನೀವೆಲ್ಲರೂ ವೈದ್ಯಕೀಯ ಜ್ಞಾನದ ಜೊತೆಗೆ ನಿಸ್ವಾರ್ಥ ಸೇವಾ ಮನೋಭಾವ ಬೆಳೆಸಿಕೊಂಡು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ಸಮಾಜ ಸೇವಕರು, ಆದಿವಾಸಿಗಳ ಪರ ಹೋರಾಟಗಾರರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಪಡೆಯ ಮಾಜಿ ಅಧ್ಯಕ್ಷರಾದ ಪದ್ಮಶ್ರೀ ಡಾ. ಹೆಚ್.ಸುದರ್ಶನ್ ಹೇಳಿದರು.
ನಗರದ ಯಡಬೆಟ್ಟದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ನಡೆದ 5ನೇ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ಮಾತನಾಡಿದರು.
ಮುಂದೆ ನೀವು ಭಾರತದಲ್ಲಿ ವೈದ್ಯರಾಗಿ ನೋಂದಾಯಿಸಿಕೊಳ್ಳಲು ಕಡ್ಡಾಯವಾಗಿ ಒಂದು ವರ್ಷದ ಇಂಟರ್ ಶಿಪ್ ಮುಗಿಸಬೇಕು. ನಂತರ ತಮ್ಮ ವೃತ್ತಿಜೀವನವನ್ನು ಮುನ್ನಡೆಸಲು ವೈದ್ಯಕೀಯ ಅಭ್ಯಾಸ, ಸ್ನಾತಕೋತರ, ಪದವಿ, ಸಂಶೋಧನೆ ಮಾಡಬಹುದು. ಕೇವಲ ಆಸ್ಪತ್ರೆಗಳಿಗೆ ಸೀಮಿತವಾಗದೆ ಗ್ರಾಮೀಣ ಪ್ರದೇಶದ ಜನರಿಗೆ, ಬಡವರಿಗೆ ಉಚಿತ ಆರೋಗ್ಯ ಶಿಬಿರಗಳ ಮೂಲಕ ತಮ್ಮ ಸೇವೆ ಸಲ್ಲಿಸಬೇಕು.ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ ಎಂದು ಶುಭ ಕೋರಿದರು.
ರೋಗಿಗಳೊಂದಿಗೆ ಸಂಯಮ, ಶಾಂತಿಯಿಂದ ವರ್ತಿಸಿ :ಅಧ್ಯಕ್ಷತೆ ವಹಿಸಿದ್ದ ಸಿಮ್ಸ್‌ನ ಡೀನ್ ಮತ್ತು ನಿರ್ದೇಶಕ ಹೆಚ್.ಜಿ. ಮಂಜುನಾಥ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ 5ನೇ ಘಟೀಕೋತ್ಸವ ಸಮಾರಂಭ ನಡೆಯಿತು, 2016-17ನೇ ಸಾಲಿನಲ್ಲಿ ಮೆಡಿಕಲ್ ಕಾಲೇಜು ಆರಂಭವಾಯಿತು. 150 ವಿದ್ಯಾರ್ಥಿಗಳು ಕಾಲೇಜು ಪ್ರವೇಶ ಪಡೆದು ಕಠಿಣ ಅಭ್ಯಾಸ ಪೂರ್ಣಗೊಳಿಸಿ, ಜ್ಞಾನಾರ್ಜನೆ ಕೌಲಶ್ಯ ಬೆಳೆಸಿಕೊಂಡು ವ್ಯದ್ಯರಾಗಿ ಮುಂದಿನ ತರಗತಿಗಳಿಗೆ ಹೋಗುತ್ತಾರೆ. ಇಂದು 143 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು ಎಂದರು.
ಪದವಿ ಪಡೆದಿರುವ ವಿದ್ಯಾರ್ಥಿಗಳು ಮಂದೆ ಅಭ್ಯಾಸ ಮಾಡಬಹುದು. ಸಂಶೋಧನೆ ಮಾಡಬಹುದು. ಸಮಾಜಕ್ಕೆ ಉತ್ತಮ ವೈದ್ಯರಾಗಿ ಸೇವೆ ಸಲ್ಲಿಸಲಿ ಎಂದು ಶುಭ ಕೋರಲಾಯಿತು. ರೋಗಿಗಳ ಜೊತೆ ಸಂಯಮ, ಶಾಂತಿ ವರ್ತಿಸಿ ನಕ್ತಾನಕ್ತಾ ಚಿಕಿತ್ಸೆ ಕೊಡಿ, ಸಿಮ್ಸ್‌ಗೆ ಒಳ್ಳೆಯ ಹೆಸರು ತಂದುಕೊಡಿ ಎಂದು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು. ಆಸ್ಪತ್ರೆಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲ ಡಾ. ಕೆ.ಟಿ. ಅಜಯ್, ಜಿಲ್ಲಾ ವೈದ್ಯಕೀಯ ಅಧೀಕ್ಷಕ ಡಾ. ಸಿ.ವಿ. ಮಾರುತಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಂ. ಚಿನ್ನಬೋವಿ, ನಿವಾಸಿ ವೈದ್ಯಾಧಿಕಾರಿ ಡಾ. ಏಜಾಝುಲ್ಲಾ ಖಾನ್, ಡಾ.ಅಭಿಷೇಕ್, ಡಾ.ಪ್ರದೀಪ್, ಡಾ.ಚಂದ್ರಿಕಬಾಬು,
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಎನ್.ಪಿ. ಅಭಿಲಾಷ ಆರ್ಥಿಕ ಸಲಹೆಗಾರ ರವಿ ಹೊಸಮನಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿ ವೃಂದ,
ಹಾಗೂ, ಪೋಷಕರು ಭಾಗವಹಿಸಿದ್ದರು.