ಶನಿವಾರದ ಶಾಲಾ ಸಮಯವನ್ನು ಬದಲಾವಣೆ ಮಾಡುವಂತೆ ಮಹದೇವಸ್ವಾಮಿ ಆಗ್ರಹ

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಥಮ ಕಾರ್ಯಕಾರಿಣಿ ಸಮಿತಿ ಸಭೆ, ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನ
 ಚಾಮರಾಜನಗರ : ಕರ್ನಾಟಕ ಅಡ್ವಾನ್ಸ್‌ಡ್ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್
ಶಿಕ್ಷಕರು ಒಬ್ಬರಿಗೆ ಮಾತ್ರ ತಂದಿರುವ ಯೋಜನೆಯಲ್ಲ. ಎಲ್ಲ ಸರ್ಕಾರಿ ನೌಕರರಿಗೂ ಜಾರಿಗೆ ತರಲಾಗಿದೆ ಆದರೆ ಕಾಡಂಚಿನ ಪ್ರದೇಶಗಳಲ್ಲಿರುವ ಸ್ಥಳಗಳಿಗೆ ಕಾಂಸ್ ಬಳಕೆ ಕಷ್ಟವಾಗುತ್ತಿದೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ ಹೇಳಿದರು.
   ನಗರದ ಶಿಕ್ಷಕರ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಾಮರಾಜನಗರ ತಾಲೂಕು ಪ್ರಥಮ ಕಾರಕಾರಣಿ ಸಮಿತಿ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ. ಈ ಯೋಜನೆಯು ಪ್ರಯೋಗಿಕವಾಗಿ ಅನೇಕ ಇಲಾಖೆಗಳಲ್ಲಿ ಜಾರಿಯಾಗಿದ್ದರು. ಜೂ. 1ರಿಂದ ಶಿಕ್ಷಣ ಇಲಾಖೆಯಲ್ಲಿ ಜಾರಿಯಾಗಿದ್ದು, ಯಾವುದೇ ಹೊಸ ಯೋಜನೆ ಜಾರಿಯಾದಂತಹ ಪ್ರಾರಂಭದಲ್ಲಿ ತೊಂದರೆಗಳು ಬರುವುದು ಸಹಜ. ಆದರಿಂದ ಸಮಸ್ಯೆಗಳು ಇದ್ದಾವೆ. ಅ ಸಮಸ್ಯೆಗಳನ್ನು ಪರಿಹರಿಸಬೇಕೆನ್ನುವುದು ಎಲ್ಲ ಶಿಕ್ಷಕರ ಅಭಿಪ್ರಾಯ ಆಗಿದೆ ಎಂದರು.
   ಚಾಮರಾಜನಗರ ಜಿಲ್ಲೆಯಲ್ಲಿ ವಿಶೇಷವಾಗಿ ಗುಂಡ್ಲುಪೇಟೆ, ಹನೂರು, ಚಾಮರಾಜನಗರದ ಕೋಳಿಪಾಳ್ಯ ಕ್ಲರ್ಸ್ಟಗಳೆಲ್ಲ ಕಾಡಿನಂಚಿನ ಪ್ರದೇಶಗಳು, ಕಾಡುಪ್ರಾಣಿಗಳ ಕಾಟವಿದ್ದು, ಇತ್ತೀಚಿಗೆ ಶಿಕ್ಷಕರ ಮೇಲೆ ಆನೆ ದಾಳಿ ನಡೆಸಿದೆ. ಆತಂಕ ಉಂಟು ಮಾಡಿದೆ ಎಂದರು.
   ಮೊನ್ನೆ ನಡೆದ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಮಾಡಲಾಗಿದೆ. ಯಾವ ಶಿಕ್ಷಕರು ಭೀತಿಯಿಂದ ಕೆಲಸ ಮಾಡುವುದು ಬೇಡ. ಇಲ್ಲಿ ಬರುವ ತಾಂತ್ರಿಕ ಸಮಸ್ಯೆಗಳನ್ನು ಎರಡು, ತಿಂಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಸರಿಪಡಿಸಲಾಗುವುದೆಂದು ತಿಳಿಸಿರುತ್ತಾರೆ
  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಮಾದಪ್ಪ ಮಾತನಾಡಿ  ಮೊಟ್ಟೆ ದರ ಹೆಚ್ಚಳ ವಾಗಿದ್ದು  ಮುಖ್ಯಶಿಕ್ಷಕರಿಗೆ ಒತ್ತಡ ಹೆಚ್ಚಾಗಿದ್ದು ಆರ್ಥಿಕ ಹೊರೆ ಉಂಟಾಗುತ್ತಿದೆ ಯಾವುದಾದರೂ ಏಜೆನ್ಸಿ ಅವರಿಗೆ ವಹಿಸಿ ಮೊಟ್ಟೆ ವಿತರಣೆಯಲ್ಲಿ ಶಿಕ್ಷಕರಿಗೆ ಆಗಿರುವ ತೊಂದರೆಯನ್ನು ತಪ್ಪಿಸಬೇಕು ಎಂದರು. ವಿಎಲ್ ಪ್ರಸ್ತಾಪ ಮಾಡಿಲ್ಲ.ಶನಿವಾರ, ಭಾನುವಾರ ಒತ್ತಡ ಇದೆ.   2 ಮತ್ತು 4 ನೇ ಶನಿವಾರ ಸರ್ಕಾರಿ ಇಲಾಖೆಗಳಿಗೆ ನೀಡುವ ರೀತಿಯಲ್ಲಿ ರಜೆ ಕೊಡಬೇಕು ಎಂದು ಒತ್ತಾಯಿಸಿದರು.
ಶಿಕ್ಷಕರಿಗೆ ಅರ್ಹತಾ ಪರೀಕ್ಷೆ ಕಡ್ಡಾಯಗೊಳಿಸಿರುವುದನ್ನು ಚಾಮರಾಜನಗರ ಜಿಲ್ಲಾ ಘಟಕ ದ ವತಿಯಿಂದ ಸಂಸದರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಾಮರಾಜನಗರ
ತಾಲೂಕು ಕಾರ್ಯ
ಕಾರಣಿ ಸಮಿತಿಗೆ 2026ರಿಂದ 2013ರವರಗೆ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು  ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಭೆಯಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಎನ್.ಸುಧಾ, ಜಿಲ್ಲಾ ಉಪಾಧ್ಯಕ್ಷೆ ಸಿ.ಎನ್.ಭವಾನಿದೇವಿ, ತಾಲೂಕು ಉಪಾಧ್ಯಕ್ಷರಾದ ಸಿ. ಎಂ. ಸುಶೀಲ, ಧನಂಜಯ, ತಾಲೂಕು ಸಹ ಕಾರ್ಯದರ್ಶಿಗಳಾದ ಬಿ.ಎಸ್.ಲ್ಲತಾ, ಬಿ.ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿಗಳಾದ ಬಿ.ಎನ್.ಶ್ವೇತ, ಖಜಾಂಚಿ  ಮಹಮದ್ ಸಮೀವುಲ್ಲಾ, ನಿರ್ದೇಶಕರಾದ ಸಿ.ಮಲ್ಲಿಕಾರ್ಜುನ, ಆನಂದ್‌ಕುಮಾರ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *