ಜೆ.ಎಸ್.ಎಸ್. ಮಹಿಳಾ ಕಾಲೇಜು ಆವರಣದಲ್ಲಿ ಯೋಗಾಭ್ಯಾಸ

ಚಾಮರಾಜನಗರ : ವಿಶ್ವ ಯೋಗ ದಿನಾಚರಣೆ ಅಂಗವಾಗಿ ನಗರದ ಜೆ.ಎಸ್.ಎಸ್ ಮಹಿಳಾ ಕಾಲೇಜು ಆವರಣದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿಯ ಯೋಗಬಂಧುಗಳು ಹಾಗೂ 650 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಸಾಮೂಹಿಕ ಯೋಗಭ್ಯಾಸ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು.
     ನಗರದ ಶ್ರೀಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿಯ ಸಹಯೋಗದೊಂದಿಗೆ ಪ್ರತಿ ವರ್ಷದಂತೆ ಈ ಬಾರಿ 12 ನೇ ವರ್ಷದ ವಿಶ್ವ ಯೋಗ ದಿನಾಚಾರಣೆ ಕಾರ್ಯಕ್ರಮವನ್ನು ಜೆ.ಎಸ್.ಎಸ್. ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಉಮೇಶ್ ಸಮ್ಮುಖದಲ್ಲಿ ನಡೆಯಿತು.
  ಕಾರ್ಯಕ್ರಮ ಉದ್ಘಾಟಿಸಿದ
ಪ್ರಾಂಶುಪಾಲ ಉಮೇಶ್   ಮಾತನಾಡಿ,  ಜೆ.ಎಸ್.ಎಸ್.ಗುರು ಪರಂಪರೆಯನ್ನು ನೆನೆದು ಇಂದು ನಮ್ಮ ಶಾಲಾ ಆವರಣದಲ್ಲಿ ಪ್ರತಿ ವರ್ಷದಂತೆ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದು, ಪ್ರತಿಯೊಬ್ಬರು ನಿತ್ಯ ಯೋಗಭ್ಯಾಸವನ್ನು ನಿರಂತರವಾಗಿ ಮಾಡುತ್ತಾ ಬಂದಲ್ಲಿ ನೀವು  ತುಂಬ ಚೈತನ್ಯದಿಂದ ಇರಲು ಸಾಧ್ಯ. ಯಾವುದೇ ರಂಗದಲ್ಲಿಯೂ ಯಶಸ್ಸು ಸಾಧಿಸಲು ಸಹಕಾರಿ ಎಂದರು. ದೈನಂದಿನ ಕೆಲಸ ಕಾರ್ಯಗಳನ್ನು ಲವಲವಿಕೆಯಿಂದ ಮಾಡಲು ಯೋಗ ಸಹಕಾರಿಯಾಗಿದೆ. ಎಲ್ಲರು ಪ್ರತಿದಿನ ಕನಿಷ್ಟ ಒಂದು ಗಂಟೆಯಾದರು ಯೋಗಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.
ನಂತರ ಶ್ರೀಪತಂಜಲಿ ಯೋಗ ಶಿಕ್ಷಣಾ ಸೇವಾ ಸಮಿತಿಯ ಉಪಾಧ್ಯಕ್ಷ ಯೋಗ ದೊರೆಸ್ವಾಮಿ  ಮಾತನಾಡಿ, ಭಾರತ ದೇಶವು ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದೆ. ಸಂಸ್ಕಾರ, ಸಂಘಟನೆ ಮತ್ತು ಸೇವೆ ಎಂಬ 3 ಧ್ಯೇಯಗಳನ್ನಿಟ್ಟುಕೊಂಡು ಹಲವಾರು ವರ್ಷಗಳಿಂದ ನಮ್ಮ ಸಮಿತಿ ವತಿಯಿಂದ ಉಚಿತವಾಗಿ ಯೋಗಶಿಕ್ಷಣವನ್ನು ನೀಡುತ್ತಿದ್ದೇವೆ. ಪ್ರತಿಯೊಬ್ಬ ಮನುಷ್ಯನು ಪ್ರತಿ ದಿನ ಕನಿಷ್ಟ ಒಂದು ಗಂಟೆಗಳ ಕಾಲ ಯೋಗಭ್ಯಾಸ ಮಾಡಿದರೆ ಈ ದೇಹಕ್ಕೆ ಹಲವಾರು ಲಾಭಗಳು ಸಿಗುತ್ತದೆ. ಪ್ರತಿದಿನ ಸದಾ ಚಟುವಟಿಕೆಯಿಂದ ಲವಲವಿಕೆಯಿಂದ ಚೈತನ್ಯದಿಂದ ಇರಲು ಯೋಗಭ್ಯಾಸ ತುಂಬ ಸಹಕಾರಿಯಾಗಿದೆ. ಆಗಾಗಿ 12 ವರ್ಷದ ಅಂತರರಾಷ್ಟಿಯ ಯೋಗ ದಿನದ ಈ ವರ್ಷದ ವೇಧಘೋಷ “ಆರೋಗ್ಯಕರ ವೃದ್ಯಾಪ್ಯಕ್ಕಾಗಿ ಯೋಗ” ಎಂಬುದು ತುಂಬ ಸಮಯೋಚಿತವಾಗಿದೆ. ಎಲ್ಲರಿಗೂ ವಯಸ್ಸಾಗುವುದು ಸಹಜ, ಆದರೆ ಆರೋಗ್ಯವಂತರಾಗಿ ಜೀವನದ ಅಂತಿಮದಿನಗಳ ಕಡೆಗೆ ಹೋಗಬೇಕು ಎಂಬುದು ಪ್ರತಿಯೊಬ್ಬರ ಬಯಕೆ. ಆ ನಿಟ್ಟಿನಲ್ಲಿ ಎಲ್ಲಾ ವಯೋಮಾನದವರು ಸಹ ಪ್ರತಿದಿನ ಬೆಳಿಗ್ಗೆ ಒಂದು ಗಂಟೆ ಯೋಗಭ್ಯಾಸ ಮಾಡುವುದು ಭವಿಷ್ಯದ ಆರೋಗ್ಯದೃಷ್ಟಿಯಿಂದ ತುಂಬ ಒಳ್ಳೆಯದು ಹಾಗೂ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಿಂದದೇ ರೂಢಿಸಿಕೊಂಡರೆ ತಾವುಗಳು ಮುಂದೆ ಬರುವಂತ ದಿನಗಳಲ್ಲಿ ಯಶಸ್ಸು ಸಾಧ್ಯ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಯೋಗಬಂದು ರವಿ, ದೈಹಿಕ ಶಿಕ್ಷಕ
.ಮಂಜು, ಉಮೇಶ್,
ಶಿಕ್ಷಕ ಕುಮಾರಸ್ವಾಮಿ, ಸುಮರಾಣಿ, ಚೈತ್ರ, ಆಯುಷ್ಯ, ಮಂಜುನಾಥ, ದೇವಕಿ, ವಿಮಲ, ವಿನೂತ, ಅಮೂಲ್ಯ, ಆಶಾರಾಣಿ, ಹಜೀರ, ಭಾನುಮತಿ ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *