- ಚಾಮರಾಜನಗರದಲ್ಲಿ ಮದಕರಿನಾಯಕ ಜಯಂತಿ ಆಚರಣೆ
ಚಾಮರಾಜನಗರ: ಚಿತ್ರದುರ್ಗದಲ್ಲಿರುವ ನಾಡದೊರೆ ರಾಜವೀರ ಮದಕರಿನಾಯಕ ಕೋಟೆಯನ್ನು ಅಭಿವೃದ್ಧಿಪಡಿಸಿ ಸಂರಕ್ಷಣೆ ಮಾಡಬೇಕು ಎಂದು ನಗರಸಭಾ ಮಾಜಿ ಸದಸ್ಯ ಸಿ.ಎಂ.ಶಿವರಾಜ್ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಸಂತೇಮರಹಳ್ಳಿ ವೃತ್ತದಲ್ಲಿ ನಾಯಕ ಸಮುದಾಯ ವತಿಯಿಂದ ನಡೆದ ನಾಡದೊರೆ ರಾಜವೀರ ಮದಕರಿನಾಯಕ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಚಿತ್ರದುರ್ಗದ ಕೊನೆಯ ಪಾಳೇಗಾರರು, ನಾಡುಕಂಡಂತಹ ಶ್ರೇಷ್ಠ ಸ್ವಾಭಿಮಾನಿ ದೊರೆ ರಾಜವೀರಮದಕರಿನಾಯಕ ಶೌರ್ಯ, ನಾಡಭಕ್ತಿ, ಕೆಚ್ಚೆದೆಯ ಹೋರಾಟದ ಪ್ರತೀಕವಾಗಿದ್ದರು. ನಾಡಿಗೆ ಅಪಾರ ಕೊಡುಗೆ ನೀಡಿರುವ ಮದಕರಿನಾಯಕರ ಕೋಟೆಯನ್ನು ಸರ್ಕಾರ ಅಭಿವೃದ್ಧಿಪಡಿಸಿ, ಸಂಕರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಜನಾಂಗದ ಮುಖಂಡರಾದ ಕೆಲ್ಲಂಬಳ್ಳಿ ಸೋಮ ನಾಯಕ, ನಗರಸಭಾ ಮಾಜಿ ಅಧ್ಯಕ್ಷ
ಸುರೇಶ್ ನಾಯಕ್, ನಗರಸಭಾ ಸದಸ್ಯ
ಸಿ.ಎಂ. ಶಿವರಾಜ್, ಕಿಚ್ಚ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ, ಮಹದೇಶ್ವರ ಆಟೋ ಮಾಲೀಕರ ಸಂಘದ ಅಧ್ಯಕ್ಷ ಮಹೇಶ್, ಬಿಜೆಪಿ ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಸ್ವಾಮಿ, ಸಂತೋಷ್, ಬಸವರಾಜು, ರಘು, ಸತೀಶ್, ನಾಗೇಶ್, ಮಹೇಶ್, ಶಿವಮೂರ್ತಿ, ಬಂಗಾರನಾಯಕ,
ಬುಲೆಟ್ ಚಂದ್ರು,
ಜಿ.ಬಂಗಾರು, ಆಟೋ ಮಂಜು,ಕೆಲ್ಲಂಬಳ್ಳಿ ಚಂದ್ರು, ಸುನಿಲ್, ಕೆಲ್ಲಂಬಳ್ಳಿ ಶಿವು ಇತರರು ಹಾಜರಿದ್ದರು.