
- ಶಾಸಕ ದರ್ಶನ್‌ಧ್ರುವನಾರಾಯಣ್‌ರಿಂದ ಕಾನೂನು ಪದವಿ ವಿದ್ಯಾರ್ಥಿಗಳಿಗೆ ಬ್ಲೇಜರ್(ಕಪ್ಪು ಕೋಟು) ಕೊಡುಗೆ
ಚಾಮರಾಜನಗರ: ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಲ್ಲಿ ಅಭಿವೃದ್ದಿಪಡಿಸಬೇಕೆಂಬ ಉದ್ದೇಶದಿಂದ ಸಂಸದರಾಗಿದ್ದ ದಿ.ಆರ್. ಧ್ರುವನಾರಾಯಣ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಅವರ ಶ್ರಮದ ಫಲವೇ ಕಾನೂನು ಕಾಲೇಜು ಸ್ಥಾಪನೆ ಎಂದು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ತಿಳಿಸಿದರು.
ನಗರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪ್ರಥಮ ವರ್ಷದ ಕಾನೂನು ಪದವಿ ವಿದ್ಯಾರ್ಥಿಗಳಿಗೆ ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್‌ಧ್ರುವನಾರಾಯಣ್ ಅವರು ಬ್ಲೇಜರ್(ಕಪ್ಪುಕೋಟು)ಅನ್ನು ಕೊಡುಗೆಯಾಗಿ ನೀಡಿದ್ದು, ಇದನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.
ಎರಡು ಬಾರಿ ಸಂಸದರಾಗಿ, ಮತ್ತೇರಡು ಬಾರಿ ಶಾಸಕರಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಅಭಿವೃದ್ದಿಗೆ ತಮ್ಮದೇ ಆದ ಕೊಡುಗೆಯನ್ನು ದಿ. ಧ್ರುವನಾರಾಯನ್ ಅವರು ನೀಡಿದ್ದಾರೆ. ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯನ್ನು ಅಭಿವೃದ್ದಿಪಡಿಸಬೇಕೆಂಬ ಹಂಬಲದೊಂದಿ ಮೆಡಿಕಲ್ ಕಾಲೇಜು, ಕೇಂದ್ರಿಯ ವಿದ್ಯಾಲಯ, ಕೃಷಿ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಏಕಲವ್ಯ ಶಾಲೆ ಸೇರಿದಂತೆ ಅನೇಕ ವಸತಿ ಶಾಲೆಯನ್ನು ಜಿಲ್ಲೆಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಇದರೊಂದಿಗೆ ದಿ. ಎಚ್.ಎಸ್. ಮಹದೇವಪ್ರಸಾದ್ ಅವರು ಕೊಡುಗೆಯು ಬಯº ಬಹಳಿದೆ. ಇವರಿಬ್ಬರು ಜಿಲ್ಲೆಯ ಅಭಿವೃದ್ದಿಗಾಗಿ ಜೋಡೆತ್ತಿದಂತೆ ದುಡಿಯುತ್ತಿದ್ದಾರೆ. ಅವರ ಅಕಾಲಿಕ ಮರಣದಿಂದ ಜಿಲ್ಲೆಗೆ ಹಾಗೂ ನಮಗೆ, ನಿಮಗೆ ಹೆಚ್ಚಿನ ನಷ್ಟವಾಗಿದೆ. ಇವರ ಮಕ್ಕಳಾದ ದರ್ಶನ್, ಮತ್ತು ಗಣೇಶ್ ಪ್ರಸಾದ್ ಶಾಸಕರಾಗಿ ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಶಾಸಕ ದರ್ಶನ್ ಧ್ರುವನಾರಾಯಣ್ ಓರ್ವ ವಕೀಲರು, ಅವರಿಗೆ ಕಾನೂನು ವಿದ್ಯಾರ್ಥಿಗಳ ಸಂಕಷ್ಟ ಅರಿವಿದೆ. ಹೀಗಾಗಿ ನಿಮ್ಮ ಮನವಿಗೆ ಸ್ಪಂದಿಸಿ, ಬ್ಲೇಜರ್ ಕೊಡಿಸಿದ್ದಾರೆ. ಇನ್ನು ಹೆಚ್ಚಿನ ರೀತಿಯಲ್ಲಿ ಅವರು ಸಹಾಯ ಮಾಡಲಿದ್ದಾರೆ. ಅವರಿಗೆ ಸಹ ತಂದೆಯಂತೆ ಚಾನಗರ ಜಿಲ್ಲೆಯ ಬಗ್ಗೆ ಅಪಾರ ಪ್ರೀತಿ ಇದೆ ಎಂದು ಮರಿಸ್ವಾಮಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ಮಾತನಾಡಿ, ಸಂಸದರಾಗಿದ್ದ ಧ್ರುವನಾರಾಯಣ್ ಅವರಿಗೆ ಜಿಲ್ಲೆಯಲ್ಲಿ ಕಾನೂನು ಕಾಲೇಜು ಆರಂಭಿಸಬೇಕೆಂಬ ಕನಸು ಇತ್ತು. ಇದನ್ನು ನೆನಸಲು ಮಾಡಲು ಅವರ ಮಾಡಿದ ಪ್ರಯತ್ನಗಳು ಹಲವು, ಉತ್ತರದ ಬೀದರ್‌ಗೆ ಮಂಜೂರು ಆಗಿದ್ದ ಕಾನೂನು ಕಾಲೇಜನ್ನು ದಕ್ಷಿಣದ ಚಾ.ನಗರಕ್ಕೆ ತಂದದ್ದೇ ಅದ್ಬುತ. ಅಂದಿನ ಕಾಂಗ್ರೆಸ್ ಸರ್ಕಾರ ದ ಅವಧಿಯಲ್ಲಿ ಕಾನೂನು ಸಚಿವರಾಗಿದ್ದ ಜಯಚಂದ್ರ ಅವರ ಮುಖಾಂತರ ಜಿಲ್ಲೆಯಲ್ಲಿ ಕಾಲೇಜಿಗೆ ಅಗತ್ಯವಾದ ಎಲ್ಲಾ ಮೂಲಭೂತ ಸೌಲಭ್ಯವನ್ನು ಕಲ್ಪಿಸಿಕೊಡುವ ಭರಸವೆಯೊಂದೇ ಕಾಲೇಜು ಆರಂಭಕ್ಕೆ ಅನುಮತಿ ಪಡೆದುಕೊಂಡು ಬಂದರು. ನಂತರ ದಿನಗಳಲ್ಲಿ ಶಾಸಕ ಪುಟ್ಟರಂಗಶೆಟ್ಟರು, ಸಂಸದರಾದ ಸುನೀಲ್ ಬೋಸ್ ಅವರುಗಳ ಪ್ರಯತ್ನದಿಂದ ಕಾಲೇಜು ಆರಂಭವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಲಲಿತಾ ಬಾಯಿ, ಜಿಲ್ಲಾ ಕಾಂಗ್ರೆಸ್ ಮಧ್ಯಮ ಕಾರ್ಯದರ್ಶಿ ಗೌಡಹಳ್ಳಿ ರಾಜೇಶ್, ಎನ್‌ಎಸ್‌ಯುಐನ ಅಧ್ಯಕ್ಷ ನಾಗು ಮೋಹನ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಕ್ಷಯ್, ವಿದ್ಯಾರ್ಥಿ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶ್ಚಿತ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಇದ್ದರು.