ಚಾಮರಾಜನಗರ: ಯುವಜನತೆ ಮಧ್ಯಪಾನ ಧೂಮಪಾನ ದಿಂದ ದೂರ ಇರಬೇಕು ಎಂದು ಸೋಮವಾರಪೇಟೆ ಎಂ ಸಿ ಎಸ್ ಪಬ್ಲಿಕ್ ಶಾಲೆ ಪ್ರಾಂಶುಪಾಲ ಕೆ ಶಶಿಧರ್ ಮೂರ್ತಿ ತಿಳಿಸಿದರು
ಪಟ್ಟಣದ ಸೋಮವಾರಪೇಟೆ ಎಂಸಿಎಸ್ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ತಂಬಾಕು ರಹಿತ ದಿನ ಆಚರಣೆಯ ಹಾಗೂ ಉಪನ್ಯಾಸ ಕಾರ್ಯಕ್ರಮ ದಲ್ಲಿ ಮಾತನಾಡಿ ಇಂದಿನ ಯುವ ಜನತೆ ಕೆಟ್ಟಚಟ ಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ,ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ನರಳಿ ನರಳಿ ಪ್ರಾಣ ಬಿಡುವಂತ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಮಕ್ಕಳಿಗೆ ಪ್ರಾತ್ಯಕ್ಷಿಕೆ ತೋರಿಸುವುದರ ಮೂಲಕ ಕಿವಿಮಾತು ಹೇಳಿದರು.
ಎಂಸಿಎಸ್.ಪ್ರೌಢಶಾಲಾ ಮುಖ್ಯೋಪಾಧ್ಯಾಯ ಮಹದೇವಸ್ವಾಮಿ . ಮಾತನಾಡಿ ಪ್ರಾಥಮಿಕ ಅಂತ್ಯದಲ್ಲಿ,ತಂಬಾಕು ಸೇವನೆ ತುಂಬಾ ಅಪಾಯ ಇದೆ ಆದ್ದರಿಂದ ಮಧ್ಯಪಾನ ಧೂಮಪಾನ ಇದರ ಬಗ್ಗೆ ಪೋಷಕರ ಬಗ್ಗೆ ಅರಿವು ಮೂಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು
ಕಾರ್ಯಕ್ರಮಕ್ಕೆ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ ಬಂಗಾರು ಚಾಲನೆ ನೀಡಿ
ಮಾತನಾಡಿ ಯುವ ಪೀಳಿಗೆ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ. ಬಿಡುವಿನ ಸಂದರ್ಭದಲ್ಲಿ ದೇಶದ ನಾಯಕರ ಗ್ರಂಥಗಳನ್ನು ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು ಕಾರ್ಯಕ್ರಮದಸಂಚಾಲಕ ಚಿತ್ರಕಲೆ, ಶಿಕ್ಷಕ ಸಂಪತ್ ಕುಮಾರ್ ಮಕ್ಕಳಿಗೆ ತಂಬಾಕು ಸೇವನೆಯಿಂದ ರೋಗಗಳಿಗೆ ತುತ್ತಾಗಿ ಆಸ್ಪತ್ರೆಗೆ ಲಕ್ಷಾಂತರ ಹಣ ಕಟ್ಟುವಂತ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಹೇಳಿದರು.. ಆದ್ದರಿಂದ ಪ್ರತಿ ಗ್ರಾಮ ಮಟ್ಟದಲ್ಲಿ ಇದರ ಬಗ್ಗೆ ಜಾಗೃತಿ ಜಾಥಾ ಹಾಗೂ ಬಿತ್ತಿ ಪತ್ರಗಳ ಮೂಲಕ. ಪ್ರಜ್ಞಾವಂತ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಅರಿವು ಮೂಡಿಸುವ ಕರ್ತವ್ಯ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು
ಎಂಸಿಎಸ್ ಶಿಕ್ಷಣ ಸಂಸ್ಥೆ ಶಿಕ್ಷಕರು. ವಿದ್ಯಾರ್ಥಿಗಳು ಹಾಜರಿದ್ದರು