ಚಾಮರಾಜನಗರ: ಜೀತದಾಳುಗಳಿಗೆ ಬಿಡುಗಡೆ ಪತ್ರ ವಿಳಂಬ ಖಂಡಿಸಿ ರೂಟ್ಸ್ ಫಾರ್ ಫ್ರೀಡಂ ಸಂಘಟನೆ ನೇತೃತ್ವದಲ್ಲಿ ಜೀತ ವಿಮುಕ್ತರು ನಗರದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಎದುರು ಸಂಘಟನೆಯ ಜಿಲ್ಲಾ ಸಂಚಾಲಕ ಜಿ.ಕೆ.ಕುನ್ನಹೊಳಿಯಯ್ಯ ಅವರ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನಾ ಜಿಲ್ಲಾ ಸಂಚಾಲಕ ಜಿ.ಕೆ.ಕುನ್ನಹೊಳಿಯಯ್ಯ ಮಾತನಾಡಿ, ಜಿಲ್ಲೆಯ ಯಳಂದೂರು ಮತ್ತು ಗುಂಡ್ಲುಪೇಟೆ ತಾಲೂಕಿನಲ್ಲಿ ಒಟ್ಟು 59 ಮಂದಿ ಜೀತದಾಳನ್ನು ಅಧಿಕಾರಿಗಳ ಮುಖಾಂತರ ಜೀತರೆಂದು ವರದಿಯಾಗಿದ್ದರು ಜೀತ ವಿಮುಕ್ತ ಪತ್ರಕೊಡದೆ ವಿಳಂಬ ಮಾಡುತ್ತಿ ದ್ದಾರೆ ಎಂದು ಆರೋಪಿಸಿದರು.
ಯಳಂದೂರು ತಾಲೂಕಿನಲ್ಲಿ 2018ರ ಸಾಲಿನಲ್ಲಿ 42 ಜೀತದಾಳಗಳನ್ನು ಗುಂಡ್ಲುಪೇಟೆ ತಾಲೂಕಿನಲ್ಲಿ 17 ಮಂದಿ ನಿಯೋಜನೆಗೊಂಡಿದ್ದು, ತನಿಖೆ ತಂಡ ರಚನೆ ಮಾಡಿ ಆರ್‌ಐ, ವಿಎ, ಪಿಡಿಓ ನೋಡಲ್ ಅಧಿ ಕಾರಿಗಳು 1-9ನೇ ಅನುಬಂಧ ಫಾರ್ಮ್ ತನಿಖೆಮಾಡಿ ಜೀತರೆಂದು ವರದಿ ಮಾಡಿರುತ್ತಾರೆ. ಆದರೆ ಜೀತದಾಳುಗಳಿಗೆ ಇನ್ನೂ ಬಿಡುಗಡೆ ಪತ್ರ ಕೊಡದೆ ವಿಳಂಬ ಮಾಡಿರುತ್ತಾರೆ. ಆದ್ದರಿಂದ ಜೀತದಾಳಗಳಿಗೆ ಶೀಘ್ರ ಜೀತ ವಿಮುಕ್ತ ಪತ್ರ ಕೊಡಿಸಬೇಕು ಎಂದು ಆಗ್ರಹಿಸಿದರು.
40 ವರ್ಷಗಳ ಹಿಂದೆಯೇ ಜೀತಪದ್ಧತಿ ರದ್ದುಪಡಿಸಬೇಕು ಎಂದು ಕಾನೂನು ಜಾರಿಗೆ ಬಂದರು ಯಾವುದೇ ಪ್ರಯೋಜನವಾಗಿಲ್ಲ. ಈ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಲು ಡಾ. ಬಿ.ಆರ್.ಅಂಬೇಡ್ಕರ್ ಅವರು ಕಾನೂನು ಜಾರಿ ಮಾಡಿದರು. ಆದರೆ ಪ್ರಸ್ತುತ ಜನಪ್ರತಿನಿಧಿಗಳು, ಅಧಿಕಾರಿಗಳು, ನಮ್ಮನ್ನು ಆಳುವ ಸರ್ಕಾರಗಳು ಇದರ ಬಗ್ಗೆ ಚಕಾರವೆತ್ತಿಲ್ಲ. ಜೀತ ಪದ್ದತಿ ನಿರ್ಮೂಲನೆ ಮಾಡುವಲ್ಲಿ ವಿಫಲವಾಗಿವೆ ಎಂದು ದೂರಿದರು.
ತಕ್ಷಣವೇ ಉಪ ವಿಭಾಗ ಮಟ್ಟದಲ್ಲಿ ಜಾಗೃತಿ ಸಭೆ ಕರೆಯಬೇಕು. ಜಿಲ್ಲೆಯಲ್ಲಿ ಬೇರೆ ರಾಜ್ಯಗಳಿಂದ ಬಂದಿರುವ ವಲಸೆ ಕಾರ್ಮಿಕರ ಬಗ್ಗೆ ಸಮೀಕ್ಷೆ ಮಾಡುವುದು. ಯಳಂದೂರು, ಗುಂಡ್ಲುಪೇಟೆ ತಾಲೂಕಿನ ಒಟ್ಟು 59 ಮಂದಿಗೆ ಜೀತವಿಮುಕ್ತಪತ್ರ ಕೊಡಿಸಬೇಕು. ಬಿಡಗಡೆ ಪತ್ರ ಕೊಟ್ಟಿರುವ ವಿಮುಕ್ತರಿಗೆ ಮಾಶಾಸನ ಕೊಡಿಸಬೇಕು. ಜೀತ ವಿಮುಕ್ತ ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳು ಬಂದು ನಮ್ಮ ಬೇಡಿಕೆಗಳನ್ನು ಈಡೇರಿಸುವ ತನಕ ಧರಣಿ ಕೈ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಧರಣಿಯಲ್ಲಿ ಮರಿಸ್ವಾಮಿ, ನಾಗರಾಜು, ಕೃಷ್ಣಯ್ಯ, ಸಿದ್ದರಾಜು, ರಾಜು, ಗುರುಮಲ್ಲಪ್ಪ, ಕರಿಯಯ್ಯ, ಗೋಪಾಲಯ್ಯ, ಶಿವಯ್ಯ, ದೊಡ್ಡಯ್ಯ ಕಾಲೋನಿ, ಕೆಂಪಯ್ಯ, ಮಹೇಶ್ ಇತರರ ಭಾಗವಹಿಸಿದ್ದರು.