- ಸಿಮ್ಸ್‌ನಲ್ಲಿ ಅಂತರಾಷ್ಟ್ರೀಯ ಶುಶ್ರೂಷಕ ಅಧಿಕಾರಿಗಳ ದಿನಾಚರಣೆ
ಚಾಮರಾಜನಗರ: ಆಧುನಿಕ ನರ್ಸಿಂಗ್‌ನ ಸಂಸ್ಥಾಪಕಿ ಫ್ಲಾರೆನ್ಸ್ ನೈಟಿಂಗೇಲ್ ಅವರ ನಿಸ್ವಾರ್ಥ ಸೇವೆ ಮತ್ತು ತ್ಯಾಗ ನಿಜಕ್ಕೂ ಶ್ರೇಷ್ಠವಾದುದು. ಗಾಯಾಳು ಸೈನಿಕರ ಪಾಲಿಗೆ ‘ದೇವತೆ’ಯಂತೆ ಹಗಲಿರುಳು ದುಡಿದ ಅವರು, ವೈದ್ಯಕೀಯ ಮತ್ತು ದಾದಿಯರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಇತಿಹಾಸದಲ್ಲಿ ಸದಾ ಸ್ಮರಣೀಯ ಎಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಬೋಧನಾ ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕ ಹೆಚ್.ಜಿ. ಮಂಜುನಾಥ್ ಹೇಳಿದರು.
ನಗರದ ಯಡಬೆಟ್ಟದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಬೋಧನಾ ಆಸ್ಪತ್ರೆಯಲ್ಲಿ ನಡೆದ ಅಂತರಾಷ್ಟ್ರೀಯ ಶುಶೂಷಕ ಅಧಿಕಾರಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂತಾರಾಷ್ಟ್ರೀಯ ಶುಶ್ರೂಷಕ ಅಧಿಕಾರಿಗಳ ದಿನಾಚರಣೆ ಯನ್ನು ಪ್ರತಿ ವರ್ಷ ಮೇ 12 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಆಧುನಿಕ ನರ್ಸಿಂಗ್‌ನ ಸಂಸ್ಥಾಪಕಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಶುಶ್ರೂಷಕರು ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅಮೂಲ್ಯವಾದ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದರು.
ಫ್ಲಾರೆನ್ಸ್ ನೈಟಿಂಗೇಲ್ ಅವರ ನಿಸ್ವಾರ್ಥ ಸೇವೆ ಮತ್ತು ತ್ಯಾಗ ನಿಜಕ್ಕೂ ಶ್ರೇಷ್ಠವಾದುದು. ಗಾಯಾಳು ಸೈನಿಕರ ಪಾಲಿಗೆ ‘ದೇವತೆ’ಯಂತೆ ಹಗಲಿರುಳು ದುಡಿದ ಅವರು, ವೈದ್ಯಕೀಯ ಮತ್ತು ದಾದಿಯರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಇತಿಹಾಸದಲ್ಲಿ ಸದಾ ಸ್ಮರಣೀಯ.
ಮೈಸೂರಿನ ಕೆ.ಆರ್. ಆಸ್ಪತ್ರೆಯ ಮಾದರಿಯಲ್ಲಿ ಸಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡೋಣ ಎಂದು ಈ ಆಸ್ಪತ್ರೆಗೆ ಬಂದೆ ಆದರೆ ಇಲ್ಲಿ ಎಲ್ಲ ರೀತಿಯ ಸೇವೆ ಕೊಡಲು ವಸ್ತುಗಳಿಲ್ಲ. ಆದರಿಂದ ಬಹಳ ನೋವಾಗಿದೆ. ಕಳೆದ ಮೂರು ವರ್ಷದ ಅವಧಿಯಲ್ಲಿ ಓಪಿಡಿ ಸೇವೆಯಿಂದ ಎಮಜೆಸ್ಸಿ ಸೇವೆ ತನಕ ಮಾಡಲಾಯಿತು. ಸಿಮ್ಸ್ ನ ಎಲ್ಲ ಕಡೆಯೂ ಗುರುತಿಸುತ್ತಿದ್ದಾರೆ ಎಂದರು.
ರೋಗಿಗಳಿಗೆ ಆಸ್ಪತ್ರೆಗಳಲ್ಲಿ ನರ್ಸ್‌ಗಳನ್ನು ಸೃಷ್ಟಿ ಮಾಡಲಾಗಿದೆ. ನರ್ಸ್‌ಗಳಿಂದ ರೋಗಿಗಳು ದೇವರನ್ನು ಕಾಣಬಹುದು. ನೀವು ರೋಗಿಗಳಿಗೆ ದೇವರು ಅಂಥಾ ನೀವು ನಿಸ್ವಾರ್ಥದಿಂದ ರೋಗಿಗಳ ಸೇವೆಯನ್ನು ನಗುನಗುತ್ತಾ ಮಾಡಬೇಕು. ಅವರು ರೋಗಗಳ ಸೇವೆ ಮಾಡಬೇಕು. ಫ್ಲಾರೆನ್ಸ್. ನೈಟಿಂಗೇಲ್ ಅವರು ಶ್ರೀಮಂತ ಕುಟುಂಬದಿಂದ ಬಂದರು ಕೂಡ ರೋಗಿಗಳ ಸೇವೆಗಾಗಿ ನರ್ಸಿಂಗ್ ಹುದ್ದೆಯನ್ನು ಆಯ್ಕೆ ಮಾಡಿಕೊಂಡರು. ಅವರ ನಿಸ್ವಾರ್ಥ ಎಂದಿಗೂ ಗೌರವಪೂರ್ವಕವಾಗಿದೆ’ ಎಂದರು.
ರೋಗಿಗಳು ಬಂದಾಗ ಯಡಬೆಟ್ಟ ಆಸ್ಪತ್ರೆಯಲ್ಲಿ ಆಗಲಿ, ಜಿಲ್ಲಾ ಆಸ್ಪತ್ರೆಯಲ್ಲಿ ಆಗಲಿ, ರೋಗಿಯೊಂದಿಗೆ ಹಂಯಮದಿಂದ ವರ್ತಿಸಿ, ಏಕೆಂದರೆ ನಮಗೆ ದೂರುಗಳು ಬರುತ್ತಿರುತ್ತವೆ. ಎಲ್ಲ ಚೆನ್ನಾಗಿ ಕೆಲಸ ಮಾಡುತಿ ದ್ದೀರಿ. ನಾವು ಒಳ್ಳೆಯ ಕೆಲಸ ಮಾಡುವಾಗ ವಿಘ್ನ ಬರುತ್ತದೆ. ಅ ವಿಘ್ನಗಳನ್ನು ಎದುರಿಸಿ ಕೆಲಸ ಮಾಡುವ ಮೂಲಕ ರೋಗಿಗಳಿಗೆ ಉತ್ತಮ ಸೇವೆ ನೀಡಬೇಕಾಗುತ್ತದೆ ಎಂದರು.
ಒಬ್ಬ ರೋಗಿಯನ್ನು ಚೆನ್ನಾಗಿ ಗುಣ ಮಾಡಿ ಮನೆಕಳುಹಿಸಿಕೊಡುವುದರಿಂದ ಸಿಗುವ ಸಂತೋಷ ಯಾವುದರಲ್ಲೂ ಸಿಗೋದಿಲ್ಲ. ಆಸ್ಪತ್ರೆ ಸ್ವಚ್ಚವಾಗಿಟ್ಟುಕೊಳ್ಳಿ. ಸೀವಮ್ಸ್ ನಿಮ್ಮ ಆಸ್ಪತ್ರೆ, ನಮ್ಮ ಆಸ್ಪತ್ರೆ ಎಂದು ತಿಳಿದುಕೊಂಡು ಕೆಲಸ ಮಾಡಿ. ಆಸ್ಪತ್ರೆ ಸ್ವಚ್ಚವಾಗಿಟ್ಟುಕೊಂಡು ರೋಗಿಯೊಂದಿಗೆ ಅಕ್ಕರೆ ಮಾತನಾಡಿ,…ರೋಗಿ ಗುಣಮುಖರಾಗುತ್ತಾರೆ ನಮ್ಮ ಬದುಕು ಸಾರ್ಥಕ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಂ.ಚಿನ್ನಭೋವಿ, ಮೆಡಿಕಲ್ ಸೂಪರಡೆಂಟ್ ಡಾ.ಸಿ.ವಿ.ಮಾರುತಿ, ನಿವಾಸಿ ವೈದ್ಯಾಧಿಕಾರಿ ಇಜಾಜ್ ವುಲ್ಲಾಖಾನ್, ಪ್ರಾಂಶುಪಾಲ ಕೆ.ಟಿ.ಅಜಯ್, ನರ್ಸಿಂಗ್ ಅಧೀಕ್ಷಕಿ ಗ್ರೇಡ್ 2 ಚಂದ್ರಕಲಾ, ಜಮುನಾ ಇತರರು ಹಾಜರಿದ್ದರು.