ರಾಜ್ಯದಲ್ಲಿ ತೀವ್ರ ಬರಗಾಲ ಇದ್ದರೂ ರಾಜ್ಯ ಸರ್ಕಾರ ಸೋನಿಯಾ ಗಾಂಧಿ ಮನೆ ಬಾಗಿಲು ಕಾಯುತ್ತಿದೆ: ಛಲವಾದಿ ನಾರಾಯಣಸ್ವಾಮಿ

ಚಾಮರಾಜನಗರ : ರಾಜ್ಯ ಸರ್ಕಾರ ಬರನಿರ್ವಹಣೆಯಲ್ಲಿ ವಿಫಲವಾಗಿದ್ದು, ರಾಜ್ಯದಲ್ಲಿ ತೀವ್ರ ಬರಗಾಲ ಇದ್ದರೂ ಕೂಡ ರಾಜ್ಯ ಸರ್ಕಾರ ರಜೆ ಹಾಕಿ ಸೋನಿಯಾ ಗಾಂಧಿ ಮನೆ ಬಾಗಿಲು ಕಾಯುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ನಗರದ ಪ್ರವಾಸಿಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಬರಗಾಲ ಅವರಿಸಿದ್ದು, ರಾಜ್ಯ ಸರ್ಕಾರ ಬರ ಅಧ್ಯಯನ ಮಾಡುವುದನ್ನು ಬಿಟ್ಟಿ ರಜೆ ಹಾಕಿ ದೆಹಲಿಯಲ್ಲಿ ಸೋನಿಯಾಗಾಂಧಿ ಮನೆ ಕಾಯುತ್ತಿದೆ ಎಂದು ಆರೋಪಿಸಿದರು.

ನಮ್ಮ ಬರ ಅಧ್ಯಯನ ತಂಡವು ಮೊದಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕ್ಷೇತ್ರ ಕನಕಪುರ ಭೇಟಿ ಕೊಟ್ಟು ಪರಿಶೀಲನೆ ಮಾಡಿದಾಗ ಎಲ್ಲ ಕೆರೆಗಳು ಬತ್ತಿ ಹೋಗಿದೆ. ಹಿಂದೆ ನೀರು ತುಂಬಿಸುವ ಕೆಲಸ ಮಾಡುತ್ತಿದ್ದಾರೆ ಈಗ ಅದನ್ನು ಮಾಡುತ್ತಿಲ್ಲವಂತೆ. ಬೋರ್‌ವೆಲ್ ಗಳಲ್ಲಿ ನೀರು ಬರುತ್ತಿಲ್ಲ ಏಕೆ ಎಂದರೆ ಅಲ್ಲಿಯ ಜಲಮೂಲಗಳೇ ಒಳಗಿಹೋಗಿವೆ. ಕಬ್ಬುಗದ್ದೆಗಳು, ಅಡಿಕೆ ತೋಟಗಳು, ರೇಷ್ಮೆ ಬೆಳೆ ಎಲ್ಲವೂ. ಒಳಗಿಹೋಗಿವೆ. ಬಾಳೆ ಕಟಾವಿನ ಹಂತದಲ್ಲಿ ಒಳಗಿದ್ದು ಅದು ಮಾರುಕಟ್ಟೆ ಹೋಗದಂತಹ ಪರಿಸ್ಥಿತಿಯಲ್ಲಿದೆ. ಆದರೆ ಅಲ್ಲಿ ರಿಯಲ್ ಎಸ್ಟೇಟ್ ದಂಧೆ ಚೆನ್ನಾಗಿ ನಡೆಯುತ್ತಿದೆ. ಗಣಿಗಾರಿಕೆ ಚೆನ್ನಾಗಿ ನಡೆಯುತ್ತಿದೆ. ಅದಕ್ಕೆ ಅವರನ್ನು ಬಂಡೆ ಬಂಡೆ ಎಂದು ಕರೀತಾರೆ’ ಎಂದರು.

ಶಿಂಷಾದಲ್ಲಿರುವ ವಿದ್ಯುತ್ ಉತ್ಪಾದನೆ ಘಟಕ ನಿಂತಿ ಹೋಗಿದೆ: ನಂತರ ಮಂಡ್ಯ ಜಿಲ್ಲೆಯ ಮಳವಳ್ಳಿಗೆ ಭೇಟಿ ನೀಡಿದಾಗ ಅಲ್ಲೂ ಕೂಡ ಎಲ್ಲ ಜಲಮೂಲಗಳು ಬತ್ತಿ ಹೋಗಿವೆ. ಶಿಂಷಾದಲ್ಲಿ ರುವ ವಿದ್ಯುತ್ ಉತ್ಪಾದನೆ ಘಟಕ ನಿಂತಿಹೋಗಿದೆ. ನೀರಿಲ್ಲ 145 ವರ್ಷಗಳಲ್ಲಿ ಪ್ರಥಮ ಬಾರಿಗೆ ನಿಂತಿ ಹೋಗಿದೆ. ಇದರಿಂದ ರಾಜ್ಯ ಬರ ಪರಿಸ್ಥಿತಿಯ ಭೀಕರತೆ ಗೊತ್ತಾ ಗುತ್ತದೆ. ಇಷ್ಟೆಲ್ಲ ಬರ ಆವರಿಸಿದ್ದರೂ ಕೂಡ ರಾಜ್ಯ ಸರ್ಕಾರ ಸೋವಿಯಾಗಾಂಧಿ ಮನೆ ಬಾಗಿಲಿನಲ್ಲಿದೆ. ರೈತರು ಸಂಕಷ್ಟ ಇಲ್ಲಿ ಯಾರಿಗೆ ಹೇಳಿಕೊಳ್ಳಬೇಕು ? ವಿರೋಧ ಪಕ್ಷದ ನಾಯಕರಾಗಿರುವ ಅಶೋಕ್ ಅವರು’ ನಾನು, ಶ್ರೀವತ್ಸ, ಜು. 4 ರಂದು ಕೆಆರ್‌ಎಸ್ ಭೇಟಿ ಕೊಟ್ಟಿದ್ದೇವು ಅಧಿಕಾರಿಗಳು 10 ಟಿಎಂಸಿ ನೀರಿದೆ ಎಂದು ಹೇಳಿದರು. 6 ಟಿಸಿಎಂ ಎರಡು ತಿಂಗಳಿಗೆ ಮಾತ್ರ ಕುಡಿಯಲು ಇದೆ. ಈಗ ಒಂದು ತಿಂಗಳು ಆಗಿದೆ. ಅದಕ್ಕಾಗಿ ಎಲ್ಲ ನೀರನ್ನು ನಿಲ್ಲಿ ಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ.. ತಮಿಳನಾಡಿನ ಕಾಟ ಶುರುವಾಗಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾದರು ಆಗ್ರಹಿಸಿದರು.

ತಮಿಳುನಾಡಿಗೆ 3.5 ಟಿಸಿಎಂ ನೀರು ಬಿಡುವಂತೆ ಕಾವೇರಿ ನ್ಯಾಯಾಧಿಕರಣ ಆದೇಶ ನೀಡಿದೆ. ಕೆಆರ್‌ಎನ್‌ನಲ್ಲಿ ಉಳಿದಿರೋದೆ 3 ಟಿಎಂಸಿ ಎಲ್ಲಿಂದ ನೀರು ಹರಿಸಬೇಕೋ, ಕಬ್ಬಿನಗದ್ದೆಗಳಿಗೆ ನೀರು ಹರಿಸಿಲ್ಲ. ಇಡೀ ಮಂಡ್ಯ ಜಿಲ್ಲೆಯ ರೈತರು ಇದೇ ನೀರನ್ನು ಆಶ್ರಯಿಸಿಕೊಂಡಿದ್ದಾರೆ.. ಅವರ ಬೆಳೆ ನಾಶವಾಯಿತು. ಕೊಳ್ಳೇಗಾಲದಲ್ಲೂ ಕಬ್ಬಿನಗದ್ದೆ, ಜೋಳ ಒಳಗಿ ಹೋಗಿದೆ ಅದಕ್ಕೆ ನೀರು ಬಿಟ್ಟರು ಪ್ರಯೋಜನವಿಲ್ಲ ಎಂದರು.
ರಾಜ್ಯ ಸರ್ಕಾರ ಈಗಾಗಲೇ ಬರ ಅಧ್ಯಯನ ನಡೆಸಿ, ನಷ್ಟವನ್ನು ಪಟ್ಟಿಮಾಡಿ ಯಾವ ಯಾವ ತಾಲೂಕು, ಅಥವಾ ಜಿಲ್ಲೆಗಳನ್ನು ಬರ ಪೀಡಿತ ಘೋಷಣೆ ಮಾಡಬೇಕಿತ್ತು. ಅದನ್ನು ಮಾಡಿಲ್ಲ…. ಸರ್ಕಾರ ಮಾಡಬೇಕಾದ ಕೆಲಸವನ್ನು ವಿರೋಧಪಕ್ಷ ಮಾಡಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ವರದಿ ಸಲ್ಲಿಸಿ ರೈತರಿಗೆ .ಬರದಿಂದಾಗಿ ಉಂಟಾಗಿರುವ ನಷ್ಟದ ಪರಿಹಾರ ಕೊಡಿಸಿಕೊಡುವಂತೆ ಒತ್ತಾಯ ಮಾಡಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ   ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಶಾಸಕ ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ
ಗೋಪಿನಾಥ್ ರೆಡ್ಡಿ, ಕೇಶವಪ್ರಸಾದ್,  ರಘುಕೌಟಿಲ್ಯ, ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ್ ಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯ ಪ್ರೋ. ಕೆ.ಆರ್‌ಮಲ್ಲಿಕಾರ್ಜುನ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ,  ಸಂಯೋಜಕ ಫಣೀಶ್, ಸ್ವಾಮಿ, ಲಿಂಗರಾಜೇಗೌಡ, ಜಿ.ಪಂ.ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ವಕ್ತಾರ ಮನೋಜ್ ಪಟೇಲ್ ,ಜಿ.ಪಂ.ಮಾಜಿ ಸದಸ್ಯ ಬಾಲರಾಜು, ಜಯಸುಂದರ್, ಅರಕಲವಾಡಿ ನಾಗೇಂದ್ರ, ಸಾಹಿತಿ ಮಂಜುಕೋಡಿಉಗನೆ
ಹಾಜರಿದ್ದರು.

Leave a Reply

Your email address will not be published. Required fields are marked *