ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಬಿಜೆಪಿ ಬರ ಅಧ್ಯಯನ ಸಮಿತಿಗೆ ಒಳಗಿದ ಜೋಳ, ಹತ್ತಿ, ಬಾಳೆ ದರ್ಶನ

ಚಾಮರಾಜನಗರ: ತಾಲೂಕಿನ ವಿವಿಧ ಗ್ರಾಮಗಳಿಗೆ ಬಿಜೆಪಿ ಬರ ಅಧ್ಯಯನ ಸಮಿತಿಯ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಬೇಡರಪುರ, ಹೆಗ್ಗೋಠಾರ, ಹರವೆ, ಮೂಡ್ನಾಕೂಡು, ಕಾವುದವಾಡಿ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಭೇಟಿ ನೀಡಿದ ಸಮಿತಿ ಅಲ್ಲಿ ರೈತರು ಬೆಳೆದಿದ್ದ ಜೋಳ, ಹತ್ತಿ, ಬಾಳೆ ಸೇರಿದಂತೆ ಇನ್ನಿತರ ಫಸಲನ್ನು ವೀಕ್ಷಣೆ ಮಾಡಿದರು.
ಹೆಗ್ಗೋಠಾರ ಗ್ರಾಮದಲ್ಲಿ ಸ್ವಾಮಿ ಎಂಬುವವರು ಬೆಳೆದಿದ್ದ ಹತ್ತಿ ಹಾಗೂ ಜೋಳ ಬೆಳೆಯು ಒಣಗಿ ನಿಂತಿದ್ದನ್ನು ನೋಡಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಜೋಳ ಫಸಲಿಗೆ ಎಷ್ಟು ಖರ್ಚು ಮಾಡಿದ್ದೀರಾ, ನಿಮಗೆ ಇದರಿಂದ ಎಷ್ಟು ನಷ್ಟವಾಗಿದೆ ಎಂದು ಕೇಳಿದರು.
ಇದಕ್ಕೆ ಉತ್ತರಿಸಿದ ರೈತ ಸ್ವಾಮಿ ಅವರು, ಜೋಳ ಫಸಲನ್ನು ಬೆಳೆಯಲು 25 ಸಾವಿರ ರೂ. ಖರ್ಚು ಮಾಡಿದ್ದೆ. ಸಮರ್ಪಕವಾಗಿ ಮಳೆ ಬಾರದೇ ಹಾಗೂ ಕೆರೆಗಳಿಗೆ ನೀರು ತುಂಬಿಸದ ಕಾರಣ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ ಎಂದರು.
ಆದ್ದರಿಂದ ಸೂಕ್ತವಾದ ಪರಿಹಾರವನ್ನು ನೀಡಲು ಸರ್ಕಾರಕ್ಕೆ ಚಾಟಿ ಬೀಸಬೇಕು ಎಂದು ನಾರಾಯಣಸ್ವಾಮಿ ಅವರ ಬಳಿ ಮನವಿ ಮಾಡಿದರು.
ಇದೇ ವೇಳೆ ಸಮೀಪದಲ್ಲೇ ಇದ್ದ ಬಾಳೆ ಫಸಲನ್ನು ನೋಡಿದರು. ನಂತರ ವಿವಿಧ ಗ್ರಾಮಗಳಿಗೆ ತೆರಳಿ ಜೋಳ ಸೇರಿದಂತೆ ಇನ್ನಿತರ ಫಸಲನ್ನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಬರ ಸಮಿತಿಯ ಸದಸ್ಯರಾದ ಎನ್.ಮಹೇಶ್, ಶಾಸಕ ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಗೋಪಿನಾಥ ರೆಡ್ಡಿ, ಕೇಶವಪ್ರಸಾದ್, ರಘು ಕೌಟಿಲ್ಯ, ಸಂಯೋಜಕ ಫಣೀಶ್, ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಕೇಂದ್ರ ಬರ ಪರಿಹಾರ ಸಮಿತಿ ಸದಸ್ಯ ಎಂ. ರಾಮಚಂದ್ರ, ಜಿ.ಪಂ.ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಮಾಜಿ ಸದಸ್ಯ ಬಾಲರಾಜು, ಎಸ್ ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜಯಸುಂದರ್,
ಸಾಹಿತಿ ಕೋಡಿಉಗನೆ ಮಂಜು, ಅರಕಲವಾಡಿ ನಾಗೇಂದ್ರ, ರಾಮಸಮುದ್ರ ಶಿವಣ್ಣ,
ಬಿಜೆಪಿ ಜಿಲ್ಲಾ ಪ್ರಧಾನ‌ ಕಾರ್ಯದರ್ಶಿ ವೃಷಭೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್,ಜಿಲ್ಲಾ ವಕ್ತಾರ ಮನೋಜ್ ಪಟೇಲ್ ಇತರರು ಹಾಜರಿದ್ದರು..

Leave a Reply

Your email address will not be published. Required fields are marked *