- ನಗರಸಭೆ ವತಿಯಿಂದ 16ನೇ ವಾರ್ಡ್ ನಾಯಕ ಸಮುದಾಯ ಭವನಕ್ಕೆ ಅಡುಗೆಪಾತ್ರೆ ವಿತರಣೆ
ಚಾಮರಾಜನಗರ: ನಗರಸಭೆಯ 2026-07ನೇ ಸಾಲಿನ ಶೇ 24.10% ಯೋಜನೆಯ ಅನುಮೋದಿತ ಕ್ರಿಯಾಯೋಜನೆ ಅನುದಾನದಲ್ಲಿ ನಗರದ 16ನೇ ವಾರ್ಡ್‌ನ ನಾಯಕ ಸಮುದಾಯ ಭವನಕ್ಕೆ ಅಡುಗೆ ಪಾತ್ರೆ, ಇನ್ನಿತರ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಯುವ ಮುಖಂಡ ಬುಲೆಟ್‌ಚಂದ್ರು ಮಾತನಾಡಿ. ನಗರಸಭೆಯ 2026-07ನೇ ಸಾಲಿನ ಶೇ.24.10 %ಯೋಜನೆಯ ಅನುಮೋದಿತ ಕ್ರಿಯಾಯೋಜನೆ ಅನುದಾನದಲ್ಲಿ ನಗರದ 16ನೇ ವಾರ್ಡ್ ನ.ನಾಯಕ ಸಮುದಾಯ ಭವನಕ್ಕೆ ಅಡುಗೆ ಪಾತ್ರೆ, ಇನ್ನಿತರ ಸಾಮಾಗ್ರಿಗಳನ್ನು ವಿತರಿಸಿದೆ. ಕಳೆದ 2 ವರ್ಷಗಳ ಹಿಂದೆ ನಗರಸಭಾ ಅಧ್ಯಕ್ಷರಾಗಿದ್ದ ಸುರೇಶ್ ಅವರಿಗೆ ಸಮುದಾಯ ಭವನಕ್ಕೆ ಅಡುಗೆ ಪಾತ್ರೆಗಳನ್ನು ಕೊಡಿಸಿಕೊಡುವಂತೆ ಅರ್ಜಿ ಸಲ್ಲಿಸಿದ್ದೇವೆ. ಅದರಂತೆ ನಗರಸಭೆಯ ಸಮುದಾಯದ ಸಂಘಟನಾಧಿಕಾರಿ ವೆಂಕಟನಾಯಕ್ ಸಮುದಾಯದವರು ಅವರು ಹೆಚ್ಚಿನ ಕಾಳಜಿ ವಹಿಸಿ ಕೊಡಿಸಿಕೊಟ್ಟಿದ್ದಾರೆ. ಅದನ್ನು ಸಮುದಾಯದವರು ಸದುಪಯೋಗಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆಯ ಸಂತೋಷ್, ನವೀನ್. ಮಹೇಶ್, ಮಂಜುನಾಥ್, ರವಿ, ನಾಗಣ್ಣ, ಕುಮಾರ್ ಹಾಜರಿದ್ದರು.