ಚಾಮರಾಜನಗರ: ಚಾಮರಾಜನಗರ ಜಿಲ್ಲಾ ನ್ಯಾಯಾಂಗ ಘಟಕ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಶೀಘ್ರ ಲಿಪಿಗಾರರು ಗ್ರೇಡ್-3 ಎರಡು ಹುದ್ದೆ, ಬೆರಳಚ್ಚುಗಾರರ 6 ಹುದ್ದೆ, ಬೆರಳಚ್ಚು ನಕಲುಗಾರರ 4 ಹಾಗೂ ಸೇವಕರ 13 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಶೀಘ್ರ ಲಿಪಿಗಾರರ ಹುದ್ದೆಗೆ ಪರಿಶಿಷ್ಟ ಜಾತಿ (ಅಂಗವಿಕಲ) ಹಾಗೂ ಪ್ರವರ್ಗ 2ಎ (ಅಂಗವಿಕಲ) ಅಭ್ಯರ್ಥಿಗಳಿಗೆ ತಲಾ ಒಂದು ಹುದ್ದೆಗಳು ಖಾಲಿ ಇವೆ. ಅಭ್ಯರ್ಥಿಗಳು ದ್ವಿತೀಯ ಪಿ.ಯು.ಸಿ. ಅಥವಾ ಅದಕ್ಕೆ ತತ್ಸಮಾನದ ಯಾವುದೇ ಮೂರು ವ?ದ ಡಿಪ್ಲೋಮೋ ಕೋರ್ಸ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸಿರುವ ಹಿರಿಯ ದರ್ಜೆ ಕನ್ನಡ ಮತ್ತು ಆಂಗ್ಲ ಭಾ?ಗಳ ಬೆರಳಚ್ಚು ಹಾಗೂ ಶೀಘ್ರಲಿಪಿ ವಿ?ಯದಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ಡಿಪ್ಲೋಮೋ ಇನ್ ಕಮರ್ಷಿಯಲ್ ಪ್ರಾಕ್ಟಿಸ್, ಸೆಕ್ರೆಟರಿಯಲ್ ಪ್ರಾಕ್ಟಿಸ್ ಉತ್ತೀರ್ಣರಾಗಿರಬೇಕು ಮತ್ತು ಅದರಲ್ಲಿ ಕನ್ನಡ, ಆಂಗ್ಲ ಭಾ?ಯಲ್ಲಿ ಯಾವುದಾದರೂ ಒಂದು ಭಾ?ಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚು ವಿ?ಯದಲ್ಲಿ ಉತ್ತೀರ್ಣರಾಗಿದ್ದರೆ ಅಂತಹ ಅಭ್ಯರ್ಥಿಗಳು ಉಳಿದ ಕನ್ನಡ, ಆಂಗ್ಲ ಭಾ?ಯ ಶೀಘ್ರಲಿಪಿ ಮತ್ತು ಬೆರಳಚ್ಚು ಪರೀಕ್ಷೆಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸುವ ಹಿರಿಯ ದರ್ಜೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ಬೆರಳಚ್ಚುಗಾರರ 6 ಹುದ್ದೆಗಳಿಗೆ ಸಾಮಾನ್ಯ ವರ್ಗ (ಇತರೆ), ಸಾಮಾನ್ಯ ವರ್ಗ (ಮಾಜಿ ಸೈನಿಕ), ಸಾಮಾನ್ಯ ವರ್ಗ (ಮಹಿಳೆ), ಪ್ರವರ್ಗ-2ಎ (ಇತರೆ), ಸಾಮಾನ್ಯ ವರ್ಗ (ಗ್ರಾಮೀಣ) ಹಾಗೂ ಪ್ರವರ್ಗ-3ಎ (ಮಹಿಳೆ) ವರ್ಗಗಳಿಗೆ ತಲಾ ಒಂದು ಹುದ್ದೆ ಮೀಸಲಾಗಿವೆ. ಅಭ್ಯರ್ಥಿಗಳು ದ್ವಿತೀಯ ಪಿ.ಯು.ಸಿ. ಅಥವಾ ಅದಕ್ಕೆ ತತ್ಸಮಾನದ ಯಾವುದೇ ಮೂರು ವ?ದ ಡಿಪ್ಲೋಮೋ ಕೋರ್ಸ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸಿರುವ ಹಿರಿಯ ದರ್ಜೆ ಕನ್ನಡ ಮತ್ತು ಆಂಗ್ಲ ಭಾ?ಗಳ ಬೆರಳಚ್ಚು ವಿ?ಯದಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ಡಿಪ್ಲೋಮೋ ಇನ್ ಕಮರ್ಷಿಯಲ್ ಪ್ರಾಕ್ಟಿಸ್, ಸೆಕ್ರೆಟರಿಯಲ್ ಪ್ರಾಕ್ಟಿಸ್ ಉತ್ತೀರ್ಣರಾಗಿರಬೇಕು ಮತ್ತು ಅದರಲ್ಲಿ ಕನ್ನಡ, ಆಂಗ್ಲ ಭಾ?ಯಲ್ಲಿ ಯಾವುದಾದರೂ ಒಂದು ಭಾ?ಯಲ್ಲಿ ಬೆರಳಚ್ಚು ವಿ?ಯದಲ್ಲಿ ಉತ್ತೀರ್ಣರಾಗಿದ್ದರೆ ಅಂತಹ ಅಭ್ಯರ್ಥಿಗಳು ಉಳಿದ ಕನ್ನಡ, ಆಂಗ್ಲ ಭಾ?ಯ ಬೆರಳಚ್ಚು ಪರೀಕ್ಷೆಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸುವ ಹಿರಿಯ ದರ್ಜೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ಬೆರಳಚ್ಚು ನಕಲುಗಾರರ 4 ಹುದ್ದೆಗಳಿಗೆ ಪರಿಶಿ? ಜಾತಿ (ಅಂಗವಿಕಲ), ಪ್ರವರ್ಗ-2ಎ (ಅಂಗವಿಕಲ), ಸಾಮಾನ್ಯ ವರ್ಗ (ಮಹಿಳೆ) ಹಾಗೂ ಪ್ರವರ್ಗ-1 (ಮಹಿಳೆ) ವರ್ಗಗಳಿಗೆ ತಲಾ ಒಂದು ಹುದ್ದೆಗಳು ಖಾಲಿ ಇವೆ. ಅಭ್ಯರ್ಥಿಗಳು ದ್ವಿತೀಯ ಪಿ.ಯು.ಸಿ. ಅಥವಾ ಅದಕ್ಕೆ ತತ್ಸಮಾನದ ಯಾವುದೇ ಮೂರು ವ?ದ ಡಿಪ್ಲೋಮೋ ಕೋರ್ಸ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಮತ್ತು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸಿರುವ ಕಿರಿಯ ದರ್ಜೆ ಕನ್ನಡ ಮತ್ತು ಆಂಗ್ಲ ಭಾ?ಗಳ ಬೆರಳಚ್ಚು ವಿ?ಯದಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ಡಿಪ್ಲೋಮೋ ಇನ್ ಕಮರ್ಷಿಯಲ್ ಪ್ರಾಕ್ಟಿಸ್, ಸೆಕ್ರೆಟರಿಯಲ್ ಪ್ರಾಕ್ಟಿಸ್ ಉತ್ತೀರ್ಣರಾಗಿರಬೇಕು ಮತ್ತು ಅದರಲ್ಲಿ ಕನ್ನಡ, ಆಂಗ್ಲ ಭಾ?ಯಲ್ಲಿ ಯಾವುದಾದರೂ ಒಂದು ಭಾ?ಯಲ್ಲಿ ಬೆರಳಚ್ಚು ವಿ?ಯದಲ್ಲಿ ಉತ್ತೀರ್ಣರಾಗಿದ್ದರೆ ಅಂತಹ ಅಭ್ಯರ್ಥಿಗಳು ಉಳಿದ ಕನ್ನಡ, ಆಂಗ್ಲ ಭಾ?ಯ ಬೆರಳಚ್ಚು ಪರೀಕ್ಷೆಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸುವ ಕಿರಿಯ ದರ್ಜೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ಸೇವಕರ 13 ಹುದ್ದೆಗಳಿಗೆ ಪರಿಶಿ? ಜಾತಿ (ಮಹಿಳೆ), ಸಾಮಾನ್ಯ ವರ್ಗ (ಕನ್ನಡ ಮಾಧ್ಯಮ), ಪ್ರವರ್ಗ-2ಎ (ಮಹಿಳೆ), ಸಾಮಾನ್ಯ ವರ್ಗ (ಮಹಿಳೆ), ಪರಿಶಿ? ಪಂಗಡ (ಗ್ರಾಮೀಣ), ಸಾಮಾನ್ಯ ವರ್ಗ (ಗ್ರಾಮೀಣ), ಪ್ರವರ್ಗ-3ಎ (ಗ್ರಾಮೀಣ), ಸಾಮಾನ್ಯ ವರ್ಗ (ಯೋಜನಾ ನಿರಾಶ್ರಿತ), ಪರಿಶಿ? ಜಾತಿ (ಮಹಿಳೆ), ಸಾಮಾನ್ಯ ವರ್ಗ (ಮಹಿಳೆ), ಪ್ರವರ್ಗ-2ಎ (ಮಹಿಳೆ), ಸಾಮಾನ್ಯ ವರ್ಗ (ಇತರೆ) ಹಾಗೂ ಪ್ರವರ್ಗ-1 (ಅಂಗವಿಕಲ) (ದೃ.ಮಾ) ವರ್ಗಗಳಿಗೆ ತಲಾ ಒಂದು ಹುದ್ದೆಗಳು ಖಾಲಿ ಇವೆ. ಅಭ್ಯರ್ಥಿಗಳು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. (ಕನ್ನಡ ಓದಲು ಹಾಗೂ ಬರೆಯಲು ಹಾಗೂ ಸಾಮಾನ್ಯ ಜ್ಞಾನದ ಬಗ್ಗೆ ಪರೀಕ್ಷೆ ನಡೆಸಲಾಗುವುದು).
ಅಭ್ಯರ್ಥಿಯು ಕನಿಷ್ಠ 18 ವರ್ಷ ವಯೋಮಿತಿಯಲ್ಲಿಬೇಕು. ಸಾಮಾನ್ಯ ವರ್ಗಕ್ಕೆ 40 ವರ್ಷ ಮೀರಿರಬಾರದು. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 43 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷ ಮೀರಿರಬಾರದು.
ಅರ್ಜಿಗಳನ್ನು ಕಡ್ಡಾಯವಾಗಿ ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್ ನಲ್ಲಿ ನೀಡಲಾದ ಲಿಂಕ್ ಮೂಲಕ ಆಗಸ್ಟ್ 27 ರೊಳಗೆ ಸಲ್ಲಿಸಬೇಕು. ಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು ಆಗಸ್ಟ್ 29 ಕೊನೆಯ ದಿನವಾಗಿದೆ. ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 200 ರೂ. ಅರ್ಜಿ ಶುಲ್ಕ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.
ಅಭ್ಯರ್ಥಿಯು ಅರ್ಜಿಯಲ್ಲಿ ತಮ್ಮ ಚಾಲ್ತಿಯಲ್ಲಿರುವ ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು. ಆನ್ ಲೈನ್ ಹೊರತುಪಡಿಸಿ ಖುದ್ದಾಗಿ, ಅಂಚೆ ಮೂಲಕ, ಇನ್ಯಾವುದೇ ರೀತಿಯಲ್ಲಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಯಾವುದಾದರೂ ತಾಂತ್ರಿಕ ದೋಷವಾದಲ್ಲಿ oಟಿಟiಟಿeಡಿeಛಿಡಿuiಣmeಟಿಣಠಿಜರಿಛಿhmಟಿಚಿgಚಿಡಿ@gmಚಿiಟ.ಛಿom ಇ-ಮೇಲ್ ಗೆ ದೂರುಗಳನ್ನು ಸಲ್ಲಿಸಿ ಬಗೆಹರಿಸಿಕೊಳ್ಳಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.