ಚಾಮರಾಜನಗರ: ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಬೇಸತ್ತು 21 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ ಹಿನ್ನೆಲೆ ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ ಮುಂಭಾಗ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಮೇಣದಬತ್ತಿ ಹಚ್ಚುವ ಮೂಲಕ ಮೃತ ವಿದ್ಯಾರ್ಥಿಗಳಿಗೆ ನಮನ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, 152 ನೀಟ್ ಪ್ರಶ್ನೆ ಪತ್ರಿಕೆ ಈವರಗೆ ಸೋರಿಕೆಯಾಗಿದ್ದು, 21 ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಶಿಕ್ಷಣಕ್ಷೇತ್ರವನ್ನು ಬೆಚ್ಚಿಬೀಳಿಸುವ ಸಂಗತಿಯಾಗಿದೆ.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಕೇಂದ್ರಸರ್ಕಾರ ಎಚ್ಚರವಹಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್. ಚುಡಾಅಧ್ಯಕ್ಷ ಮಹಮದ್ ಅಸ್ಗರ್, ಜಿಪಂ ಮಾಜಿಸದಸ್ಯ ಆರ್.ಬಾಲರಾಜು, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ನಾಗರತ್ನ ಕೆಪಿಸಿಸಿ ಸದಸ್ಯ ಸಯ್ಯದ್ ರಫಿ,ಚುಡಾ ಸದಸ್ಯ ಪುಟ್ಟಸ್ವಾಮಿ, ಕರಿನಂಜನಪುರ ಸ್ವಾಮಿ, ಡಿಸಿಸಿ ಕಚೇರಿ ವ್ಯವಸ್ಥಾಪಕ ನಸ್ರುಲ್‍ಖಾನ್, ಗ್ರಾ,ಪಂ ಮಾಜಿ ಅಧ್ಯಕ್ಷ ರೂಪೇಶ್, ಅಯೂಬ್ ಖಾನ್. ಅಪ್ಸರ್ ಅಹಮದ್,ಮುತ್ತಿಗೆ ದೊರೆಸ್ವಾಮಿ, ರಾಮಸಮುದ್ರ ನಾಗರಾಜು, ನಾಗಬಸವಣ್ಣ, ರಂಗಸ್ವಾಮಿ, ಎನ್ಎಸ್ ಯುಐ ಅಧ್ಯಕ್ಷ ಮೋಹನ್ (ನಗು), ನಾಗೇಂದ್ರ ಅಕ್ಷಯ್. ರಾಜು, ಮಹೇಂದ್ರಕುಮಾರ್, ಮಹೇಶ್, ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.