‘ಹೂಗಾರ’ ಚಿತ್ರದ ಡಬ್ಬಿಂಗ್ ಮುಕ್ತಾಯ

ಬೆಂಗಳೂರು: ಕೀರ್ತನ ಮೂವ್ಹಿ ಮೇಕರ್ಸ್ ಹಾಗೂ ಕೆ ಆರ್ ಎಸ್ ಪ್ರೊಡಕ್ಷನ್ ಬೆಂಗಳೂರ ಇವರ ಡಾ.ಶಿವಕುಮಾರಸ್ವಾಮಿಜಿಯವರ ಆಶೀರ್ವಾದದೊಂದಿಗೆ ನಿರ್ಮಿಸಲಾದ ‘ಹೂಗಾರ’ ಕನ್ನಡ ಚಲನಚಿತ್ರದ ಡಬ್ಬಿಂಗ್ ಹಂತದ ಕಾರ್ಯ ಮುಕ್ತಾಯವಾಗಿದೆ.

ಬಾಗಲಕೋಟ ಜಿಲ್ಲೆಯ ಇಲಕಲ್ ತಾಲೂಕಿನ ಸಿದ್ದನಕೊಳ್ಳಮಠ ಹಾಗೂ ಸಿದ್ದನಕೊಳ್ಳ ಗ್ರಾಮದ ಸುತ್ತಮುತ್ತ ಪ್ರದೇಶದಲ್ಲಿ ಮೂವತ್ತು ದಿನಗಳ ಕಾಲ ಚಿತ್ತೀಕರಣ ನಡೆಸಿ, ಉತ್ತರ ಕರ್ನಾಟಕದ ಭಾಷೆಯ ಜೊತೆಗೆ ಉತ್ತರ ಕರ್ನಾಟಕದ ಕಲಾವಿದರಿಗೂ, ಅವಕಾಶವನ್ನು ನೀಡಲಾಗಿದೆ. ಶ್ರೀಮಠದ ಪೀಠಾಧಿಪತಿಗಳಾದ ಡಾ.ಶಿವಕುಮಾರ ಸ್ವಾಮೀಜಿ ಅವರು ಚಿತ್ರದ ಹಾಡಿನಲ್ಲಿ ಅಭಿನಯಿಸಿದ್ದು ವಿಶೇಷವಾಗಿದೆ. “ಇದು ಕೇವಲ ಒಂದು ಕಂಬವಲ್ಲ… ಇದು ಕರ್ನಾಟಕದ ಆತ್ಮ. ಇದು ಶಕ್ತಿ, ಶಿಸ್ತು ಮತ್ತು ಸಾಧನೆಯ ಪ್ರತೀಕ.” ಎಂದು ನಿರ್ದೇಶಕ ಲೋಕೇಶ ಹೇಳುತ್ತಾರೆ.

ತಾರಾ ಬಳಗದಲ್ಲಿ ಲೋಕೇಶ್ ವಿದ್ಯಾಧರ , ಸುನಂದಾ ಕಲ್ಬುರ್ಗಿ ,ಕಾಮಿಡಿ ಕಿಲಾಡಿಗಳು ಖ್ಯಾತಿಯ ದಾನಪ್ಪ , ಮಾಂತೇಶ್ ಹಳ್ಳೂರ, ಮಾ. ತೇಜಸ್ ಶಿವರಾಜ್ , ಸಂತೋಷ್ , ಕಿರಣ್ ಹೂಗಾರ , ಅಪೂರ್ವ , ಮುತ್ತುರಾಜ್ ಬುದ್ನಿ , ಕಿಟ್ಟಿ ತಾಳಿಕೋಟೆ ,ಕುಮಾರ್ ಬಾಬು, ಸತೀಶ್ ಶೆಟ್ಟಿ , ಮಂಜುಳಾ ಅರಸ್, ಭಾವನ ಶಿಂಧೆ , ವಿದ್ಯಾ ಗಂಜಿಹಾಳ ,ದಶರಥ, ಮೊದಲಾದವರಿದ್ದಾರೆ.

ಮಲ್ಲಕಂಬ ಸಜ್ಜುಗೊಳಿಸಿದವರು ಜೈ ಕರ್ನಾಟಕ ಮಲ್ಲಕಂಬ ತಂಡದ ಸಿದ್ಧಾರೂಢ ಹೂಗಾರ ಮತ್ತು ತಂಡದ ಯುವಕರು, ಮಲ್ಲಕಂಬ ವ್ಯವಸ್ಥೆ ದೀಪಾ ಆರ್. ಶಿವರಾಜ್, ಸ್ಥಾಪನೆ ಹನುಮಂತು, ಕಂಬ ನಿರ್ಮಾಣ ಮತ್ತು ಮೆರಗು ಮುತ್ತುರಾಜ್, ಧ್ವನಿ ಮತ್ತು ಉತ್ಸಾಹ ಎಸ್. ಕೆ. ಶಾಮ್ (ರಿದಂ ಕುಟ್ಟಿ), ಅಖಾಡ ಸಿದ್ಧತೆ ಸುನಂದಾ ಕಲ್ಬುರ್ಗಿ , ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಿಗಿ , ನೃತ್ಯ ನಾಗರಾಜ್ ,ಸಂಭಾಷಣೆ ಶಿವಂ ಬೆಂಗೇರಿ, ಸಾಹಿತ್ಯ ಲೋಕೇಶ್ ವಿದ್ಯಾಧರ್, ಶಿವರಾಜ್, ಕಿನ್ನಾಳ ರಾಜ್, ಈಗಾಗಲೇ ‘ಒಬ್ಬಟ್ಟು’ ಚಿತ್ರ ನಿರ್ದೇಶಿಸಿ ನಿರ್ಮಿಸಿದ್ದ ಲೋಕೇಶ್ ವಿದ್ಯಾಧರ್ ಕಥೆ-ಚಿತ್ರಕಥೆ-ನಿರ್ದೇಶನ ಮಾಡಿದ್ದಾರೆ. ಚಿತ್ರದ ಟ್ರೇಲರನ್ನು ಶೀಘ್ರದಲ್ಲೇ ಗದಗ ನಗರದಲ್ಲಿ ಬಿಡುಗಡೆ ಮಾಡಲಿದ್ದು ಕೀರ್ತನ ಮೂವ್ಹಿ ಮೇಕರ್ಸ್ ಹಾಗೂ ಕೆ ಆರ್ ಎಸ್ ಪ್ರೊಡಕ್ಷನ್ ಅವರು ಚಿತ್ರದ ನಿರ್ಮಾಪಕರಾಗಿದ್ದಾರೆ.

Leave a Reply

Your email address will not be published. Required fields are marked *