- ನಗರದಲ್ಲಿ ಹಿರಿಯ ನಾಗರಿಕರ ನೆಮ್ಮದಿ ಆರೈಕೆ ಕೇಂದ್ರ ಉದ್ಘಾಟನೆ.
ಚಾಮರಾಜನಗರ: ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಕೇಂದ್ರಗಳ ಸ್ಥಾಪನೆಯಿಂದ ಹಿರಿಯರಿಗೆ ಸಮಾಜದಲ್ಲಿ ಗೌರವಾನ್ವಿತ, ಸುರಕ್ಷಿತ ಜೀವನ ನಡೆಸಲು ಅನುಕೂಲ ಮಾಡಿಕೊಡುತ್ತದೆ ಎಂದು ಜಿ.ಪಂ.ಸಿಇಓ ಮೋನಾರೋತ್ ಹೇಳಿದರು.
ನಗರದ ಹೌಸಿಂಗ್‌ಬೋರ್ಡ್ ನ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನ ಎದುರು ಜನಮಿತ್ರ ಸೇವಾ ಟ್ರಸ್ಟ್, ಫೆವಾರ್ಡ್-ಕ ಹಾಗೂ ಡ್ರೀ
ಮ್ ಇಂಡಿಯಾ ನೆಟ್‌ವರ್ಕ್ ಸಹಯೋಗದಲ್ಲಿ ಆರಂಭವಾಗಲಿರುವ ಹಿರಿಯ ನಾಗರಿಕರ ಆರೈಕೆ ನೆಮ್ಮದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಜಿಲ್ಲೆಯಲ್ಲಿ ಚೆನ್ನಾಗಿ ಕಾರ್ಯಕ್ರಮಗಳು ಆಗುತ್ತಿವೆ. 2 ವರ್ಷಗಳಿಂದ ನೋಡುತಿದ್ದೇನೆ. ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು ಇರಬಹುದು ತುಂಬಾನೆ ಕಾರ್ಯಕ್ರಮಗಳು ಆಗುತಿವೆ. ಎನ್‌ಜಿಓಗಳು ತುಂಬಾ ಸಹಾಯ ಮಾಡುತ್ತವೆ. ಅದು ಒಂದು ಬಾರಿ ಆರಂಭವಾದರೆ ನಮ್ಮ ಕಡೆ ಸಹಕಾರ ಇದ್ದೆ ಇರುತ್ತದೆ ಎಂದರು.
ಏನಾದರೂ ಸಮಸ್ಯೆ ಇದ್ದರೆ ನಮ್ಮ ಹತ್ತಿರ ಬಂದರೆ ಸರಿಪಡಿಸಿಕೊಡುತ್ತೇನೆ ಆರೈಕೆ. ಕೇಂದ್ರ ಸರಿಯಾಗಿ ನಿರ್ವಹಣೆ ಆಗಬೇಕು. ಮುಂದೆ ಸರಿಯಾಗಿ ಆಗಬೇಕು. ಇದು ಮಾದರಿಯಾಗಿ ನಡೆಯುತ್ತಿರಬೇಕು. ಇದೇ ತರ ಎಲ್ಲ ಕಡೆ ಆದರೆ ನಮ್ಮ ಜಿಲ್ಲೆಯಲ್ಲಿ ಹಿರಿಯ ನಾಗರಿಕರಿಗೆ ತುಂಭಾ ಅನುಕೂಲ ಆಗುತ್ತದೆ ಎಂದರು.
ನಮ್ಮ ತಾತ, ಅಜ್ಜಿ, ತಂದೆ, ತಾಯಿಗಳ ಪರಿಶ್ರಮದಿಂದ ನಾವು ಈ ಮಟ್ಟಕ್ಕೆ. ಬಂದಿದ್ದೇವೆ. ಅವರಿಗೆ ನಮ್ಮ ಕಡೆಯಿಂದ ಏನೇನು ಆಗಬೇಕು ಅದನ್ನೆಲ್ಲ ಮಾಡಿಸೋಣ. ನಮ್ಮ ತಾತ, ಅಜ್ಜಿ, ತಂದೆ, ತಾಯಿ ರೀತಿಯಲ್ಲಿ ವೃದ್ಧರೆಲ್ಲರೂ ನೋಡಿಕೊಳ್ಳಬೇಕಾಗುತ್ತದೆ ಇಂದು ಇಲ್ಲಿ ಹಿರಿಯ ನಾಗರೀಕರ ಆರೈಕೆ ಕೇಂದ್ರ ತೆರೆದಿರುವ ಎಲ್ಲರಿಗೂ ಜಿಲ್ಲಾಡಳಿತ ಕಡೆಯಿಂದ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಫೆವಾರ್ಡ್-ಕ ರಾಜ್ಯ ಉಪಾಧ್ಯಕ್ಷ ಫಾದರ್ ಎಡ್ವರ್ಡ್ ಥಾಮಸ್ ಮಾತನಾಡಿ..ನಮ್ಮ ಸರ್ಕಾರ, ಎನ್‌ಜಿಓ, ಚರ್ಚ್, ಮಂದಿರಕ್ಕೆ ನಿರ್ಗತಿಕ ಮಕ್ಕಳು, ಮಹಿಳೆಯರು, ಹಿರಿರನ್ನು ನೋಡಿಕೊಳ್ಳುವ ಶಕ್ತಿ ಇಲ್ಲವೇ ? ಯಾವ ಭಿಕ್ಷಕು, ಹಿರಿಯ ನಾಗರೀಕರು ಬೀದಿ, ಬಸ್
ನಿಲ್ದಾಣ. ಸರ್ಕಾರಿ ಜಾಗಗಳಲ್ಲಿ ಮಲಗಬಾರದು. ಕರ್ನಾಟಕದಲ್ಲಿ ಒಂದು ಸಾವಿರ ಹಿರಿಯ…
ನಾಗರಿಕರ ಆರೈಕೆ ಕೇಂದ್ರ ಆರಂಭಿಸಲಾಗುವುದು ಎಂದರು.
ಜನಮಿತ್ರ ಸೇವಾ ಟ್ರಸ್ಟ್ ಅಧ್ಯಕ್ಷ ಕದಂಬ ನಾ ಅಂಬರೀಷ್ ಮಾತನಾಡಿ, ಫೆವಾರ್ಡ್-ಕ ಮನೆತನವೇ ಹಿರಿಯರಿಗೆ ನೆಮ್ಮದಿ ಸಿಗಬೇಕು. ఎంబ ಕಾರಣದಿಂದ ಹಿರಿಯ ನಾಗರಿಕರ ನೆಮ್ಮದಿ ಆರೈಕೆ ಕೇಂದ್ರ ಮಾಡುತ್ತಿದ್ದಾರೆ. ಆಗಾಗಿ ಜನಮಿತ್ರ ಸೇವಾ ಟ್ರಸ್ಟ್ ಬಹಳ ವಷದಿಂದ ಜನೋಪಯೋಗಿ ಕೆಲಸಗಳನ್ನು ಮಾಡಿಕೊಂಡು ಬರುತಿದೆ ಎಂದರು.
ಫೆವಾರ್ಡ್-ಕ ರಾಜ್ಯಾಧ್ಯಕ್ಷ ಮಹೇಶ್‌ಚಂದ್ರಗುರು ಮಾತನಾಡಿದರು ಹಿರಿಯ. ನಾಗರೀಕ ಕಲ್ಯಾಣ ಅಧಿಕಾರಿ ಡಾ.ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಫೆವಾರ್ಡ್-ಕ. ಜಿಲ್ಲಾ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಎನ್.ಮಂಟೇಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಚ್.ಆರ್.ಸುರೇಶ್,
ಸಂಪನ್ಮೂಲ ವ್ಯಕ್ತಿ ಡಾ.ಅಚ್ಚುತ್ ರಾವ್, ಪಿ.ಎಂ. ಚೈತನ್ಯ ನೆಟ್‌ವರ್ಕ್ ಎಂ.ಭಾಗ್ಯಮ್ಮ, ಕೆ.ಕೆ.ಪಿ. ರಾಜ್ಯಾದ್ಯಕ್ಷ ಪ್ರವೀಣ್ ಭಾರಧ್ವಜ್ ರವಿಚಂದ್ರಪ್ರಸಾದ್ ಕಹಳೆ ಇತರರು ಹಾಜರಿದ್ದರು.