ಕನ್ನಡ ಹೋರಾಟಗಾರ ಮಂಜುನಾಥ್ ಹುಟ್ಟುಹಬ್ಬ: ಆಟೋ ಚಾಲಕರಿಗೆ ಖಾಕಿ ಸಮವಸ್ತ್ರ ವಿತರಣೆ

ಚಾಮರಾಜನಗರ: ಕನ್ನಡ ಪರ ಹೋರಾಟಗಾರರು, ಸಮಾಜ ಸೇವಕ ಮಂಜುನಾಥ್ ಅವರ ಜನ್ಮದಿನದ ಪ್ರಯುಕ್ತ ಅವರ ಗೆಳೆಯರ ಬಳಗದ ವತಿಯಿಂದ ನಗರದ ನಂಜನಗೂಡು ಸರ್ಕಲ್ ವಿಶ್ವೇಶ್ವರಯ್ಯ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು.  
ಬಿಜೆಪಿ ಎಸ್ ಟಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ  ಬುಲೆಟ್ ಚಂದ್ರು ಸಮವಸ್ತ್ರ ವಿತರಿಸಿ ಮಾತನಾಡಿ, ಕನ್ನಡ ಪರ ಹೋರಾಟಗಾರರು, ಸಮಾಜ ಸೇವಕ ಮಂಜುನಾಥ್ ಅವರ ಜನ್ಮದಿನದ ಪ್ರಯುಕ್ತ ಅವರ ಗೆಳೆಯರ ಬಳಗದ ವತಿಯಿಂದ ಆಟೋ ಚಾಲಕರಿಗೆ ಖಾಕಿ ಸಮವಸ್ತ್ರ ವಿತರಿಸಲಾಗಿದೆ. ಮಂಜುನಾಥ್ ಅವರಿಗೆ ಭಗವಂತನ ಹೆಚ್ಚಿನ ಆರೋಗ್ಯ, ಆಯಸ್ಸು ಕರುಣಿಸಲಿ ಎಂದು ಆಶಿಸಿದರು.
ಆಟೋಚಾಲಕರು ನಗರದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಗಮ ಸಂಚಾರಕ್ಕೆ ಚಾಲಕರು ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಿಯೇ ಚಾಲನೆ ಮಾಡಬೇಕು. ಆಟೋ ಚಾಲಕರು ಜೀವ ವಿಮೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
 ಈ ಸಂದರ್ಭದಲ್ಲಿ ನಾಗೇಶ್ ,ಸುಬ್ಬಣ್ಣ, ಸಿದ್ದು, ಪ್ರಶಾಂತ, ರಘು, ಹೇಮಂತ್ ,ಕುಮಾರ್ ,
ವರದ, ನಾಗೇಶ್ ಹೆಗ್ಗೋಠಾರ,ಶಿವುಕುಮಾರ್ ಹಾಜರಿದ್ದರು.

Leave a Reply

Your email address will not be published. Required fields are marked *