ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ  ಒತ್ತಾಯಿಸಿ ಗ್ರಾಮಸ್ಥರಿಂದ ಜೆಇಗೆ ಮನವಿ

  • ವಿದ್ಯುತ್ ಸಮಸ್ಯೆ ಬಗೆಹರಿಸದಿದ್ದರೆ ಗ್ರಾಮಸ್ಥರೊಂದಿಗೆ ಕಚೇರಿ ಗೆ ಮುತ್ತಿಗೆ ಎಚ್ಚರಿಕೆ

ಚಾಮರಾಜನಗರ: ತಾಲೂಕಿನ ಬಡಗಲಪುರ, ಲಕ್ಷ್ಮೀಪುರ, ಸಾಣೇಗಾಲ,ಬೊಕ್ಕೇಪುರ, ಮಹದೇಶ್ವರ ಕಾಲೋನಿಯ ಭಾಗಕ್ಕೆ ಲೈನ್ ಮ್ಯಾನ್ ನೇಮಕ ಮಾಡಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು  ಎಂದು ಒತ್ತಾಯಿಸಿ  ಗ್ರಾಮದ ರೈತರು ಹರದನಹಳ್ಳಿಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಉಪ ವಿಭಾಗಕ್ಕೆ  ತೆರಳಿ ಜೆಇ ಪ್ರದೀಪ್ ಅವರಿಗೆ ಮನವಿ ಸಲ್ಲಿಸಿದರು.
   ನಮ್ಮ ಗ್ರಾಮಗಳಿಗೆ ವಿದ್ಯುತ್ ಅಸಮರ್ಪಕ ಸರಬರಾಜಿನಿಂದ ರೈತರ ಬದುಕು ದುಸ್ತರವಾಗಿದ್ದು, ಅಲ್ಲದೇ ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡುವಂತಾಗಿದೆ. ಕೂಡಲೇ ಲೈನ್ ಮ್ಯಾನ್ ನೇಮಕಮಾಡಿ  ನಮ್ಮ ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಇಲ್ಲದಿದ್ದರೆ ಗ್ರಾಮಸ್ಥರೊಂದಿಗೆ ನಿಮ್ಮ ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜೆಇ ಗೆ ಗ್ರಾಮಸ್ಥರುಸಲ್ಲಿಸಿರುವ ಮನವಿಯಲ್ಲಿ ರೈತ ಮುಖಂಡರು ಎಚ್ಚರಿಸಿದರು.
      ಈ ಸಂದರ್ಭದಲ್ಲಿ ರಾಘು,ರವಿ, ಕುಮಾರ್,ದೊಡ್ಡಮಾದೇಗೌಡ,ಸುದಿ, ಸಿದ್ದರಾಜು, ರಾಜೇಶ್, ನಾಗರಾಜು, ಗುರುಸ್ವಾಮಿ, ಬಿಂದುದಾಸ್, ನಾಗೇಶ್, ಕಿರಣ್,ಸಿದ್ದೇಗೌಡ,ನೀಲಕಂಠ,ಮುತ್ತುರಾಜು, ಮಹೇಶ್,  ಮಂಜುನಾಥ್, ಮಹೇಶ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *