- ಕನ್ನಡನಾಡಿನ ಅಭಿವೃದ್ಧಿಗಾಗಿ ಯುವ ಕರ್ನಾಟಕ ವೇದಿಕೆ ಶ್ರಮಿಸುತ್ತಿದ್ದೆ : ಆಯಾಜ್ ಕನ್ನಡಿಗ
ಚಾಮರಾಜನಗರ: ಯುವ ಕರ್ನಾಟಕ ವೇದಿಕೆಯ ನೂತನ ತಾಲೂಕು ಅಧ್ಯಕ್ಷರಾಗಿ ಆರ್.ರಾಘವೇಂದ್ರ ನೇಮಕಗೊಂಡಿದ್ದಾರೆ.
ಇಂದು ನಗರದ ಪ್ರವಾಸಿಮಂದಿರದಲ್ಲಿ ನಡೆದ ಯುವ ಕರ್ನಾಟಕ ವೇದಿಕೆಯ ಪದಾಧಿಕಾರಿಗಳ ಸಭೆಯಲ್ಲಿ ಚಾಮರಾಜನಗರ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಆರ್.ರಾಘವೇಂದ್ರ ಅವರಿಗೆ ಜಿಲ್ಲಾಧ್ಯಕ್ಷ ಆಯಾಜ್ ಕನ್ನಡಿಗ ನೇಮಕಾತಿ ಆದೇಶ ವಿತರಿಸಿ ಮಾತನಾಡಿ, ನಮ್ಮ ವೇದಿಕೆಯು ಕನ್ನಡನಾಡು, ನುಡಿ, ವಿಚಾರವಾಗಿ ಧಕ್ಕೆಯಾದಂತಹ ಸಂದರ್ಭದಲ್ಲಿ ಧ್ವನಿ ಎತ್ತುವ ಮೂಲಕ ನಾಡಿನ ಸಂರಕ್ಷಣೆಗಾಗಿ ಹೋರಾಟ ಮಾಡುತ್ತದೆ ಎಂದರು.
ಸಭೆಯಲ್ಲಿ ನಿಸಾರ್ ಅಹಮದ್, ಸುಂದರ್‌ಶಾಸ್ತ್ರಿ, ರಾಜೇಂದ್ರ, ಕುಮಾರ್‌ಬೂದಂಬಳ್ಳಿ, ರಂಗಸ್ವಾಮಿ, ತೌಸೀಫ್, ಮೂರ್ತಿಶಾಸ್ತ್ರಿ, ಅಪ್ರೋಜ್,
ನವೀನ್, ಇರ್ಫಾನ್, ಸಿದ್ದು ಹಾಜರಿದ್ದರು.