ಸಾಹಿತ್ಯ ಹೆಚ್ಚು ಜನರು ಓದುವಂತಾದಾಗ ಮಾತ್ರ ಸಾರ್ಥಕ.: ಪಾಪು

  • ಅನುಪಮಾ ಸೇವಾ ಟ್ರಸ್ಟ್ ಪ್ರಥಮ ವಾರ್ಷಿಕೋತ್ಸವ, ನೀಲಿರಾಗ ಕವನ ಸಂಕಲನ ಬಿಡುಗಡೆ

ಚಾಮರಾಜನಗರ : ಕನ್ನಡ ಸಾಹಿತ್ಯ ದೊಡ್ಡ ಸಮುದ್ರ ಇದ್ದಂತೆ, ಸಾಹಿತ್ಯವು ಕೇವಲ ಬರೆಯುವವನಿಗಷ್ಟೆ ಸೀಮಿತವಾಗದೆ ಸಮಾಜದ ಪ್ರತಿಯೊಬ್ಬರನ್ನು ತಲುಪಿ ಅವರ ಅನುಭವಗಳಿಗೆ ದನಿಯಾದಾಗ ಮಾತ್ರ ಅದರ ಸಾರ್ಥಕತೆ ಹೆಚ್ಚುತ್ತದೆ ಎಂದು ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು ಹೇಳಿದರು.
ನಗರದ ಡಾ.ರಾಜ್‌ ಕುಮಾರ್ ರಂಗಮಂದಿರದಲ್ಲಿ ಅನುಪಮಾ ಸೇವಾ ಟ್ರಸ್ಟ್ ವತಿಯಿಂದ ನಡೆದ ರಾಷ್ಟ್ರೀಯ ಮಟ್ಟದ ಸಾಹಿತ್ಯ ಸಮ್ಮೇಳನ, ರಾಷ್ಟ್ರೀಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ, ನೀಲಿರಾಗ ಕವನ ಸಂಕಲನ ಬಿಡುಗಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಷ್ಟ್ರಮಟ್ಟದ ಸನ್ಮಾನ ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾನಪದ ತವರೂರಾದ ಜಿಲ್ಲೆಯಲ್ಲಿ ವರ್ಷಪೂರ್ತಿ ಕಾರ್ಯಕ್ರಮಗಳು ನಡೆಯುತ್ತಿವೆ. ಇಂತಹ ಸಂಘ- ಸಂಸ್ಥೆಗಳಿಗೆ ಸರ್ಕಾರ ಸೂಕ್ತ ಅನುದಾನ ನೀಡಬೇಕು. ಕನ್ನಡ ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಣ್ಣ ಪುಟ್ಟ ಸಾಹಿತಿಗಳು, ಕಲಾವಿದರನ್ನು ಗುರುತಿಸುತ್ತಿಲ್ಲ. ಕವನಕ್ಕಿಂತ ಜಾಸ್ತಿ ಗದ್ಯ ಬರೆಯುವುದಕ್ಕೆ ಒತ್ತು ನೀಡಬೇಕಿದೆ ಏಕೆಂದರೆ ಶಾಶ್ವತ ಉಳಿಯುವುದು ಗದ್ಯ ಆಗಾಗಿ ಸಣ್ಣ ಸಾಹಿತ್ಯಯು ಒಂದು ದೊಡ್ಡ ರಾಮಸಮುದ್ರ ಇದ್ದಂತೆ ಅಲ್ಲಿ ದಾಸಸಾಹಿತ್ಯ ಮಕ್ಕಳ ಸಾಹಿತ್ಯ, ಮಹಿಳಾ ಸಾಹಿತ್ಯ, ವಿಜ್ಞಾನ ಇದೆ. ಇಂತಹ ಕಡೆಗೂ ಗಮನ ಹರಿಸಬೇಕು. ಸಾಹಿತ್ಯವನ್ನು ಹೆಚ್ಚು ಜನರು ಓದುವಂತಾದಾಗ ಮಾತ್ರ ಸಾರ್ಥಕವಾಗುತ್ತದೆ ಎಂದರು.
  ವಕೀಲರಾದ ಪ್ರಸನ್ನಕುಮಾರ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ಇಂತಹ ಕಾರ್ಯಕ್ರಮವನ್ನು. ಜಿಲ್ಲೆಯಲ್ಲಿ ಅಯೋಜನೆ  ಮಾಡುವ ಮೂಲಕ ಯುವ ‘ ಸಾಹಿತಿಗಳಿಗೆ ಅವಕಾಶ ಕಲ್ಪಿಸಿಕೊಡಬೇಕಿತ್ತು. ಸಮಾಜವನ್ನು ತಿದ್ದಿ ಸರಿಪಡಿಸುವ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತಿ, ಕವಿಗಳು ಬರಹಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ ಎಂದರು.
ಪ್ರಸ್ತುತ ದಿನಗಳಲ್ಲಿ ಕನ್ನಡ ಭಾಷೆ ಮೇಲೆ ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತಿವೆ. ಸರ್ಕಾರವೇ ಆಗಲಿ, ಜಿಲ್ಲಾಡಳಿತವೇ ಆಗಲಿ ಕನ್ನಡ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿಲ್ಲ. ಇದು ನೋವಿನ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಮಾಜ ಸೇವಕ ಓಲೆ ಮಹದೇವ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು.
ಅನುಪಮ ಸೇವಾ ಟ್ರಸ್ಟ್ ಅಧ್ಯಕ್ಷೆ ಡಾ.
ಪಿ.ಪ್ರೇಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಎಷ್ಟೋ ಸಾಹಿತ್ಯ ಪ್ರತಿಭೆಗಳು ಮಾರ್ಗದರ್ಶನ ಇಲ್ಲದೆ ಮೂಲೆಗುಂಪಾಗಿ ಉಳಿದಿರಬಹುದು ಅಂತಹ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ನಮ್ಮ ಟ್ರಸ್ಟ್ ಮಾಡುತ್ತಿದೆ. ಕವನ ಕಥೆ, ಕದಂಬರಿ ಇರಬಹುದು. ಎಲ್ಲವನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಲಾಗುತಿದೆ. ನಮ್ಮ ಟ್ರಸ್ಟ್ ಆರಂಭವಾಗಿ ಒಂದು ವರ್ಷ ಆಗಿದೆ. ಇಂದು ವಾರ್ಷಿಕೋತ್ಸವ ಆಚರಿಸಲಾಗಿದೆ ಒಂದು ವರ್ಷದಲ್ಲಿ 13 ಕಾರ್ಯಕ್ರಮ ಮಾಡಲಾಗಿದೆ. ಮಹಿಳೆಯರಿಗೆ
ಸ್ಫೂರ್ತಿದಾಯಕವಾಗುವಂತಹ ವಿಚಾರ ಸಂಕಿರಣ ಮಾಡಲಾಗಿದ್ದು, ಮಂದಿನ ದಿನಗಳಲ್ಲಿ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಲು ಚಿಂತಿಸಲಾಗಿದೆ ಎಂದರು. .
ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ
ಸಮಾಜ ಸೇವಾರತ್ನ ಪ್ರಶಸ್ತಿ, ಕಲಾ ಸಿರಿ ಪ್ರಶಸ್ತಿ, ಆದರ್ಶ ದಂಪತಿಗಳ ಪ್ರಶಸ್ತಿ, ರಾಷ್ಟ್ರ ಮಟ್ಟದ ಕಿತ್ತೂರು ಚೆನ್ನಮ್ಮ ಸೇವಾರತ್ನ ಪ್ರಶಸ್ತಿ, ರಾಷ್ಟ್ರ ಮಟ್ಟದ ಇಮ್ಮಡಿ ಪುಲಿಕೇಶಿ ಸೇವಾ ಪ್ರಶಸ್ತಿಯನ್ನ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಶಂಕರ್ ಅಂಕನಶೆಟ್ಟಿಪುರ, ಕೊಳ್ಳೇಗಾಲ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಅರ್.ನಂಜುಂಡಯ್ಯ, ಜೆಇ ಕಿರಣ್ ಕುಮಾರ್, ಸಮಾಜ ಸೇವಕ ಲೋಕೇಶ್ ರಾಜ್, ಸರ್ಕಾರಿ ಪ್ರೌಢ ಶಾಲಾ ಜಿಲ್ಲಾಧ್ಯಕ್ಷ ವೀರಭದ್ರ ಸ್ವಾಮಿ, ದಲಿತ ರಾಜ್ಯ ಮಹಿಳಾ ಸಂಯೋಜಕಿ ಗಿರಿಜ, ಹಿರಿಯ ಸಾಹಿತಿ ಡಾ.ಅಮ್ಮಸಂದ್ರ ಸುರೇಶ್, ರವಿಚಂದ್ರಪ್ರಸಾದ್ ಕಹಳೆ, ಪ್ರಾಂಶುಪಾಲ ರಂಗಸ್ವಾಮಿ, ಗೌಸ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *