ಶ್ರೀ ವೀರ ಮದಕರಿ ನಾಯಕರ ಧ್ಯೇಯ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು : ಎಂ.ರಾಮಚಂದ್ರು

ಚಾಮರಾಜನಗರ: ಶ್ರೀ ವೀರ ಮದಕರಿ ನಾಯಕರ ಧ್ಯೇಯ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಂ.ರಾಮಚಂದ್ರು ತಿಳಿಸಿದರು.
ನಗರದ ಪರವೀಕ್ಷಣಾ ಮಂದಿರದಲ್ಲಿ ಆಯೋಜಿಸಲಾಗಿದ್ದ ವೀರಮದಕರಿ ನಾಯಕರ ಜಯಂತಿ ಕಾರ್ಯಕ್ರಮದಲ್ಲಿ ಮದಕರಿ ನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಮಾಡಿದ ಅವರು, ದುರ್ಗದ ಹುಲಿ ಎಂದೇ ಖ್ಯಾತರಾಗಿದ್ದ ವೀರ ಮದಕರಿ ನಾಯಕರು ಚಿತ್ರದುರ್ಗದಲ್ಲಿ ರಾಜರಾಗಿ ಉತ್ತಮವಾದ ಆಳ್ವಿಕೆ ಮಾಡಿದ್ದಾರೆ. ಅವರ ಧ್ಯೇಯ, ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಮದವೇರಿದ ಆನೆಯನ್ನು ಮದಿಸಿ, ಇಡೀ ವಿಶ್ವದಲ್ಲೇ ಹೆಸರುವಾಸಿಯಾದ ನಾಯಕರೇ ವೀರಮದಕರಿ ನಾಯಕರು. ಇವರ ಹೋರಾಟ, ಚಿಂತನೆ, ಆದರ್ಶ, ಆಡಳಿತ ಅತ್ಯುತ್ತಮವಾಗಿತ್ತು ಎಂದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯರಾದ ಅರಕಲವಾಡಿ ಸೋಮನಾಯಕ, ರಮೇಶ್, ನಗರಸಭಾ ಮಾಜಿಅಧ್ಯಕ್ಷ ಸುರೇಶ್ ನಾಯಕ, ನಗರಸಭಾ ಮಾಜಿ ಸದಸ್ಯ ಚಂಗುಮಣಿ, ಶಿವರಾಜ್, ಮುಖಂಡರಾದ ಶ್ರೀನಿವಾಸ ನಾಯಕ, ಕಂಡಕ್ಟರ್ ಸೋಮನಾಯಕ, ಶಿವು ವಿರಾಟ್, ಬದನಗುಪ್ಪೆ ಶಿವರಾಮ್, ವರದನಾಯಕ, ಹರದನಹಳ್ಳಿ ನಟರಾಜು, ರಂಗಸ್ವಾಮಿ ನಾಯಕ, ಅಮಚವಾಡಿ ಲಿಂಗರಾಜು, ಕೃಷ್ಣನಾಯಕ, ಬುಲೆಟಚಂದ್ರು, ಜಿ.ಬಂಗಾರ್, ಮಹದೇಶ್, ಆಟೋ ಮಂಜುನಾಥ್, ಬಸವಣ್ಣ ನಾಯಕ, ಲಿಂಗರಾಜು, ನಾರಾಯಣನಾಯಕ, ಸಿದ್ದರಾಜನಾಯಕ, ಜ್ಯೋತಿಗೌಡನಪುರ ಗ್ರಾ.ಪಂ. ಸದಸ್ಯ ನಿಂಗರಾಜನಾಯಕ ಮತ್ತಿತರರಿದ್ದರು.

Leave a Reply

Your email address will not be published. Required fields are marked *