ರಾಮಸಮುದ್ರದಲ್ಲಿ ಧಮ್ಮ ಪಯಣ ಜಾಗೃತಿ ಜಾಥ ಟ್ಯಾಬ್ಲೋಗಳಿಗೆ ಚಾಲನೆ
ಚಾಮರಾಜನಗರ: ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ನಿಮಿತ್ತವಾಗಿ ಅಂತಾರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನ ಸಮಿತಿ, ಬಿಕ್ಕು ಸಂಘ, ಭಾರತೀಯ ಬೌದ್ಧ ಮಹಾಸಭಾದ ವತಿಯಿಂದ ಹಮ್ಮಿಕೊಂಡಿರುವ
ಧಮ್ಮ ಪಯಣ ಜಾಗೃತಿ ಜಾಥ ಟ್ಯಾಬ್ಲೋ ಗಳಿಗೆ ಬೌದ್ಧ ಬಿಕ್ಕುಗಳು, ಶಾಸಕ ಎ.ಆರ್.ಕೃಷ್ಣಮೂರ್ತಿ
ಚಾಲನೆ ನೀಡಿದರು. ರಾಮಸಮುದ್ರ ಗ್ರಾಮದ ಅಂಬೇಡ್ಕರ್ ಪ್ರತಿಮೆ ಗೆ ಪುಷ್ಷಾರ್ಚನೆ ಮಾಡಿ ಧಮ್ಮ ಪಯಣ ಜಾಗೃತಿ ಜಾಥ ಟ್ಯಾಬ್ಬ್ಲೋಗಳಿಗೆ ಚಾಲನೆ ದೊರೆತು, ಬಿ ರಾಚಯ್ಯ ಜೋಡಿರಸ್ತೆ, ಡಿವಿಯೇಷನ್, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಮಾರ್ಗವಾಗಿ – ಗುಂಡ್ಲುಪೇಟೆ ವೃತ್ತ, ಸುಲ್ತಾನ್ ಶರೀಫ್ ವೃತ್ತ, ಸತ್ತಿ ರಸ್ತೆಯ ಮೂಲಕ ಅಂಬೇಡ್ಕರ್ ಭವನವನ್ನು ತಲುಪಿತು.
ಧಮ್ಮ ಪಯಣ ಜಾಗೃತಿ ಜಾಥ ಟ್ಯಾಬ್ಲೋ ಗಳಿಗೆ ಚಾಲನೆ ನೀಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ,ಅಕ್ಟೋಬರ್ 24 ಮತ್ತು 25 ರಂದು ನಡೆಯುವ ವಿಶ್ವ ಬೌದ್ಧ ಸಮ್ಮೇಳನ ಪ್ರಯುಕ್ತ ವಾಗಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರವಾರು ಬುದ್ಧ, ಅಂಬೇಡ್ಕರ್ ಟ್ಯಾಬ್ಲೋಗಳಿಗೆ ರಾಮನಮುದ್ರದ ಅಂಬೇಡ್ಕರ್ ಪುತ್ಥಳಿಗೆ. ಮಾಲಾರ್ಪಣೆ ಮಾಡಿ ಚಾಲನೆ ನೀಡಲಾಗಿದೆ. ಬೌದ್ಧಸಮ್ಮೇಳನಕ್ಕೆ ಇನ್ನೂ 50 ದಿನಗಳು ಮಾತ್ರ ಬಾಕಿ ಉಳಿದಿದೆ. ತಾವೆಲ್ಲರೂ ಹೆಚ್ಚಿನ ರೀತಿಯಲ್ಲಿ ಸಹಕರಿಸಿ ಧಮ್ಮದಾನ ಮಾಡುವ ಮುಖಾಂತರ ಸಮ್ಮೇಳನ ಯಶಸ್ವಿಯಾಗಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಧಮ್ಮ ಪಯಣ ನಾಲ್ಕು ವಾಹನಗಳು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಪ್ರತಿಗ್ರಾಮಕ್ಕೂ ಪಯಣ ಮಾಡಿ ಸಮ್ಮೇಳನಕ್ಕೆ ಗ್ರಾಮದ ಯಜಮಾನರು, ಮುಖಂಡರು, ಸಮುದಾಯದ ಜನರು, ಅಂಬೇಡ್ಕರ್ ಸಂಘಟನೆ ಅಧ್ಯಕ್ಷರು, ಪದಾಧಿಕಾರಿಗಳನ್ನು ಗ್ರಾಮದವರನ್ನು ಆಹ್ವಾನ ಮಾಡುವುದು ಧಮ್ಮ ಪಯಣದ ಉದ್ದೇಶವಾಗಿದೆ ಪ್ರತಿ ರಾತ್ರಿ ಆಯಾ ಗ್ರಾಮಗಳಲ್ಲಿ ವಾಸ್ತವ್ಯ ಮಾಡುತ್ತಾರೆ. ಅಲ್ಲಿಯ ಗ್ರಾಮಸ್ಥರು ಮೊಂಬತ್ತಿ ಮೆರವಣಿಗೆಯೊಂದಿಗೆ ಸ್ವಾಗತ ಮಾಡಿ ತಮ್ಮ ತನುಮನ,ಧನ ಅರ್ಪಿಸುವ ಮೂಲಕ ಸಮ್ಮೇಳನ ಯಶಸ್ಸಿ ಸಹಕರಿ ಮೈಸೂರಿನಲ್ಲಿ ಎಷ್ಟು ಯಶಸ್ವಿಯಾಯಿತು ಅದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಜಿಲ್ಲೆಯಲ್ಲಿ ಯಶಸ್ವಿ ಮಾಡುವುದಕ್ಕೆ ನಮ್ಮೊಂದಿಗೆ ಸಹಕರಿಸಬೇಕು ಎಂದರು
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಕಟ್ಟೆಮನೆ, ಗಡಿಮನೆ, ಗ್ರಾಮಗಳ ಯಜಮಾನರು, ಮುಖಂಡರು, ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಬುದ್ಧ ವಿಹಾರದ ಉಪಾಸಕರು, ಅಂಬೇಡ್ಕರ್, ಬುದ್ಧರ ಅನುಯಾಯಿಗಳು ಪ್ರೀತಿಯಿಂದ ಭಾಗವಹಿಸಿ ಬುದ್ಧ, ಅಂಬೇಡ್ಕರ್ ಅವರಿಗೆ ಗೌರವ ತಂದುಕೊಟ್ಟಿದ್ದೀರಿ. ಅದಕ್ಕಾಗಿ ಎಲ್ಲರಿಗೂ ಗೌರವಪೂರ್ವಕ ಕೃತಜ್ಞತೆ ಅರ್ಪಿಸಲು ಬಯಸುತ್ತೇನೆ ಎಂದರು.
ಸಾನಿಧ್ಯ ವಹಿಸಿದ್ದ ಕೊಳ್ಳೇಗಾಲ ಜೇತವನ ವಿಹಾರದ ಬೌದ್ಧಬಿಕ್ಕು ಮನೋರಕ್ಷಿತ ಬಂತೇಜಿ ಮಾತನಾಡಿ, ಚಾಮರಾಜನಗರ ಜಿಲ್ಲೆಯ ವತಿಯಿಂದ ಪರಿಶುದ್ಧ ಪ್ರಜ್ಞೆ ನಡಿಗೆ ಒಂದು ಯಾತ್ರೆಯನ್ನು ಕೈಗೊಳ್ಳಲಾಗಿದೆ.ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಎಲ್ಲ ಸಿದ್ದತೆಗಳು ಆಗಬೇಕು. ಭಾರತ ಒಂದು ಬೌದ್ಧ ಭವ್ಯ ಪರಂಪರೆ ಅಶೋಕ ಸಾಮ್ರಾಜ್ಯ ಸುಖಿರಾಜ್ಯದ ಪರಿಕಲ್ಪನೆ ವಿಶ್ವದಲ್ಲಿ. ಪಸರಿಸಬೇಕು. ಪ್ರಪಂಚದಲ್ಲೇ ಬುದ್ಧ, ಅಶೋಕ ಅವರಿಬ್ಬರು ಮಾತ್ರ ಮಹಾಪುರುಷರು. ಮೂರನೆಯವರು ಡಾ.ಬಿ.ಆರ್.ಅಂಬೇಡ್ಕರ್ ಅವರು, ಅವರು 1956 ಅಕ್ಟೋಬರ್ 14ರಲ್ಲಿ ಭೌದ್ಧ ಧರ್ಮ ಸ್ವೀಕಾರ ಮಾಡಿದ್ದಾರೆ. ಭಾರತದಲ್ಲಿ ಬಡತನ ನಿರ್ಮೂಲನೆ ಆಗಬೇಕು. ಅನಕ್ಷರತೆ ನಿವಾರಣೆ ಆಗಬೇಕು. ದೇವಾಲಯ ತೀರ್ಥಯಾತ್ರೆಗೆ ಹೋಗುವ ಬದಲುಜನಸಾಮಾನ್ಯರ ಹೃದಯ ಅಂತರಾಳಕ್ಕೆ ಧರ್ಮವನ್ನು ಕೊಂಡೊಯ್ಯುವ ಕೆಲಸ ಆಗಬೇಕು ಬುದ್ಧನ ಪಂಚಶೀಲ ಪಾಲನೆ ಮಾಡಿ ಸುಖಿರಾಜ್ಯ ಕಟ್ಟೋಣ ಎಂದರು.
ತಿ.ನರಸೀಪುರದ ಭೌಧಿರತ್ನಬಂತೇಜಿ ಸಾನಿಧ್ಯ ವಹಿಸಿದ್ದರು.ಸ್ವಾಗತ ಸಮಿತಿ ಜಿಲ್ಲಾ ಸಂಚಾಲಕ ವೆಂಕಟರಮಣಸ್ವಾಮಿ ಪಾಪು, ಸಹ ಸಂಚಾಲಕ ಶಿವಮಲ್ಲು, ಪ್ರಚಾರ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ, ಬಿಎಸ್‌ಐ ಜಿಲ್ಲಾಧ್ಯಕ್ಷ ಆರ್.ಬಸವರಾಜು, ಜಿ.ಪಂ.ಮಾಜಿ ಸದಸ್ಯರಾದ ಅಯ್ಯನಪುರ ಶಿವಕುಮಾರ್, ಕಮಲ್,
ತಾ.ಪಂ.ಮಾಜಿ ಅಧ್ಯಕ್ಷ ಆರ್.ಮಹದೇವು, ಕೆಸ್ತೂರು ಸಿದ್ದರಾಜು, ನಿವೃತ್ತ ಅಧಿಕಾರಿ ಸಿದ್ದರಾಜು, ಸುಭಾಷ್ ಮಾಡ್ರಳ್ಳಿ,
ಸಿ.ಎಂ.ನರಸಿಂಹಮೂರ್ತಿ, ಎನ್.ನಾಗಯ್ಯ,
ಸಿ.ಕೆ.ಮಂಜುನಾಥ್, ಹೊಸಹಳ್ಳಿಮಧುಸೂದನ್, ಕೆಂಪರಾಜು,ರಾಮಸಮುದ್ರ ನಾಗರಾಜು, ಎಂ.ಮಹೇಶ್, ಕಾಗಲವಾಡಿ ಶಿವಸ್ವಾಮಿ,
ಕಾಗಲವಾಡಿ ಚಂದ್ರು, ಸಾಹಿತಿ ಕೋಡಿಉಗನೆ ಮಂಜು, ಮೂಡ್ನಾಕೂಡು ಪ್ರಕಾಶ್, ನಲ್ಲೂರು ಮಹಾದೇವಸ್ವಾಮಿ, ಕುಮಾರಸ್ವಾಮಿ,
ಕಂದಹಳ್ಳಿ ನಂಜುಂಡಸ್ವಾಮಿ,
ಸಿದ್ದಯ್ಯನಪುರ ಗೋವಿಂದರಾಜು, ವಾಸು, ಅಕ್ಷಯ್, ಯರಿಯೂರು ರಾಜಣ್ಣ, ನಗರಸಭಾ ಮಾಜಿ ಅಧ್ಯಕ್ಷೆ ಚಿನ್ನಮ್ಮ, ಸಾಹಿತಿ ಸೋಮಶೇಖರ್ ಬಿಸಲವಾಡಿ, ಮಾಡ್ರಳ್ಳಿ ಸುಭಾಷ್, ಬಾಬು, ಹೊಂಗನೂರು ಪುಟ್ಟಸ್ವಾಮಿ, ನಾಗಶಿಲ್ಪ ಉಮೇಶ್,
ಪುಷ್ಷಾಮರಿಸ್ವಾಮಿ, ಸುಶೀಲ, ಯಶೋಧರ, ಶಾಂತಲಕ್ಷ್ಮೀ, ಶಾಂತಮ್ಮ, ಪಾರ್ವತಮ್ಮ, ಹಾಗೂ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಕಟ್ಟೆಮನೆ, ಗಡಿಮನೆ, ಗ್ರಾಮಗಳ ಯಜಮಾನರು, ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಬುದ್ಧ ವಿಹಾರದ ಉಪಾಸಕರು, ಅಂಬೇಡ್ಕರ್, ಬುದ್ಧರ ಅನುಯಾಯಿಗಳು ಭಾಗವಹಿಸಿದ್ದರು.
