ಚಾಮರಾಜನಗರ: ಸ್ಪರ್ಶ್ ಫೌಂಡೇಶನ್, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹುಂಡಿಪುರ ಗ್ರಾಮ ಪಂಚಾಯತ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಹೆಚ್.ಸಿ) ಸಹಯೋಗದೊಂದಿಗೆ ಉಚಿತ ಆರೋಗ್ಯ ಶಿಬಿರವನ್ನು ಏಪ್ರಿಲ್ 18ರಂದು ಗುಂಡ್ಲುಪೇಟೆ ತಾಲೂಕಿನ ಹುಂಡಿಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಕಣ್ಣು, ದಂತ ಸಮಸ್ಯೆಗಳು, ಸಾಮಾನ್ಯ ಸೋಂಕುಗಳು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ, ಮಕ್ಕಳ ಆರೋಗ್ಯ ಮತ್ತು ಪೆÇೀಷಣೆ, ಸಾಮಾನ್ಯ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕೆ ಶಿಬಿರವು ಉಪಯುಕ್ತವಾಗಲಿದೆ. ಉಚಿತವಾಗಿ ವೈದ್ಯರ ಸಮಾಲೋಚನೆ, ಔಷಧ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಶಿಫಾರಸ್ಸು ಮಾಡಲಾಗುತ್ತದೆ.
ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಜನರಿಗೆ ಆರಂಭದಲ್ಲಿಯೇ ರೋಗ ಪತ್ತೆ ಮಾಡಿ ಆರೋಗ್ಯ ಸೇವೆಯನ್ನು ನೀಡುವ ಗುರಿ ಹೊಂದಲಾಗಿದೆ. ತಪಾಸಣಾ ಶಿಬಿರದಲ್ಲಿ ನೇತ್ರವಿಜ್ಞಾನ, ದಂತ ಆರೈಕೆ, ಮಕ್ಕಳ ಚಿಕಿತ್ಸೆ ಮತ್ತು ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಔಷಧ ಹಾಗೂ ವಿಶೇಷ ಸಮಾಲೋಚನೆ ಸೇವೆಗಳನ್ನು ತಜ್ಞರು ನೀಡಲಿದ್ದಾರೆ. ಮಧುಮೇಹ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ಬಿಎಂಐ ಮೌಲ್ಯಮಾಪನ ಅಗತ್ಯ ತಪಾಸಣೆ ಸೇವೆಗಳು ಉಚಿತವಾಗಿ ಶಿಬಿರದಲ್ಲಿ ಲಭ್ಯವಾಗಲಿದೆ. ವೈದ್ಯಕೀಯ ಶಿಫಾರಸಿನ ಆಧಾರದ ಮೇಲೆ ಇಸಿಜಿ ಸೇವೆಗಳನ್ನು ಸಹ ಒದಗಿಸಲಾಗುತ್ತದೆ.
ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್‍ನ ಸ್ಪರ್ಶ್ ಫೌಂಡೇಶನ್, ಸಾಮಾಜಿಕ, ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಬದ್ಧವಾಗಿದೆ.
Like this:
Like Loading...
Related