ಹೆಚ್.ಡಿ.ದೇವೇಗೌಡ ಹುಟ್ಟುಹಬ್ಬ: ಚಾಮರಾಜೇಶ್ವರಸ್ವಾಮಿಗೆ ವಿಶೇಷ ಪೂಜೆ

ಅಖಿಲ ಕರ್ನಾಟಕ ಕನ್ನಡ ಮಹಾಸಭಾದಿಂದ ಈಡುಗಾಯಿ ಒಡೆದ ಸಿಹಿ ಹಂಚಿ ಸಂಭ್ರಮ

ಚಾಮರಾಜನಗರ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಹುಟ್ಟುಹಬ್ಬದ ಅಂಗವಾಗಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಈಡುಗಾಯಿ ಒಡೆದ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಅಧ್ಯಕ್ಷ ಚಾ.ರಂ.ಶ್ರೀ.ನಿವಾಸಗೌಡ ಅವರ ನೇತೃತ್ವದಲ್ಲಿ ಚಾಮರಾಜೇಶ್ವರ ದೇವಸ್ಥಾನದಲ್ಲಿ ಹೆಚ್.ಡಿ.ದೇವೇಗೌಡ ಹೆಸರಿನಲ್ಲಿ ಆರ್ಚನೆ ಮಾಡಿಸಿ, ವಿಶೇಷ ಪೂಜೆ ಸಲ್ಲಿಸಿ ಈಡುಗಾಯಿ ಒಡೆದು ಸಿಹಿ ಹಂಚಲಾಯಿತು.

ಶ್ರೀನಿವಾಸಗೌಡ ಮಾತನಾಡಿ, ಮಣ್ಣಿನ ಮಗ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ದೇಶ, ರಾಜ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಶ್ರೀಚಾಮರಾಜೇಶ್ವರಸ್ವಾಮಿ ಅವರಿಗೆ ಹೆಚ್ಚಿನ ಆರೋಗ್ಯ, ಆಯಸ್ಸು ಕರುಣಿ ಮತ್ತೊಮ್ಮೆ ರಾಜ್ಯಸಭಾ ಸದಸ್ಯರಾಗಿ ಜನಸೇವೆ ಮಾಡುವ ಅವಕಾಶ ದೊರೆಯುವಂತಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ  ಲಕ್ಷ್ಮೀ ನರಸಿಂಹ,  ನಗರಸಭಾ ಮಾಜಿ ಸದಸ್ಯಗಣೇಶ ದೀಕ್ಷಿತ್, ಕರಿಯನಕಟ್ಟೆ ಚಿನ್ನುಮುತ್ತು, ಅರುಣ್ ಕುಮಾರ್ ಗೌಡ, ಟೌನ್ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಮಹೇಶ್, ಪಣ್ಯದಹುಂಡಿ ರಾಜು, ಹೊಮ್ಮ ಲೋಕೇಶ್, ಮಹೇಶ್ ಗೌಡ, ತಮಿಳು ಸಂಘದ ಜಗದೀಶ್, ಚಾ.ವೆಂ.ರಾಜಗೋಪಾಲ್, ರವಿಚಂದ್ರಪ್ರಸಾದ್ ಕಳಲೆ,  ರಾಚಪ್ಪ, ಕಲಾವಿದ ಶಿವಣ್ಣ, ಮುತ್ತುರಾಜು, ರಾಜಣ್ಣ, ಸಿದ್ದಶೆಟ್ಡಿ,  ಎಲ್ ಐಸಿ ರಾಜು, ಮಹದೇವಯ್ಯ ಹಾಜರಿದ್ದರು.

Leave a Reply

Your email address will not be published. Required fields are marked *