- ಅಭಿಷೇಕ ಸ್ಮರಣಾರ್ಥ : ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಲೇಖನ ಸಾಮಾಗ್ರಿ ವಿತರಣೆ
ಚಾಮರಾಜನಗರ: ನಿವೃತ್ತ ಕೆಎಂಎಫ್ ಉಪನಿರ್ದೇಶಕ ಅರಕಲವಾಡಿ ಜವರಯ್ಯ ಅವರ ಪುತ್ರ ಅಭಿಷೇಕ ಸ್ಮರಣಾರ್ಥ ಗ್ರಾಮದ ಮಕ್ಕಳಿಗೆ ನೋಟ್ ಪುಸ್ತಕ, ಲೇಖನ ಸಾಮಾಗ್ರಿಗಳು ಹಾಗೂ ಪೋತ್ಸಾಹ ಧನ ವಿತರಿಸಲಾಯಿತು.
ತಾಲೂಕಿನ ಅರಕಲವಾಡಿ ಗ್ರಾಮದ ಎನ್.ಆರ್.ಬಡಾವಣೆಯ ಶ್ರೀರಾಮಲಿಂಗೇಶ್ವರ, ಮಂಟೇಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕಲವಾಡಿ ಗುರುಸ್ವಾಮಿ ಮಾತನಾಡಿ, ಇಲ್ಲದ ಮಗನ್ನು ಎಲ್ಲ ಮಕ್ಕಳಲ್ಲಿ ಕಾಣಬೇಕು ಎಂಬ ಅಭಿಲಾಷೆಯಿಂದ ಜವರಯ್ಯ ಅವರು ತಮ್ಮ ಮಗ ಅಭಿಷೇಕ್ ಅಕಾಲಿಕ ಮರಣದಿಂದ ಬಂದ ಹಣವನ್ನು ಬ್ಯಾಂಕ್ ಠೇವಣೆ ಮಾಡಿ ಅದರಲ್ಲಿ ಬಂದ ಲಾಭದಿಂದ ಮಗ ಸ್ಮರಣಾರ್ಥವಾಗಿ ಗ್ರಾಮದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡುತ್ತಿರುವುದು ತುಂಬಾ ಅರ್ಥಪೂರ್ಣವಾದಂತಹ, ಶ್ಲಾಘನೀಯವಾದಂತೆ ಕಾರ್ಯಕ್ರಮ ಇದಾಗಿದೆ. ಗ್ರಾಮಕ್ಕೆ ಒಂದು ಮಾದರಿಯಾದ ಕಾರ್ಯಕ್ರಮವಾಗಿದೆ. ಬಡತನ ನಿರ್ಮೂಲನೆ ಏಕೈಕ ಅಸ್ತ್ರ. ಶಿಕ್ಷಣ. ಶಿಕ್ಷಣ ಉತ್ತಮ ಜೀವನವನ್ನು ರೂಪಿಸಿಕೊಟ್ಟಿದೆ. ಪೋಷಕರು ಕೂಡ ಮಕ್ಕಳ ಶಿಕ್ಷಣದ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.
ಜಿಲ್ಲೆಯಲ್ಲಿ ಯಾರೂ ಮಾಡದಂತಹ ಶೈಕ್ಷಣಿಕ ಕ್ಷೇತ್ರಕ್ಕೆ ಹಾಗೂ ಬಡಮಕ್ಕಳು ಉನ್ನತ ವ್ಯಾಸಂಗವನ್ನು ಮಾಡಲು ಪ್ರೋತ್ಸಾಹಿಸುವಂತಹ ಕಾರ್ಯಕ್ರಮವು ಅತ್ಯಂತ ಹೆಮ್ಮೆ ಪಡುವಂತಹ ವಿಚಾರವಾಗಿರುವುದಲ್ಲದೆ ದಿವಂಗತ ಅಭಿಷೇಕ್ ರವರ ದುಃಖದ ಸಾವಿನ ನೋವು ಮರೆಯುವಂತಹ ಒಂದು ಕಾರ್ಯಕ್ರಮವಾಗಿದ್ದು ಈ ಮುಖೇನ ತಮ್ಮ ಮಗನನ್ನು ಕಳೆದುಕೊಂಡಂತಹ ನೋವನ್ನು ಈ ಮಕ್ಕಳಲ್ಲಿ ಕಾಣುವಂತಹ ಚಿಂತನೆಯನ್ನ ಮಾಡಿ ಮಗನಿಗೆ ಅವರ ಸಂಸ್ಥೆಯು ನೀಡಿದಂತಹ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಮಾಡಿ ಅದರಲ್ಲಿ ಬಂದ ಹಣದಿಂದ ಬಡ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಹಾಯ ಮಾಡಿರುವಂತಹ ಒಂದು ಉದಾರ; ಮನೋಭಾವನ್ನ ಬೆಳೆಸಿಕೊಂಡಿದ್ದು ಈ ಒಂದು ಸಹಾಯವನ್ನು ಈ ಬಡಾವಣೆಯ ಮಕ್ಕಳು ಸದುಪಯೋಗಪಡಿಸಿಕೊಂಡು ಶೈಕ್ಷಣಿಕಾಗಿ ಮುಂದೆ ಬಂದು ಈ ಗ್ರಾಮಕ್ಕೆ ಒಂದು ಒಳ್ಳೆಯ ಹೆಸರನ್ನು ತರಲಿ ಎಂದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಕಾನೂನು ಅಧಿಕಾರಿ ರಾಜು ಮಾತನಾಡಿ, ಶಿಕ್ಷಣವೇ ನಮಗೆ ಸ್ಪೂರ್ತಿ ದಾಯಕ ಶಕ್ತಿಯಾಗಿರುವುದರಿಂದ ಮಕ್ಕಳು ಜವರಯ್ಯನವರು ಮಾಡಿರುವ ಶಿಕ್ಷಣಕ್ಕೆ ಉತ್ತೇಜನ ನೀಡುವಂತಾಗಿರುವುದರಿಂದ ಇದರ ಸದ್ಬಳಕೆ ಮಾಡಿಕೊಂಡು ಎಲ್ಲಾ ಮಕ್ಕಳು ಸದುಪಯೋಗ ಪಡಿಸಿಕೊಂಡು ಜವಾಬ್ದಾರಿತವಾಗಿ ವಿದ್ಯೆಯನ್ನ ಕಲಿ ಯಬೇಕು ಸಲಹೆ ನೀಡಿದರು.
ಅರಕಲವಾಡಿ ಜವರಯ್ಯ ಮಾತನಾಡಿ, ಪುತ್ರ ಅಭಿಷೇಕ್ ಸ್ಮರಣಾರ್ಥವಾಗಿ ಪ್ರತಿವರ್ಷದಂತೆ ಈ ವರ್ಷವೂ 80 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಲೇಖನ ಸಾಮಾಗ್ರಿ. ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ಮಕ್ಕಳಿಗೆ ಪೋತ್ಸಾಹ ಧನ ವಿತರಿಸಲಾಗಿದೆ. ನಮ್ಮ ಪುತ್ರ ಅಭಿಷೇಕ ಅಕಾಲಿಕ ಮರಣ ಹೊಂದಿದ್ದ ಹಿನ್ನಲೆಯಲ್ಲಿ ಅವನ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ 10 ಲಕ್ಷ ಪರಿಹಾರ ಬಂದಿದ್ದು, ಅದನ್ನು ಬ್ಯಾಂಕ್‌ನಲ್ಲಿ ಠೇವಣೆ ಮಾಡಿದ್ದು ಅದರಲ್ಲಿ ಬಂದ ಲಾಭದಲ್ಲಿ ಪ್ರತಿವರ್ಷವೂ ಮಗನ ಸ್ಮರಣಾರ್ಥವಾಗಿ ಗ್ರಾಮದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಮಾಡಲಾಗುತ್ತಿದೆ. ಬಡಾವಣೆಯ ಮಕ್ಕಳು ಕ್ರಿಕೆಟ್, ಮೊಬೈಲ್, ಸ್ನೇಹಿತರಿಂದ ದೂರವಿರಿ ಬೇಕು ಎಂದರು.
ಸಂದರ್ಭದಲ್ಲಿ ನಿವೃತ್ತ ವೈದ್ಯರಾದ ಬಸವಯ್ಯ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಎನ್. ಮಹದೇವಯ್ಯ, ಅರಕಲವಾಡಿ ನಾಗೇಂದ್ರ, ಬಾಬು ಜಗಜೀವನ್ ರಾಮ್ ಜಿಲ್ಲಾ ಸಂಘಗಳ ಒಕ್ಕೂಟದ ಅಧ್ಯಕ್ಷ ನಾಗರಾಜು, ಬಿಸಿಎಂ ಇಲಾಖೆಯ ತಾಲೂಕು ಕಲ್ಯಾಣಾಧಿಕಾರಿ ಲಿಂಗರಾಜು, ತಾಯಿ ಸುಮಿತ್ರ, ಕುಟುಂಬದವರು ಮತ್ತು ಬಡಾವಣೆಯ ಯಜಮಾನರುಗಳು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಪೋಷಕರು ಹಾಜರಿದ್ದರು .