ಸೇವಾ ನಿವೃತ್ತಿ ಹೊಂದಿದ್ದ ವೆಂಕಟನಾಯಕ್ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ


   ಚಾಮರಾಜನಗರ: ಇಲ್ಲಿನ ನಗರಸಭೆಯಲ್ಲಿ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ್ದ ವೆಂಕಟನಾಯಕ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ನಗರದ ವರ್ತಕರ ಭವನದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವೆಂಕಟನಾಯಕ್‌ ಅವರಿಗೆ ನಗರಸಭಾ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಚೂಡಾಧ್ಯಕ್ಷ ಮಹಮದ್‌ಅಸ್ಗರ್ ಮಾತನಾಡಿ, ನಗರಸಭೆಯಲ್ಲಿ ಯೋಜನಾಧಿ ಕಾರಿಯಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ್ದ ವೆಂಕಟನಾಯಕ್ ಅವರು ಸರ್ಕಾರದಿಂದ ಬರುವ ಸವಲತ್ತುಗಳನ್ನು ನಗರದ ಜನತೆಗೆ ತಲುಪಿಸುವ ಮೂಲಕ ಉತ್ತಮವಾಗಿ ಸೇವೆ ಸಲ್ಲಿಸಿ ಅಪಾರ ಜನಮನ್ನಣೆ ಪಡೆದಿದ್ದಾರೆ. ಇದಕ್ಕೆ. ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸೇರಿರುವ ಜನರೇ ಸಾಕ್ಷಿ ಎಂದರು. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.
  ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯ ಪಾಲಕ ಅಭಿಯಂತರ ಶ್ರೀನಿವಾಸ್ ಮಾತನಾಡಿ ವೆಂಕಟನಾಯಕ ಅವರು ಸದಾ ಬಡಜನರ ಬಗ್ಗೆ ಚಿಂತನೆ ಇಟ್ಟುಕೊಂಡು ಸಾಕಷ್ಟು ಕೆಲಸವನ್ನು ಮಾಡಿಕೊಟ್ಟಿದ್ದಾರೆ, ಅಲ್ಲದೆ ಇತ್ತೀಚೆಗೆ ಪ್ರಾರಂಭವಾದ ಎಸ್‌ಐಆರ್ ಕೆಲಸವನ್ನು ಚಾಚು ತಪ್ಪದೇ ಬಿ ಎಲ್ ಓ ಗಳಿಗೆ ಕರೆ ಮಾಡಿ ಪ್ರಗತಿ ಬಗ್ಗೆ ಮಾಹಿತಿ ಪಡೆದು ಸದಸ್ಯ ಸಲಹೆ ಸೂಚನೆ ನೀಡುತ್ತಿದ್ದರು, ಇಂತಹ ಅಧಿಕಾರಿಗಳು ಅಪರೂಪ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


   ಸನ್ಮಾನ ಸ್ವೀಕರಿಸಿ ಮಾತನಾಡಿದ ವೆಂಕಟ ನಾಯಕ್ ಮಾತನಾಡಿ, ತಮ್ಮ ಅವಧಿಯಲ್ಲಿ ನಿರ್ವಹಿಸಿದ ಕೆಲಸದ ಬಗ್ಗೆ ತೃಪ್ತಿ ಹೊಂದಿದ್ದೇನೆ, ಯಾವುದೇ ಸಲತ್ತುಗಳನ್ನು ದುರ್ಬಳಕೆ ಮಾಡಿಕೊಳ್ಳದೆ ಫಲಾನುಭವಿಗಳಿಗೆ ತಲುಪಿಸಿರುವ ತೃಪ್ತಿ ಹೊಂದಿದ್ದೇನೆ. ಇಂದು ನಿವೃತ್ತಿ ಹೊಂದಿದ್ದು ನಾಳೆಯಿಂದ ಕಚೇರಿಯ ಸಿಬ್ಬಂದಿಗಳಿಂದ ದೂರ ಇರುವ ದುಃಖ ಉಂಟಾಗಿದೆ ಎಂದು ಭಾವುಕರಾದರು, ತಮಗೆ ಆತ್ಮೀಯ ಬೀಳ್ಕೊಡುಗೆ ನೀಡಿದ ಕಚೇರಿ ಎಲ್ಲಾ ಅಧಿಕಾರಿಗಳು,  ಸಿಬ್ಬಂದಿ ವರ್ಗದವರಿಗೆ, ಜನಪ್ರತಿನಿಧಿಗಳಿಗೆ, ಸಂಘಸಂಸ್ಥೆಗಳ ಮುಖಂಡರು, ಸಾರ್ವಜನಿಕರಿಗೆ
ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಅಧ್ಯಕ್ಷರಾದ ಸುರೇಶ್, ಚಿನ್ನಮ್ಮ, ಆಶಾನಟರಾಜು, ಸದಸ್ಯರಾದ ಮನೋಜ್ ಪಟೇಲ್,
ನೀಲಮ್ಮ, ಗಾಯಿತ್ರಿಚಂದ್ರಶೇಖರ್, ಕುಮುದಾಕೇಶವಮೂರ್ತಿ, ಬಸವಣ್ಣ, ಅಬ್ರಾರ್ಅ ಹಮದ್,ನಾಗರಾಜು,  ಎಂ.ಮಹೇಶ್, ಖಲೀಲ್ ಉಲ್ಲಾ, ಪೌರಾಯುಕ್ತರಾದ ಪರಶುರಾಮ ಛಲವಾದಿ, ರಾಜಣ್ಣ, ನಟರಾಜು, ಶರವಣ, ಸಮುದಾಯ ಸಂಘಟಕ ಮಲ್ಲೇಶ್, ಮಂಜುನಾಥ್, ನವೀನ್, ಸಂತೋಷ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *