ಗುಂಡ್ಲುಪೇಟೆ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಒತ್ತು: ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್

  • 2.5 ಕೋಟಿ ರೂ.ವೆಚ್ಚದ ರಸ್ತೆ, ಸೇತುವೆ ಕಾಮಗಾರಿಗೆ ಚಾಲನೆ

ಚಾಮರಾಜನಗರ : ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಬದನವಾಳುವಿನಿಂದ ಚಾಮರಾಜನಗರ ತಾಲೂಕಿನ ವೀರನಪುರ ಕ್ರಾಸ್ ಸೇರುವ ರಸ್ತೆ ಮತ್ತು ಸೇತುವೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬದನವಾಳುವಿನಿಂದ ಚಾಮರಾಜನಗರ ತಾಲೂಕಿನ ವೀರನಪುರ ಕ್ರಾಸ್‌ ಸೇರುವ 9.10 ಕಿ.ಮೀ.ನಲ್ಲಿ ರಸ್ತೆ ಅಭಿವೃದ್ಧಿಗಾಗಿ ಲೆಕ್ಕ ಶೀರ್ಷಿಕೆ 5054–80–190–0-01-132–ವಿ ಯಡಿಯಲ್ಲಿ 2.5 ಕೋಟಿ ರೂ.ಮಂಜೂರಾಗಿದ್ದು, ರಸ್ತೆ ಮತ್ತು ಸೇತುವೆ ನಿರ್ಮಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಕೆರೆಹಳ್ಳಿ ನವೀನ್, ತಾ.ಪಂ.ಮಾಜಿ ಅಧ್ಯಕ್ಷ ಎಂ.ಬಿ.ರೇವಣ್ಣ, ಪಿಡಬ್ಲ್ಯೂಡಿ ಇಲಾಖೆಯ ಎಇಇ ಶಾಂತಮ್ಮ, ಗುತ್ತಿಗೆದಾರ ಮಂಜುನಾಥ್, ಹರೀಶ್, ಕೆರೆಹಳ್ಳಿರೇವಣ್ಣ, ಗುರುಸ್ವಾಮಿ ಹಿರೇಬೇಗೂರು, ನಾಗೇಶ್ ಚಿಕ್ಕಬೇಗೂರು, ಗ್ರಾ.ಪಂ.ಮಾಜಿ ಅಧ್ಯಕ್ಷ ಮಧು ಕುಲಗಾಣ, ಡಿ.ಕೆ.ಮಧು, ಸಿದ್ದಶೆಟ್ಟಿ, ಚೆಲುವರಾಜು, ಮಾದಪ್ಪಗೌಡಿಕೆ, ಕೆ.ಸಿ.ನಟರಾಜು ಕುಲಗಾಣ, ಆರ್.ಕೆಂಪರಾಜು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *