ಚಾಮರಾಜನಗರ: ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಖಂಡಿಸಿ ಯುವ ಕರ್ನಾಟಕ ವೇದಿಕೆ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಮೂಲಕ ಭುವನೇಶ್ವರಿ ವೃತ್ತಕ್ಕೆ ತೆರಳಿ ಖಾಲಿ ಬಿಂದಿಗೆಗಳನ್ನು ಪ್ರದರ್ಶಿಸುವ ಮೂಲಕ ದ ಪ್ರತಿಭಟನೆ ನಡೆಸಿದರು. ಕಾವೇರಿ ನೀರು ನಿಯಂತ್ರಣ ಸಮಿತಿ,ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕುಡಿಯುವ ನೀರು ಹಾಗೂ ಕೃಷಿಗೆ ಅಗತ್ಯವಿರುವ ನೀರಿನ ಕೊರತೆ ಎದುರಾಗಿರುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಆದೇಶಿಸಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಕ್ರಮ ಖಂಡನೀಯ ಎಂದರು. ರಾಜ್ಯ ಸರ್ಕಾರವು ರೈತರ ಹಿತಾಸಕ್ತಿಯನ್ನು ಕಾಪಾಡಬೇಕು. ರಾಜ್ಯದ ನೀರಿನ ಸಂಪನ್ಮೂಲಗಳ ಬಳಕೆಯಲ್ಲಿ ಸರ್ಕಾರ ಎಚ್ಚರಿಕೆ ವಹಿಸಬೇಕು. ಕಾವೇರಿ ನೀರು ಬಿಡುಗಡೆ ಆದೇಶವನ್ನು ಮರುಪರಿಶೀಲಿಸಿ ರಾಜ್ಯದ ಹಿತವನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಅಯಾಜ್ ಕನ್ನಡಿಗ ಚಾಮರಾಜನಗರ ತಾಲೂಕು ಅಧ್ಯಕ್ಷ ಆರ್. ರಾಘವೇಂದ್ರ, ಯಳಂದೂರು ತಾಲೂಕು ಅಧ್ಯಕ್ಷ, ಕುಮಾರ ಬೂದಂಬಳ್ಳಿಮೋಳೆ , ಮಹಿಳಾ ಘಟಕ ಅಧ್ಯಕ್ಷೆ ಶೋಭ, ಸಂತೆಮರಹಳ್ಳಿ ಹೋಬಳಿ ಅಧ್ಯಕ್ಷ ಇರ್ಫಾನ್, ಜಿಲ್ಲಾ ಗೌರವಾಧ್ಯಕ್ಷ ಇದ್ರಿಸ್ಪಾಷ, ಜಿಲ್ಲಾ ಉಪಾಧ್ಯಕ್ಷ ತೌಸಿಫ್, ಮುಬಾರಕ್ ತಾಲೂಕು ಗೌರವಾಧ್ಯಕ್ಷ ಸುಂದರ ರಾಮಸಮುದ್ರ, ಕೊಳ್ಳೇಗಾಲ ಮುಖಂಡರು ಸುಂದರ ಶಾಸ್ತ್ರಿ ತಾಲೂಕು
ಉಪಾಧ್ಯಕ್ಷ ಯೋಗೇಶ್ , ಅಪ್ರೋಜ್ ಪಾಷ ಸಂತೆಮರಳ್ಳಿ ಹೋಬಳಿ ಉಪಾಧ್ಯಕ್ಷ ಮನೋಜ್ ತಾಲೂಕು ಕಾರ್ಯದರ್ಶಿ ಮಹೇಶ್. ಪ್ರಮೋದ್ ಉಮೇಶ್ ಎಚ್ .ಎಮ್. ಹೊಸಪುರ ಮಲ್ಲೇಶ್ ಗಟ್ಟವಾಡಿ ಗುರು, ಕೆಬ್ಬೆಪುರ ಆಕಾಶ್, ಲೋಕೇಶ್ ಬುದಂಬಳ್ಳಿ ಮೋಳೆ ನಟರಾಜ್ , ಸ್ವಾಮಿ ಸ್ವೀಟ್, ಮಧು ಮಂಗಲ, ಯಸ್ವಂತ್, ಪ್ರಸಾದ್, ಬಸವಣ್ಣ ಇತರರು ಭಾಗವಹಿಸಿದ್ದರು.