- ಜಿಲ್ಲೆಯಲ್ಲಿ ಸತ್ತಿರುವ ಜಾನುವಾರುಗಳಿಗೆ ಕೂಡಲೇ ಪರಿಹಾರ ಕೊಡಿಸಲು ಮಹೇಶ್‌ಕುಮಾರ್ ಆಗ್ರಹ
ಚಾಮರಾಜನಗರ: ಜಿಲ್ಲೆಯಲ್ಲಿ ಅಕ್ರಮ ಸಿಡಿಮದ್ದು, ಮೇವು ಕೊರತೆ, ಕಾಡುಪ್ರಾಣಿ ದಾಳಿ, ಪ್ರಕೃತಿ ವಿಕೋಪದಿಂದ ಸತ್ತಿರುವ ಜಾನುವಾರುಗಳಿಗೆ ಕೂಡಲೇ ಪರಿಹಾರ ಕೊಡಿಸುವಂತೆ ಪಶು ಸಂಗೋಪನೆ ಮತ್ತು ರೇಷ್ಮೆ ಕೃಷಿ ಇಲಾಖೆ ನೂತನ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರನ್ನು ವಿಶ್ವರೈತ ಸಂಘ ಸದಸ್ಯರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪಾರಂಪಾರಿಕ ನಾಟಿ ವೈದ್ಯ ಎಚ್.ಸಿ.ಮಹೇಶ್‌ಕುಮಾರ್ ಆಗ್ರಹಿಸಿದರು.
ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಇಂದು ಕರೆದಿದ್ದ ರೈತರು, ಅಧಿಕಾರಿಗಳ ಸಭೆಯು ಪರಿಪೂರ್ಣವಾಗಿ ನಡೆದಿಲ್ಲ. ಕಬ್ಬಿನ ಕಾರ್ಖಾನೆಯವರು ಸಮಂಜಸ ಉತ್ತರ ಕೊಡಲಿಲ್ಲ. ಏಕೆ ಇವರೆಲ್ಲ ಈ ರೀತಿಯ ಉತ್ತರ ಕೊಡುತ್ತಾರೆ ಎಂದರೆ ಇಲ್ಲಿ ಅಸಹಾಯಕ ಮಂತ್ರಿಗಳು, ಶಾಸಕರು, ಚುನಾಯಿತ ಜನಪ್ರತಿನಿಧಿಗಳು ಇರುವುದರಿಂದ. ಕೆಜಿಗೆ 5 ಪೈಸೆಗೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಅರ್ಥಬದ್ಧವಾಗಿ ಅಧಿಕಾರಿಗಳು ಮಾತಾಡುತ್ತಿಲ್ಲ. ಜಿಲ್ಲಾಧಿಕಾರಿಗಳು ಇದಕ್ಕೆಲ್ಲ ಹೊಣೆಯಾಗಬೇಕು ಎಂದರು.
ಜಿಲ್ಲೆಯಲ್ಲಿ ದನ ಕರು, ಕುರಿ, ಮೇಕೆ ಸತ್ತು 14 ತಿಂಗಳು ಆಗಿದೆ. ಪಶುವ್ಯದ್ಯರ ಪ್ರಮಾಣಪತ್ರ ಮಾಡಿಸಿ,ಪೋಸ್ಟ್ ಮಾರ್ಟಂ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿ 14 ತಿಂಗಳು ಆಗಿದೆ. ಸರ್ಕಾರ ಒಂದು ನಯಾಪೈಸೆಯನ್ನು ರೈತರಿಗೆ ಕೊಟ್ಟಿಲ್ಲ ಆಗಾಗಿ ಪಶು ಸಂಗೋಪನೆ ಮತ್ತು ರೇಷ್ಮೆ ಕೃಷಿ ಇಲಾಖೆ ನೂತನ
ಸಚಿವರಾದ ಸಿ.ಪುಟ್ಟರಂಗಶೆಟ್ಟಿರು ವಾರದೊಳಗೆ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.
ವೃದ್ಧಾಪ್ಯವೇತನ ಕೊಟ್ಟಿಲ್ಲ. ಗೃಹಲಕ್ಷ್ಮೀ ಹಣ ಇನ್ನೂ ತಿಂಗಳು ಬಾಕಿ ಉಳಿದಿದೆ. ಸರ್ಕಾರ ಈ ರೀತಿ ನಡೆದುಕೊಂಡರೆ ಇದನ್ನೇ ನಂಬಿರುವ ಬಡಜನರ ಗತಿಯೇನು ? ಇದರ ಮುಖ್ಯಮಂತ್ರಿಗಳು ಗಮನ ಹರಿಸಬೇಕು. ಜಿಲ್ಲೆಯಲ್ಲಿ ಎಗ್ಗಿಯಿಲ್ಲದೆ ಗಣಿಗಾರಿಕೆ ನಡೆಯುತ್ತಿದೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಜಿಲ್ಲೆಯಲ್ಲಿ ಜೂಜಾಟಕ್ಕೆ ಕಡಿವಾಣ ಹಾಕಿರುವುದು ಸ್ವಾಗತಾರ್ಹ ಆದರೆ ಅಕ್ರಮ ಗಣಿಗಾರಿಕೆಗಳನ್ನು ತಡೆಗಟ್ಟಬೇಕು ಎಂದು ಮಹೇಶ್ ಕುಮಾರ್ ಒತ್ತಾಯಿಸಿದರು
