ಪೌರಾಣಿಕ ನಾಟಕದಿಂದ ಸಮಾಜಕ್ಕೆ ಉತ್ತಮ ಸಂದೇಶ : ಅಬ್ದುಲ್ ಅಜೀಜ್ ದೀನಾ

ಚಾಮರಾಜನಗರ: ಪೌರಾಣಿಕ ನಾಟಕಗಳು ನಮ್ಮ ಬದುಕಿಗೆ ಪೂರಕವಾದ ಸತ್ಯ, ನ್ಯಾಯ ನೀತಿ, ಧರ್ಮದ ಸಂದೇಶವನ್ನು ಬೋಧಿಸುತ್ತವೆ. ಅವು ನೆಮ್ಮದಿಯ ಬದುಕಿಗೆ ದಾರಿದೀಪಗಳಿದ್ದಂತೆ ಎಂದು ರೋಟರಿ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ ಹೇಳಿದರು.
   ಜಿಲ್ಲೆಯ ಶ್ರೀಮಲೆಮಹದೇಶ್ವರ ಬೆಟ್ಟದ ದೇವಸ್ಥಾನದ ಮುಂಭಾಗದಲ್ಲಿರುವ ರಂಗಕಲಾಮಂದಿರದಲ್ಲಿ ಡಾ.ಬಿ.ಆ‌ರ್.ಅಂಬೇಡ್ಕರ್ ಕಲಾ ಸಂಘ, ರೋಟರಿ ಸಂಸ್ಥೆ ಸಹಯೋಗದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ನಡೆದ ದಕ್ಷಯಜ್ಞ ಅಥವಾ ಬೃಗುಮುನಿಯ ಗರ್ವಭಂಗ ಪೌರಣಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯು ಕಲೆಗಳ ತವರೂರಾಗಿದ್ದು, ಎಲ್ಲ ರೀತಿಯ ಕಲಾವಿದರು ಇದ್ದಾರೆ. ರಂಗಭೂಮಿ ಕಲಾವಿದರಿಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಹೆಚ್ಚಿನ ಪ್ರೋತ್ಸಾಹ ನೀಡಿ, ನೀತಿಯ ಪಾಠವನ್ನು ಸಾರುತ್ತಿರುವ ರಂಗಕಲೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
     ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಅಧ್ಯಕ್ಷ ಕಮಲ್ರಾಜ್, ಹಾರ್ಮೋನಿಯಂ ಮಾಸ್ಟರ್ ಆರ್.ಶಿವಣ್ಣ. ಕಲಾವಿದ ಆರ್ .ರಾಜಪ್ಪ, ರಮೇಶ್, ಮಂಗಲ ಆರ್.ನಾಗರಾಜು, ಮಲ್ಲಯ್ಯನಪುರ ಸಂಪತ್‌ಕುಮಾ‌ರ್, ಗೋವಿಂದರಾಜು, ಆರ್.ಮಲ್ಲಿಕಾರ್ಜುನಸ್ವಾಮಿ, ಎಸ್.ನಂದೀಶ್‌, ಶ್ರೀಕಂಠಸ್ವಾಮಿ, ಮಹೇಶ್, ರೇವಣ್ಣ, ಉಮೇಶ್, ಸಾಗರ್, ಸುರೇಶ್, ಜಯರಾಜು, ಆರ್.ಮೂರ್ತಿ, ಎಂ.ಎನ್.ಮಹದೇವ, ನಿಂಗಯ್ಯ, ರಾಚಯ್ಯ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *