ಚಾಮರಾಜನಗರ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಹನೂರು ಗ್ಯಾರಂಟಿ ಯೋಜನೆಗಳ ಅನುμÁ್ಠನ ಸಮಿತಿ ಮತ್ತು ಹನೂರು ತಾಲ್ಲೂಕು ಪಂಚಾಯಿತಿ ಹಾಗೂ ಚಾಮರಾಜನಗರ ವಿಶ್ವವಿದ್ಯಾನಿಲಯ ಇವರ ಸಹಯೋಗದಲ್ಲಿ ಉದ್ಯೋಗ ಮೇಳ ಕಾರ್ಯಕ್ರಮವನ್ನು ಮೇ 12ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಹನೂರಿನ ಶ್ರೀ ಜಿ.ವಿ ಗೌಡ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಎಸ್.ಎಸ್.ಎಲ್.ಸಿ, ಪಿಯುಸಿ, ಡಿಪ್ಲೋಮಾ, ಐ.ಟಿ.ಐ ಇಂಜಿನಿಯರಿಂಗ್ ಮತ್ತು ಯಾವುದೇ ಪದವಿ ಹಾಗೂ ಸ್ನಾತಕೋತ್ತರ ಪದವಿ ಅಭ್ಯರ್ಥಿಗಳಿಗಾಗಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.
ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್, ಕೇನ್ಸ್ ಟೆಕ್ನಾಲಜಿ, ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಭಾರತ್ ಫೈನಾನ್ಷಿಯಲ್ ಇನ್‍ಕ್ಲೂಷನ್ ಲಿಮಿಟೆಡ್, ಮುತ್ತೂಟ್ ಮೈಕ್ರೋಫಿನ್, ಐ.ಡಿ.ಎಫ್.ಸಿ ಫಸ್ಟ್ ಬ್ಯಾಂಕ್, ರಾಜ್ ಬಯೋ ಆರ್ಗಾನಿಕ್ಸ್, ಶಾಂತಿ ಸಿಲ್ಕ್ ಇಂಡಸ್ಟ್ರಿ, ತೇಜಸ್ವಿನಿ ಎಂಟರ್‍ಪೈಸಸ್, ಅಪೆÇೀಲೋ ಫಾರ್ಮಸಿ, ಹೋಂಡಾ, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ನವಭಾರತ್ ಫರ್ಟಿಲೈಸರ್ಸ್ ಲಿಮಿಟೆಡ್, ಒಬಾಳಿ ಸೌಹಾರ್ದ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ-ವಿವರ (ಬಯೋ ಡೇಟಾ) ಮತ್ತು ಅಂಕಪಟ್ಟಿಗಳ ಮೂಲ ಹಾಗೂ ಜೆರಾಕ್ಸ್ ಪ್ರತಿಗಳೊಂದಿಗೆ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ 08224-200130, 08224-224430, 8105725710, 9731906898 ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಎ. ಮಹಮ್ಮದ್ ಅಕ್ಬರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Like this:
Like Loading...
Related