ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸುವಂತೆ ಡೀನ್ ಗೆ ಕರವೇ ಮನವಿ

ಚಾಮರಾಜನಗರ : ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಮಿತಿಮೀರಿದ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ ಕುಮಾ‌ರ್ ಶೆಟ್ಟಿ ಬಣ‌ದ ತಾಲೂಕು ಘಟಕದ ವತಿಯಿಂದ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಡೀನ್ ಮತ್ತು ನಿರ್ದೇಶಕ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಆಸ್ಪತ್ರೆ ಎಮರ್ಜೆನ್ಸಿ ವಾರ್ಡ್ ನಲ್ಲಿ ವೈದ್ಯರ ಕೊರತೆ ಪೊರೈಸಬೇಕು, ವೈದ್ಯಕೀಯ ಉಪಕರಣಗಳಾದ ಎಂಡೋಸ್ಕೋಪಿ ಮತ್ತು ಇತರೆ ಉಪಕರಣಗಳನ್ನು ಸರಿಯಾಗಿ ಬಳಸದಿರುವುದನ್ನು ಬಳಸಬೇಕು.
ಆ್ಯಂಬುಲೆನ್ಸ್ ಸರಿಯಾದ ಸಮಯಕ್ಕೆ ಇರುವುದಿಲ್ಲ ಹೆಚ್ಚಿನ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕು ಡಿ.ಗ್ರೂಪ್ ನೌಕರರು ರೋಗಿಗಳೊಂದಿಗೆ ದಬ್ಬಾಳಿಕೆ ಮಾಡುತ್ತಿದ್ದು ಇವರ ವಿರುದ್ಧ ಕ್ರಮ ಜರುಗಿಸಬೇಕು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿದ್ದು ತಕ್ಷಣದಿಂದಲೇ ಹೃದ್ರೋಗ ತಜ್ಞರ ಅವಶ್ಯಕತೆ ಇದೆ ಗರ್ಭಿಣಿಯರನ್ನು ಕೊಠಡಿ ಯಿಂದ ಸ್ಕ್ಯಾನಿಂಗ್ ಮಾಡಿಸಲು ಹೊರಗಡೆ ಕಳುಹಿಸುತ್ತಿರುವುದು ಖಂಡನೀಯ ನಮಗೆ ಹೊರಗಿನವರೊಂದಿಗೆ ಶಾಮೀಲಾಗಿರುವ ಅನುಮಾನ ಹೆಚ್ಚಿನ ಸ್ಕ್ಯಾನಿಂಗ್ ಕಮಿಷನ್ ಗಾಗಿ ಒತ್ತಾಯ ರೋಗಿಗಳಿಗೆ ಸುಮಾರು 80%ರಷ್ಟು ಔಷಧಿಯನ್ನು ಹೊರಕ್ಕೆ ಬರೆಯುತ್ತಿರುವುದು ಕೆಟ್ಟ ಬೆಳವಣಿಗೆ ಎಲ್ಲಾ ಔಷಧಿಯನ್ನು ಆಸ್ಪತ್ರೆಯಲ್ಲಿ ಕೊಡಬೇಕು ಔಷಧಿ ಸರಿಯಾಗಿ ಪೊರೈಕೆ ಆಗದಿರುವುದು OPD ಯಲ್ಲಿ ವೈದ್ಯರು ಸರಿಯಾಗಿ ಇರದೇ ವೈದ್ಯಕೀಯ ವಿದ್ಯಾರ್ಥಿಗಳಿಂದ ಚಿಕಿತ್ಸೆ ನೀಡುತ್ತಿದ್ದು ರೋಗಿಗಳಲ್ಲಿ ಆತಂಕ ಹೆಚ್ಚಾಗಿದೆ.  ಆಸ್ಪತ್ರೆಯಲ್ಲಿ ಹೆಚ್ಚಿನ ಶುಚಿತ್ವ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಇದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಡೀನ್ ಗೆ ಸಲ್ಲಿಸಿರುವ ಮನವಿಯಲ್ಲಿ ತಾಲೂಕು ಅಧ್ಯಕ್ಷ ಕ್ವಾಲಿಟಿ ‌ನವೀನ್ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲ ತಾಲೂಕು ಪ್ರಧಾನ ಕಾರ್ಯದರ್ಶಿ ಅರ್ಜುನ್ , ಟೌನ್ ಅಧ್ಯಕ್ಷ ಮಹೇಂದ್ರ,ಕಾರ್ಮಿಕ ಘಟಕದ ಹರೀಶ್, ಹೋಬಳಿ ಘಟಕ ಮಂಜು ಹರದನಹಳ್ಳಿ, ನಟರಾಜು, ನಲ್ಲೂರು, ಕಾಡಳ್ಳಿ ಕುಮಾರ್, ಮಾದೇವಸ್ವಾಮಿ , ಸಹಕಾರ್ಯದರ್ಶಿ ವೀರಣ್ಣ ,ರಾಜೇಂದ್ರ, ರಿಜ್ವಾನ್ ,
ಆಟೋ ಘಟಕದ ಮನೋಜ್ ,ಮನು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *