ಚಾಮರಾಜನಗರ: ಕಳೆದ ವರ್ಷ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಪಿಯುμï ಗೋಯಲ್ ಅವರನ್ನು ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ಭೇಟಿ ಮಾಡಿ ಚಾಮರಾಜನಗರ ಜಿಲ್ಲೆಯನ್ನು 'ರಾಷ್ಟ್ರೀಯ ಅರಿಶಿನ ಮಂಡಳಿ'ಯ (ಓಚಿಣioಟಿಚಿಟ ಖಿuಡಿmeಡಿiಛಿ ಃoಚಿಡಿಜ) ವ್ಯಾಪ್ತಿಗೆ ಸೇರಿಸುವಂತೆ ಮನವಿಗೆ ಸ್ಪಂದನೆ ದೊರೆತಿದೆ.
ಅದರಂತೆ 2025-26 ನೇ ಸಾಲಿನಲ್ಲಿ ಕೇಂದ್ರ ಅರಿಶಿನ ಮಂಡಳಿಯ ಕಾರ್ಯಕ್ರಮಗಳನ್ನು ಚಾಮರಾಜನಗರ ಜಿಲ್ಲೆಗೆ ವಿಸ್ತರಿಸಲಾಗಿದ್ದು, 5 ಟರ್ಮರಿಕ್ ಬಾಯ್ಲರ್ ಘಟಕಗಳು, 4 ಪಾಲಿಷರ್‍ಗಳು ಹಾಗೂ 94 ಹೈಜಿನಿಕ್ ಡ್ರೈಯಿಂಗ್ ಸೌಲಭ್ಯಗಳನ್ನು ಮಂಜೂರು ಮಾಡಲಾಗಿದೆ. ಈ ಸೌಲಭ್ಯದ ಮೂಲಕ ಜಿಲ್ಲೆಯ 800ಕ್ಕೂ ಅಧಿಕ ರೈತರಿಗೆ ನೆರವು ಕಲ್ಪಿಸಲಾಗಿದೆ.
ಕ್ಷೇತ್ರದ ಜನತೆಯ ಪರವಾಗಿ ನಮ್ಮ ಈ ಹೆಜ್ಜೆ ಧನಾತ್ಮಕವಾಗಿದ್ದು, ರೈತರ ಮೂಲಭೂತ ಹಾಗೂ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಾವು ಯಶಸ್ಸಿನತ್ತ ಹೆಜ್ಜೆ ಇಡುತ್ತಿದ್ದೇವೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಿದ ಕೇಂದ್ರ ಸಚಿವರಿಗೆ ಕ್ಷೇತ್ರದ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುವುದಾಗಿ ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related