ವಿದ್ಯಾರ್ಥಿಗಳು ದೇಶ ಆಳುವ ನಾಯಕತ್ವ ಗುಣ ಮೈಗೂಡಿಸಿಕೊಳ್ಳಿ : ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ

ಚಾಮರಾಜನಗರ: ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಚುನಾಯಿತ ಪ್ರತಿನಿಧಿ, ಉತ್ತಮ ಸಂಸದೀಯ ಪಟುಗಳಾಗಿ ದೇಶ ಆಳುವಂತಹ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳುವಂತೆ ಪಶುಸಂಗೋಪನೆ, ರೇμÉ್ಮ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

   ನಗರದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ(ಅ.09)ದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಸಹಯೋಗದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಚಾಮರಾಜನಗರ ತಾಲ್ಲೂಕುಮಟ್ಟದ ಯುವ ಸಂಸತ್ ಸಭೆ’ ಕಾರ್ಯಕ್ರಮ ಉದ್ಘಾಟಸಿ ಅವರು ಮಾತನಾಡಿದರು.

   ವಿದ್ಯಾರ್ಥಿಗಳಿಗೆ ವಿಧಾನಸಭೆಯ ಕಾರ್ಯಕಲಾಪಗಳ ಬಗ್ಗೆ ಪ್ರಾಥಮಿಕ ಹಂತದಲ್ಲಿಯೇ ಪ್ರಾಯೋಗಿಕ ಅರಿವು ಮೂಡಿಸುವ ಸದುದ್ದೇಶದೊಂದಿಗೆ ತಾಲ್ಲೂಕುಮಟ್ಟದ ಯುವ ಸಂಸತ್ ಸಭೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಿಂದ ಮಕ್ಕಳಲ್ಲಿ ನಾಯಕತ್ವ ಗುಣಗಳು ವೃದ್ಧಿಸಲಿವೆ. ವಿದ್ಯಾಥೀ ಜೀವನದಲ್ಲಿಯೇ ಪ್ರಜಾಪ್ರಭುತ್ವದ ಮೌಲ್ಯಗಳನ್ನು ವಿದ್ಯಾರ್ಥಿಗಳು ಅರಿಯಬೇಕು. ಸಂವಿಧಾನದ ಅಶಯಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಸಚಿವರು ಕಿವಿಮಾತು ಹೇಳಿದರು

  ಸಚಿವರು ತಮ್ಮ ಸ್ವಂತ ಅನುಭವದ ಮೂಲಕ ವಿಧಾನಸಭೆಯ ಚಿತ್ರಣವನ್ನು ವಿವರಿಸಿ ಮಾತನಾಡಿ ಸರ್ಕಾರದ ಸಂಸತ್ ಸಭೆಯಲ್ಲಿ ಆಡಳಿತ ಪಕ್ಷವು ಸಭಾಧ್ಯಕ್ಷರ ಬಲಭಾಗದಲ್ಲಿ ಹಾಗೂ ವಿರೋಧ ಪಕ್ಷವು ಎಡಭಾಗದಲ್ಲಿ ಆಸೀನರಾಗಿರುತ್ತಾರೆ. ವಿರೋಧ ಪಕ್ಷದ ಸಾಲಿನಲ್ಲಿ ಸಭಾ ಉಪಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಹಾಗೂ ಉಪನಾಯಕರು ಉಪಸ್ಥಿತರಿರುತ್ತಾರೆ. ಸಭೆಯಲ್ಲಿ ರಾಷ್ಟ್ರಗೀತೆ ಹಾಡುವ ಹೇಳುವ ಮೂಲಕ ಕಾರ್ಯಕಲಾಪಗಳು ಪ್ರಾರಂಭಗೊಳ್ಳಲಿವೆ. ಹಾಗೆಯ ಸದಸ್ಯರು ಯಾರಾದರು ಮೃತಪಟ್ಟಿದ್ದಲ್ಲಿ ಅವರಿಗೆ ಸಂತಾಪ ಸೂಚಿಸಲಾಗುತ್ತದೆ ಎಂದರು. 

  ಅಜೆಂಡಾದಂತೆ ಪ್ರಶ್ನೋತ್ತರ ಕಲಾಪಗಳು ನಡೆಯುತ್ತದೆ. ವಿರೋಧ ಪಕ್ಷಕ್ಕೆ ಎಚ್ಚು ತುರ್ತು ವಿಷಯಗಳ ಚರ್ಚೆಗಳಿಗೆ ಅಧ್ಯಕ್ಷರು ಸಮಯ ನಿಗದಿಪಡಿಸಿ ನಿಯಮಾವಳಿಗಳಂತೆ ಅವಕಾಶ ನೀಡುವರು. ವಿಧಾನ ಪರಿಷತ್ತನ್ನು ಚಿಂತಕರ ಚಾವಣಿ  ಎಂದು ಕರೆಯಲಾಗುತ್ತದೆ. 75 ಸದಸ್ಯ ಬಲ ಹೊಂದಿರುವ ಈ ಸದನಕ್ಕೆ ಶಿಕ್ಷಕರು, ಪದವೀಧರರು, ನಾಮನಿರ್ದೇಶಿತ ಹಾಗೂ ಶಾಸಕರ ಕ್ಷೇತ್ರಗಳಿಂದ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಇಲ್ಲಿ ಜವಾಬ್ದಾರಿಯುತ ಹಾಗೂ ವಿಧಾನಸಭೆಯ ವಿಷಯಗಳನ್ನು ದೀರ್ಘಗಾಲ ಚರ್ಚೆಗಳು ನಡೆಯುತ್ತವೆ ಎಂದು ಸಚಿವರು ತಿಳಿಸಿದರು.  

  ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರವಾಗಿಯೇ ಪ್ರಜಾಪ್ರಭುತ್ವವಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವು ಪ್ರಜೆಗಳಿಗೆ ಅಗಾಧ ಶಕ್ತಿಯನ್ನು ನೀಡಿದೆ. ವಿದ್ಯಾರ್ಥಿ ಹಂತದಲ್ಲಿ ಇಂತಹ ಸಭೆ ಹಾಗೂ ಕಲಾಪಗಳ ಬಗ್ಗೆ ತಿಳಿದುಕೊಳ್ಳುವುದು, ಭಾಗವಹಿಸುವುದು ಬಹುಮುಖ್ಯವಾಗಿದೆ. ನಾಳಿನ ದಿನಗಳಲ್ಲಿ ಇದೇ ಯುವಜನತೆ ಶಾಸಕರಾಗಿ, ಸಂಸದರಾಗಿ ನಾಡನ್ನು ಆಳುವ ಸನಾಯಕರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಇದೇ ವೇಳೆ ತಿಳಿಸಿದರು. 

  ನಗರಾಭಿವೃದ್ಧಿ ಪ್ರಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ತಹಶೀಲ್ದಾರರಾದ ಗಿರಿಜಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಿರಿಧರ್, ಭೋಗಪುರದ ಸರ್ಕಾರಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜು  ಪ್ರಾಂಶುಪಾಲರಾದ ಪಿ. ದೇವರಾಜು, ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಅಶ್ವಿನಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮೇಘನಾ, ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮೀನಾಕ್ಷಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಜೈ ಶಂಕರ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆಂಪರಾಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯ ಶಾಸ್ತ್ರ ಮುಖ್ಯ ಶಿಕ್ಷಕರಾದ ಶಿವರಾಜು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *