ಪತ್ರಕರ್ತ ರಂಗಸ್ವಾಮಿ ನಿಧನಕ್ಕೆ ಶ್ರದ್ಧಾಂಜಲಿ

ಚಾಮರಾಜನಗರ: ಜಿಲ್ಲೆಯಲ್ಲಿ ಪ್ರಸಾರ ಹೊಂದಿರುವ ಸುದ್ದಿಸಂಜೆ ಪತ್ರಿಕೆಯ ಯಳಂದೂರು ತಾಲ್ಲೂಕು ವರದಿಗಾರರಾದ ರಂಗಸ್ವಾಮಿ ಅವರ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ರಂಗಸ್ವಾಮಿ ಅವರ ಭಾವಚಿತ್ರಕ್ಕೆ ಸಂಘದ ಪದಾಧಿಕಾರಿಗಳು, ಪತ್ರಕರ್ತರು ಪುಷ್ಪಾರ್ಚನೆ ಸಲ್ಲಿಸಿ, ಮೌನಾಚರಣೆ ಮಾಡುವ ಮೂಲಕ ಅಗಲಿದ ಪತ್ರಕರ್ತ ರಂಗಸ್ವಾಮಿಗೆ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಆರ್.ಎನ್. ಸಿದ್ದಲಿಂಗಸ್ವಾಮಿ ಮಾತನಾಡಿ, ಸುದ್ದಿಸಂಜೆ ಪತ್ರಿಕೆಯ ಯಳಂದೂರು ತಾಲ್ಲೂಕು ವರದಿಗಾರರಾಗಿದ್ದ ಹಾಗೂ ಸಂಘದ ಸದಸ್ಯರಾಗಿದ್ದ ರಂಗಸ್ವಾಮಿ ಅವರ ಅಕಾಲಿಕ ನಿಧನ ಆಘಾತ ಉಂಟುಮಾಡಿದೆ. ದುಃಖದಲ್ಲಿರುವ ಅವರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಸಂತಾಪ ಸೂಚಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಲಕ್ಕೂರು, ನಗರ ಕಾರ್ಯದರ್ಶಿ ಫಾಲಲೋಚನಾ ಆರಾಧ್ಯ, ನಿರ್ದೇಶಕರಾದ ಎಸ್.ಎಂ. ನಂದೀಶ್, ಪ್ರಕಾಶ್ ಬೆಲ್ಲದ್, ಬಿಳಿಗಿರಿ ಶ್ರೀನಿವಾಸ್ ವಿಜಯಕುಮಾರ್, ಬದನಗುಪ್ಪೆ ಮಲ್ಲಣ್ಣ, ಪತ್ರಕರ್ತರಾದ ಕೆ.ಪಿ. ಲಿಂಗಪ್ಪ
ಮಹೇಶ್ ಹರವೆ, ಮಂಜು, ಪ್ರಮೋದ್, ಚರಣ್, ಬಸವರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *