ಅಮಾವಾಸ್ಯೆ ಹಿನ್ನೆಲೆ ಬಸವಮಾರ್ಗದಲ್ಲಿ ಶಿವನಿಗೆ ವಿಶೇಷ ಪೂಜೆ, ಸಾರ್ವಜನಿಕರಿಗೆ ಅನ್ನದಾನ

  • ಧಾರ್ಮಿಕ ಆಚರಣೆಯೊಂದಿಗೆ ಮಾನವೀಯ ಸೇವೆಗೆ ಆದ್ಯತೆ: ಎಸ್. ಬಸವರಾಜು

ಮೈಸೂರು : ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮೈಸೂರಿನ ಹೆಬ್ಬಾಳದಲ್ಲಿರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಿAದ ಶನಿವಾರ ಸಂಜೆ ಶಿವನಿಗೆ ವಿಶೇಷ ಪೂಜೆ ಹಾಗೂ ಸಾರ್ವಜನಿಕರಿಗೆ ಅನ್ನದಾನ ಕಾರ್ಯಕ್ರಮವನ್ನು ಭಕ್ತಿಯಿಂದ ಆರೋಜಿಸಲಾಗಿತ್ತು.

ಅಮಾವಾಸ್ಯೆಯ ಅಂಗವಾಗಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪುರೋಹಿತರಾದ ಸಾಗರ್ ಶರ್ಮ ಅವರು ವಿವಿಧ ಪೂಜೆ ನೆರವೇರಿಸಿದರು. ಲೋಕಕಲ್ಯಾಣಾರ್ಥ ಹಾಗೂ ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದತೆ ನೆಲೆಸಲೆಂದು ಪ್ರಾರ್ಥಿಸಲಾಯಿತು. ಧಾರ್ಮಿಕ ವಿಧಿವಿಧಾನಗಳ ಬಳಿಕ ಸಾರ್ವಜನಿಕರಿಗೆ ಅನ್ನದಾನ ನೆರವೇರಿಸಲಾಯಿತು.

ಮಾನವೀಯ ಮೌಲ್ಯಗಳೇ ಸೇವೆಯ ಮೂಲ
ಈ ಸಂದರ್ಭದಲ್ಲಿ ಮಾತನಾಡಿದ ಬಸವಮಾರ್ಗ ಸಂಸ್ಥೆಯ ಸಂಸ್ಥಾಪಕ ಎಸ್.ಬಸವರಾಜು, ಮಹಾಲಯ ಅಮಾವಾಸ್ಯೆ ಅಥವಾ ಸರ್ವ ಪಿತೃ ಅಮಾವಾಸ್ಯೆಯು ಹಿಂದೂ ಧರ್ಮದಲ್ಲಿ ಪಿತೃಗಳನ್ನು ಸ್ಮರಿಸುವ ಮತ್ತು ಅವರಿಗೆ ತರ್ಪಣ ನೀಡುವ ಅತ್ಯಂತ ಪವಿತ್ರವಾದ ದಿನವಾಗಿದೆ. ಜೊತೆಗೆ ದಾನಧರ್ಮ, ಸೇವೆ ಮತ್ತು ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡುವ ಪವಿತ್ರ ಸಂದರ್ಭವಾಗಿದೆ. ಧಾರ್ಮಿಕ ಆಚರಣೆಗಳು ಕೇವಲ ಪೂಜೆ ಮತ್ತು ಪ್ರಾರ್ಥನೆಗಳಿಗೆ ಸೀಮಿತವಾಗದೆ, ಸಮಾಜಕ್ಕೆ ಒಳಿತು ಮಾಡುವ ಸೇವಾ ಕಾರ್ಯಗಳಿಗೂ ಪ್ರೇರಣೆಯಾಗಬೇಕು. ಹಸಿದವರಿಗೆ ಅನ್ನ ನೀಡುವುದು, ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಹಾಗೂ ಸಮಾಜದಲ್ಲಿ ಪ್ರೀತಿ, ಸಹಕಾರ ಮತ್ತು ಸಹಬಾಳ್ವೆಯ ಮನೋಭಾವವನ್ನು ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಂತಹ ಸೇವಾ ಕಾರ್ಯಗಳು ಸಮಾಜದಲ್ಲಿ ಮಾನವೀಯತೆಯನ್ನು ಬಲಪಡಿಸುತ್ತವೆ ಎಂದು ಅಭಿಪ್ರಾಯಪಟ್ಟರು.

  • ಧಾರ್ಮಿಕ ಚಟುವಟಿಕೆಗಳೊಂದಿಗೆ ಸಮಾಜಮುಖಿ ಸೇವಾ ಕಾರ್ಯಗಳಿಗೂ ಆದ್ಯತೆ ನೀಡುತ್ತಿರುವ ಬಸವಮಾರ್ಗ ಸಂಸ್ಥೆಯು, ಸೇವೆ, ಸಹಾನುಭೂತಿ ಮತ್ತು ಮಾನವೀಯತೆಯ ಮೌಲ್ಯಗಳನ್ನು ಜನರಲ್ಲಿ ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ವ್ಯಸನಮುಕ್ತ ಜೀವನವೆಂಬುದು ವ್ಯಕ್ತಿಯೊಬ್ಬರ ಬದುಕಿನ ಬದಲಾವಣೆಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಇಡೀ ಕುಟುಂಬದ ನೆಮ್ಮದಿ ಮತ್ತು ಸಮಾಜದ ಆರೋಗ್ಯಕ್ಕೂ ಸಂಬAಧಿಸಿದೆ. ಈ ನಿಟ್ಟಿನಲ್ಲಿ ಬಸವಮಾರ್ಗ ಕೇಂದ್ರವು ಶಿಬಿರಾರ್ಥಿಗಳಲ್ಲಿ ಉತ್ತಮ ಚಿಂತನೆ, ಶಿಸ್ತು, ಆತ್ಮವಿಶ್ವಾಸ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರವು ವ್ಯಸನದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೂಕ್ತ ಮಾರ್ಗದರ್ಶನ, ಸಮಾಲೋಚನೆ ಹಾಗೂ ಪುನರ್ವಸತಿ ಸೇವೆಗಳ ಮೂಲಕ ಹೊಸ ಬದುಕು ಕಟ್ಟಿಕೊಳ್ಳಲು ನೆರವಾಗುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ಮಹೇಶ್, ಸಿಬ್ಬಂದಿ ಮಂಜುನಾಥ್, ಲಕ್ಷಣ್, ಬಸವರಾಜು, ಆನಂದ್, ರಾಘು, ಮೋಹನ್ ಸಂಜಯ್, ಅಭಿಶೇಕ್, ರಕ್ಷಿತ್, ಪ್ರೀತಮ್, ಶಶಾಂಕ್, ರಾಜು ಇತರರು ಇದ್ದರು.

Leave a Reply

Your email address will not be published. Required fields are marked *