ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗಡಿ ತಮಿಳುನಾಡು ರಾಜ್ಯದ ನೀಲಗಿರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ನೀಲಗಿರಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ತಮಿಳುನಾಡು ಸರ್ಕಾರ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಮಳೆ ನಿಲ್ಲುವ ತನಕ ಚಾಮರಾಜನಗರ ಜಿಲ್ಲೆಯ ನಾಗರಿಕರು ಸದರಿ ಸ್ಥಳಗಳಿಗೆ ಪ್ರವಾಸ ಕೈಗೊಳ್ಳದಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ (ದಿನಾಂಕ:25-05-2025 ರಿಂದ) ಚಾಮರಾಜನಗರ ಜಿಲ್ಲೆಯ ಗಡಿ ತಮಿಳುನಾಡು ರಾಜ್ಯದ ನೀಲಗಿರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ನೀಲಗಿರಿ ಜಿಲ್ಲೆಯ ಪ್ರವಾಸಿ ತಾಣಗಳಾದ ದೊಡ್ಡಬೆಟ್ಟ, ಪೈನ್ ಫಾರೆಸ್ಟ್, ಲ್ಯಾಂಬ್ ರಾಕ್, ಅವಲಂಚಿ, 9ನೇ ಮೈಲ್ ಶೂಟಿಂಗ್ ಪಾಯಿಂಟ್, ಬೋಟ್ ಹೌಸ್, ಪೈಕಾರ ಮತ್ತು ಊಟಿ ಸ್ಥಳಗಳಿಗೆ ಪ್ರವಾಸಿಗರನ್ನು ಮೇ 26 ರಂದು ತಮಿಳುನಾಡು ಸರ್ಕಾರವು ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ನಾಗರಿಕರು ಸದರಿ ಸ್ಥಳಗಳಿಗೆ ಮಳೆ ನಿಲ್ಲುವ ತನಕ ಪ್ರವಾಸ ಕೈಗೊಳ್ಳದಂತೆ ಎಚ್ಚರಿಕೆ ವಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿಯ ವಿಪತ್ತು ನಿರ್ವಹಣಾ ಕೊಠಡಿಯ ಟೋಲ್ ಫ್ರೀ ದೂರವಾಣಿ ಸಂಖ್ಯೆ 1077, ವಿಪತ್ತು ನಿರ್ವಹಣಾ ಕೊಠಡಿಯ ವ್ಯಾಟ್ಸಪ್ ಸಂಖ್ಯೆ 9740942901, ಸ್ಥಿರ ದೂರವಾಣಿ ಸಂಖ್ಯೆ 08226-223160, 08226-223161, 08226-223163 ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಶಿಲ್ಪಾ ನಾಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related